White Hair Remedy: ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ಯಾವುದೆ ಬ್ರ್ಯಾಂಡೆಡ್ ಹೇರ್ ಡೈ ಖಂಡಿತ ಬೇಡ... ಪ್ರತಿ ಮನೆಯಲ್ಲೂ ಯತೇಚ್ಚವಾಗಿ ಬಳಸುವ ಈರುಳ್ಳಿಯಿಂದ ಬೂದು/ಬಿಳಿ ಕೂದಲಿನಿಂದ ತುಂಬಾ ಸುಲಭವಾಗಿ ಪರಿಹಾರ ಪಡೆಯಬಹುದು.
ಬಿಳಿ ಕೂದಲನ್ನು ಮರಳಿ ಕಪ್ಪು ಬಣ್ಣಕ್ಕೆ ತಿರುಗಿಸಲು ದುಬಾರಿ ಹೇರ್ ಡೈ ಅಥವಾ ಬೇರಾವುದೇ ಅಡ್ಡಪರಿಣಾಮ ಉಂಟು ಮಾಡುವ ಕೇಶ ಉತ್ಪನ್ನಗಳನ್ನು ಬಳಸುವ ಅಗತ್ಯವೇ ಇಲ್ಲ. ನೀವು ಅಡಿಗೆಯ ಸ್ವಾದ ಹೆಚ್ಚಿಸಲು ಬಳಸುವ ʼಈರುಳ್ಳಿʼಯಲ್ಲಿ ಬಿಳಿ ಕೂದಲನ್ನು ಗಾಢ ಕಪ್ಪಾಗಿಸುವ ಗುಣವಿದೆ.
ಈರುಳ್ಳಿಯಲ್ಲಿರುವ ಸಲ್ಫರ್ ಗುಣವು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸುವುದರ ಜೊತೆಗೆ ಕೂದಲಿನ ಬೇರುಗಳಲ್ಲಿ ಕಾಲಜನ್ ಉತ್ಪಾದನೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವಲ್ಲಿ ಪರಿಣಾಮಕಾರಿ ಔಷಧಿಯಂತೆ ವರ್ತಿಸುತ್ತದೆ.
ಈರುಳ್ಳಿ ಬಿಳಿ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ ಇದು ನೆತ್ತಿಯಲ್ಲಿ ರಕ್ತಸಂಚಲನವನ್ನು ಹೆಚ್ಚಿಸುವುದರಿಂದ ಕೂದಲು ಆರೋಗ್ಯಕರವಾಗಿ ದಪ್ಪವಾಗಿ, ಕಾಂತಿಯುತವಾಗಿ ಬೆಳೆಯಲು ಸಹಕಾರಿ ಆಗಿದೆ. ಅಲ್ಲದೆ, ತಲೆಹೊಟ್ಟು, ತಲೆ ತುರಿಕೆಯಿಂದಲೂ ಪರಿಹಾರ ನೀಡುತ್ತದೆ.
ಮೊದಲಿಗೆ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಅದನ್ನು ತುರಿದುಕೊಳ್ಳಿ. ಬಳಿಕ ಶುದ್ಧ ಬಟ್ಟೆಯ ಸಹಾಯದಿಂದ ಈರುಳ್ಳಿ ರಸ ತೆಗೆದುಕೊಳ್ಳಿ. ಈ ರಸವನ್ನು ಕೂದಲಿನ ಬುಡಕ್ಕೆ ಲೇಪಿಸಿ ಮಸಾಜ್ ಮಾಡಿ.
ಈರುಳ್ಳಿ ರಸವನ್ನು ಕೂದಲಿಗೆ ಲೇಪಿಸಿದ ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ. ಈರುಳ್ಳಿ ವಾಸನೆ ಹೋಗಲಾಡಿಸಲು ಬೇಕಿದ್ದರೆ ಎರಡು ಬಾರಿ ನೀರಿನಿಂದ ಚೆನ್ನಾಗಿ ಹೇರ್ ವಾಶ್ ಮಾಡಿ.
ವಾರಕ್ಕೆ ಎರಡು ಬಾರಿ ಈರುಳ್ಳಿ ರಸವನ್ನು ಈ ರೀತಿ ಹೇರ್ ಮಾಸ್ಕ್ ಆಗಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ ಭವಿಷ್ಯದಲ್ಲಿ ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಬಹುದು. ಅಲ್ಲದೆ, ಕೆಲವೇ ದಿನಗಳಲ್ಲಿ ಉದ್ದ, ಕಾಂತಿಯುತ ಕೂದಲು ನಿಮ್ಮದಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.