ಹೇರ್ ಡೈ ಬೇಡ! ಟೊಮೇಟೊ ಬಳಸಿ ಬಿಳಿ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಗಾಢ ಕಪ್ಪಾಗಿಸಿ

Written ByYashaswini V
Published: Oct 23, 2025, 12:12 PM IST|Updated: Oct 23, 2025, 12:27 PM IST

White Hair Remedies: ಕಾಂತಿಯುತವಾದ ಉದ್ದ ಕಪ್ಪು ಕರಿಮಣಿಯಂತಹ ಕೂದಲನ್ನು ಹೊಂದಲು ಬಯಸುವಿರಾ... ಇದಕ್ಕಾಗಿ ಹೇರ್ ಡೈ ಬೇಕಾಗಿಲ್ಲ. ನಿಮ್ಮ ಮನೆಯಲ್ಲಿರುವ ಒಂದು ತರಕಾರಿ ಸಾಕು. 

Gray Hair Remedies: ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಿದೆ. ಆದರೆ, ಇದಕ್ಕಾಗಿ ದುಬಾರಿ ಹೇರ್ ಡೈಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಇಲ್ಲ. ಬದಲಿಗೆ ಮನೆಯಲ್ಲಿಯೇ ತಯಾರಿಸಿ ಬಳಸಬಹುದಾದ ಹೇರ್ ಪ್ಯಾಕ್ ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುತ್ತದೆ. 

Tomato for white hair1/6

ಬಿಳಿ ಕೂದಲಿಗೆ ಮನೆಮದ್ದು

ನೀವು ಬಿಳಿ ಕೂದಲಿನ ಸಮಸ್ಯೆಯಿಂದ ಬೇಸತ್ತಿದ್ದೀರಾ... ಹೌದು, ಎಂದಾದರೆ ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಬಳಕೆಗೆ ಈಗಲೇ ಗುಡ್ ಬೈ ಹೇಳಿ. ಬದಲಿಗೆ ನಿಮ್ಮ ಅಡುಗೆಮನೆಯಲ್ಲಿರುವ ತರಕಾರಿಗಳ ರಾಣಿ ಟೊಮೇಟೊ ಬಲಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.  

Tomato for white hair2/6

ಬಿಳಿ ಕೂದಲಿಗೆ ಟೊಮೇಟೊ

ಆಹಾರದ ರುಚಿ ಹೆಚ್ಚಿಸುವ ಟೊಮೇಟೊ ಹಣ್ಣಿನಲ್ಲಿ ಕೂದಲಿನ ಆರೋಗ್ಯಕ್ಕೆ ಅವಶ್ಯಕವಾದ ಹಾಗೂ ಕೂದಲನ್ನು ಬೇರುಗಳಿಂದ ಪೋಷಿಸುವ ಪೋಷಕಾಂಶಗಳ ಆಗರವೇ ಅಡಕವಾಗಿದೆ.  ಟೊಮಾಟೊದಲ್ಲಿ ಕಂಡು ಬರುವ ವಿಟಮಿನ್ಸ್, ಆಂಟಿ ಆಕ್ಸಿಡೆಂಟ್ಸ್, ಮೆಗ್ನೀಶಿಯಮ್, ಪೊಟ್ಯಾಸಿಯಮ್, ಫೈಬರ್, ಐರನ್'ಗಳಂತಹ ಪೋಷಕಾಂಶಗಳು ಬೇರುಗಳಿಂದ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸುತ್ತದೆ.  

Tomato for white hair3/6

ಬಿಳಿ ಕೂದಲಿಗೆ ಟೊಮೇಟೊ ಬಳಕೆ

ಕೂದಲಿನ ಬುಡಕ್ಕೆ ಟೊಮೇಟೊ ರಸ ಹಚ್ಚುವುದರಿಂದ ಇದು ನೆತ್ತಿಯ pH ಮಟ್ಟವನ್ನು ಸುಧಾರಿಸುವುದರ ಜೊತೆಗೆ ಬೇರುಗಳಿಂದ ಕೂದಲನ್ನು ಗಟ್ಟಿಗೊಳಿಸಿ ಹೇರ್ ಫಾಲ್ ಗೆ ಕಡಿವಾಣ ಹಾಕುತ್ತದೆ. ಅಲ್ಲದೆ, ಇದು ಕೂದಲು ಕಪ್ಪಾಗಲು ಅಗತ್ಯವಾದ ಮೆಲನಿನ್ ಉತ್ಪಾದನೆಯನ್ನು ಕೂಡ ಪ್ರಚೋದಿಸುತ್ತದೆ.  

Tomato for white hair4/6

ಟೊಮೇಟೊ ಹೇರ್ ಪ್ಯಾಕ್

ಟೊಮೇಟೊ ಹೇರ್ ಪ್ಯಾಕ್ ತಯಾರಿಸಲು ನಿಮ್ಮ ಕೂದಲಿಗೆ ಅಗತ್ಯವಿರುವಷ್ಟು ಟೊಮೇಟೊ ರಸ ಹಾಗೂ ಇನ್ಸ್ಟಾಂಟ್ ಕಾಫಿ ಪುಡಿ ಅಗತ್ಯವಿದೆ.   

Tomato for white hair5/6

ಬಿಳಿ ಕೂದಲಿಗೆ ಟೊಮೇಟೊ ಹೇರ್ ಪ್ಯಾಕ್

ಮೊದಲೇ ತಿಳಿಸಿದಂತೆ ನಿಮ್ಮ ಕೂದಲಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಟೊಮೇಟೊ ರಸ ತೆಗೆದುಕೊಂಡು ಅದರಲ್ಲಿ ಕಾಫಿ ಪುಡಿ ಬೇರೆಸ್ ಹತ್ತಿ ಉಂಡೆಯ ಸಾಯದಿಂದ ಈ ಹೇರ್ ಪ್ಯಾಕ್ ಅನ್ನು ಕೂದಲಿನ ಬುಡಕ್ಕೆ ಸಂಪೂರ್ಣವಾಗಿ ಅಪ್ಲೈ ಮಾಡಿ. ಒಂದೆರಡು ಗಂಟೆ ಹಾಗೇ ಬಿಟ್ಟು ನಂತರ ಸೌಮ್ಯ ಶಾಂಪೂ, ಉಗುರು ಬೆಚ್ಚಗಿನ ನೀರನ್ನು ಬಳಸಿ ಹೇರ್ ವಾಶ್ ಮಾಡಿ.  

Tomato for white hair6/6

ಬಿಳಿ ಕೂದಲಿಗೆ ಮನೆಮದ್ದು

ಟೊಮೇಟೊ ತಾಜಾ ರಸವನ್ನು ಕಾಫಿ ಪುಡಿಯೊಂದಿಗೆ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಬೆಳ್ಳಗಿರುವ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.