"ನಾನು ಕ್ರಿಶ್ಚಿಯನ್ ಹುಡುಗನ್ನ ಮದುವೆಯಾಗಬೇಕು ಅಂದ್ಕೊಂಡಿದ್ದೆ"- ನಿವೇದಿತಾ ಗೌಡ ಶಾಕಿಂಗ್‌ ಹೇಳಿಕೆ ವೈರಲ್!

Published: Jun 10, 2025, 04:12 PM IST|Updated: Jun 10, 2025, 04:12 PM IST

Niveditha Gowda video: ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಹೊಂದಾಣಿಕೆ ಆಗ್ತಿಲ್ಲ ಎಂಬ ಕಾರಣಕ್ಕೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್‌ ನೀಡಿರುವ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ. ಇದೀಗ ಇಬ್ಬರೂ ಸಹ ಅವರವರ ದಾರಿ ಹಿಡಿದಿದ್ದು, ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. 

 

Niveditha Gowda video1/6

ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಹೊಂದಾಣಿಕೆ ಆಗ್ತಿಲ್ಲ ಎಂಬ ಕಾರಣಕ್ಕೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್‌ ನೀಡಿರುವ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ. ಇದೀಗ ಇಬ್ಬರೂ ಸಹ ಅವರವರ ದಾರಿ ಹಿಡಿದಿದ್ದು, ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. 

 

Niveditha Gowda video2/6

ಹೀಗಿರುವಾಗ ನಿವೇದಿತಾ ಗೌಡ ಅವರ ವಿಡಿಯೋವೊಂದು ವೈರಲ್‌ ಆಗಿದೆ. ಆದರೆ ಇದು ಹಳೆಯ ವಿಡಿಯೋ ಆಗಿದ್ದು, ಅದರಲ್ಲಿ, ಹಳೆಯ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. 

 

Niveditha Gowda video3/6

ನಿವೇದಿತಾ ಗೌಡ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ. ಆ ಯೂಟ್ಯೂಬ್‌ ಚಾನೆಲ್‌ನಲ್ಲಿ 3 ವರ್ಷಗಳ ಹಿಂದೆ ನಿವೇದಿತಾ ಒಂದು ವಿಡಿಯೋ ಶೇರ್‌ ಮಾಡಿದ್ದರು. ‘ಮೈ ಗೌನ್‌ ಕಲೆಕ್ಷನ್‌’ ಎಂಬ ವಿಡಿಯೋದ ಅದಾಗಿದ್ದು, ಅದರಲ್ಲಿ ತಮ್ಮ ಬಳಿ ಇರುವ ಗೌನ್‌ಗಳ ಬಗ್ಗೆ ವಿವರಿಸಿದ್ದರು. ಇನ್ನು ಅದೇ ವಿಡಿಯೋದಲ್ಲಿ ತಮ್ಮ ವೆಡ್ಡಿಂಗ್ ಗೌನ್‌ ಬಗ್ಗೆಯೂ ನಿವೇದಿತಾ ಗೌಡ ಮಾತನಾಡಿದ್ದರು. 

 

Niveditha Gowda video4/6

2020ರಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿವಾಹವಾಗಿದ್ದರು. ಮದುವೆಯ ಅದ್ಧೂರಿ ರಿಸೆಪ್ಶನ್‌ ಸಂದರ್ಭದಲ್ಲಿ ಚಂದನ್ ಶೆಟ್ಟಿ ಸೂಟ್‌ ಧರಿಸಿದ್ದರೆ, ನಿವೇದಿತಾ ಗೌಡ ಗೌನ್ ಧರಿಸಿದ್ದರು. 

 

Niveditha Gowda video5/6

ಆ ಗೌನ್‌ ಬಗ್ಗೆ ಮಾತನಾಡಿ, ‘’ಇದು ನನ್ನ ರಿಸೆಪ್ಷನ್‌ ಗೌನ್‌. ಇದನ್ನ ನನ್ನ ರಿಸೆಪ್ಷನ್‌ಗೆ ಬಿಟ್ಟು ನಾನು ಇನ್ನೆಲ್ಲೂ ಹಾಕೊಂಡಿಲ್ಲ. ನಾನು ಇದನ್ನ ಲಿಫ್ಟ್ ಮಾಡೋದಕ್ಕೂ ಸಾಧ್ಯವಿಲ್ಲ. ಅಷ್ಟು ಭಾರ ಇದೆ’’ ಎಂದು ಹೇಳಿದ್ದರು. 

 

Niveditha Gowda video6/6

"ನನ್ನ ಈ ರಿಸೆಪ್ಷನ್‌ ಗೌನ್‌ ನೋಡಿದ್ರೆ, ನನಗೆ ನನ್ನ ಚೈಲ್ಡ್‌ಹುಡ್‌ ನೆನಪಾಗುತ್ತದೆ. ನಾನು ಕ್ರಿಶ್ಚಿಯನ್‌ ಆಗಬೇಕು, ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗಬೇಕು ಅಂತೆಲ್ಲಾ ಆಸೆಪಟ್ಟಿದ್ದೆ. ಯಾಕಂದ್ರೆ, ಕ್ರಿಶ್ಚಿಯನ್‌ನ ಮದುವೆಯಾದರೆ ಮದುವೆಯಲ್ಲಿ ಗೌನ್ ಹಾಕಿಕೊಳ್ಳಬಹುದು ಅಂತ ನನ್ನ ಭಾವನೆ’’ ಎಂದಿದ್ದರು. ಸದ್ಯ ನಿವೇದಿತಾ ಗೌಡ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.