ಹೇರ್‌ ಡೈ ಅಲ್ಲ.. ಎರಡೇ ನಿಮಿಷದಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಯಲ್ಲಿ ಈ ಸಿಪ್ಪೆ ಮಿಕ್ಸ್‌ ಮಾಡಿ ಹಚ್ಚಿ ನೋಡಿ

Written ByYashaswini V
Published: Dec 29, 2025, 12:05 PM IST|Updated: Dec 29, 2025, 12:05 PM IST

White Hair Remedy: ಕಸದಿಂದ ರಸ ಎಂಬಂತೆ ನೀವು ಕಸ ಎಂದು ಬಿಸಾಡುವ ಸಿಪ್ಪೆಯ ಸಹಾಯದಿಂದ ಬಿಳಿ ಕೂದಲನ್ನು ಗಾಢ ಕಪ್ಪಾಗಿಸಬಹುದು. 

Natural white hair remedy1/6

ಬಿಳಿ ಕೂದಲಿಗೆ ಮನೆಮದ್ದು

ಬಿಳಿ ಕೂದಲನ್ನು ಕಪ್ಪಾಗಿಸಲು ಯಾವುದೇ ಹೇರ್‌ ಡೈ ಬಳಸುವ ಅಗತ್ಯವಿಲ್ಲ. ಬದಲಿಗೆ ತೆಂಗಿನೆಣ್ಣೆಯಲ್ಲಿ ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆ ಬಳಸಿದರೆ ನೈಸರ್ಗಿಕವಾಗಿ ಬಿಳಿ ಕೂದಲನ್ನು ಗಾಢ ಕಪ್ಪಾಗುವಂತೆ ಮಾಡಬಹುದು. 

Natural white hair remedy2/6

ಬಿಳಿ ಕೂದಲಿಗೆ ಮನೆಮದ್ದು

ತೆಂಗಿನೆಣ್ಣೆ ಬಳಕೆಯಿಂದ ನೆತ್ತಿಯಲ್ಲಿ ತೇವಾಂಶ ಕಾಪಾಡಿಕೊಳ್ಳುವುದರ ಜೊತೆಗೆ ಕೂದಲು ಉದುರುವಿಕೆ, ಡ್ಯಾಂಡ್ರಫ್‌, ಕಳೆಗುಂದಿದ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

Natural white hair remedy3/6

ಬಿಳಿ ಕೂದಲಿಗೆ ಮನೆಮದ್ದು

ಈರುಳ್ಳಿಯಂತೆಯೇ ಈರುಳ್ಳಿ ಸಿಪ್ಪೆಯೂ ಕೂಡ ಕೂದಲಿಗೆ ಅಗತ್ಯ ಪೋಷಣೆಯನ್ನು ಒದಗಿಸುತ್ತದೆ. ಜೊತೆಗೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಬೇಕಾದ ಮೆಲನಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ. 

Natural white hair remedy4/6

ಬಿಳಿ ಕೂದಲಿಗೆ ಮನೆಮದ್ದು

ಯಾವುದೇ ಹೇರ್‌ ಡೈ ಇಲ್ಲದೆ, ಬಿಳಿ ಕೂದಲನ್ನು ಎರಡೇ ನಿಮಿಷದಲ್ಲಿ ಕಪ್ಪಾಗಿಸಲು ಸ್ವಲ್ಪ ತೆಂಗಿನೆಣ್ಣೆ ಹಾಗೂ ಈರುಳ್ಳಿ ಸಿಪ್ಪೆ ಬೇಕಾಗುತ್ತದೆ. 

Natural white hair remedy5/6

ಬಿಳಿ ಕೂದಲಿಗೆ ಮನೆಮದ್ದು

ಮೊದಲಿಗೆ ಒಂದು ಕಪ್‌ನಷ್ಟು ಈರುಳ್ಳಿ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಒಂದು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಅದು ಕಪ್ಪಾಗುವವರೆಗೂ ಹುರಿಯಿರಿ. ಬಳಿಕ ಅದನ್ನು ಪುಡಿಮಾಡಿಕೊಳ್ಳಿ.

Natural white hair remedy6/6

ಬಿಳಿ ಕೂದಲಿಗೆ ಮನೆಮದ್ದು

ಫ್ರೈ ಮಾಡಿ ಪುಡಿ ಮಾಡಿಕೊಂಡ ಈರುಳ್ಳಿ ಸಿಪ್ಪೆಯಲ್ಲಿ ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚಿದರೆ ಎರಡೇ ಎರಡು ನಿಮಿಷಗಳಲ್ಲಿ ನಿಮ್ಮ ಬೆಳ್ಳಗಿರುವ ಕೂದಲು ತ್ವರಿತವಾಗಿ ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.