ಪಾಕಿಸ್ತಾನದಲ್ಲಿ ಐಶ್ವರ್ಯಾ ರೈ..? ವೇಷಭೂಷಣ ಕಂಡು ದಂಗಾದ್ರು ಫ್ಯಾನ್ಸ್ !
Aishwarya Rai Bachchan: ನಟಿ ಐಶ್ವರ್ಯಾ ರೈ ವಿಚ್ಛೇದನ ವದಂತಿಯಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಪಾಕಿಸ್ತಾನದಲ್ಲಿ ಐಶ್ವರ್ಯಾ ರೈ ಪ್ರತ್ಯಕ್ಷವಾದ ಫೋಟೋ ವೈರಲ್ ಆಗುತ್ತಿದೆ.
ನಟಿ ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟ ಪಡೆದ ಬ್ಯೂಟಿ ಕ್ವೀನ್. ಸೌಂದರ್ಯಕ್ಕೆ ಅನ್ವರ್ಥನಾಮವೇ ಐಶ್ವರ್ಯಾ ರೈ. ತಮಿಳಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಐಶ್ವರ್ಯಾ ರೈ ನಟನೆ ಮತ್ತು ಅಂದದ ಮೂಲಕ ಸಾಕಷ್ಟು ಪ್ರಸಿದ್ಧರಾದರು.
ಈ ವಯಸ್ಸಿನಲ್ಲೂ ಹಲವು ವಿದೇಶಿ ಚಿತ್ರೋತ್ಸವಗಳಲ್ಲಿ ಭಾಗಿಯಾಗುತ್ತಾರೆ. ಇದರ ಬೆನ್ನಲ್ಲೇ ಇದೀಗ ಆಕೆಯಂತೆಯೇ ಕಾಣುವ ಪಾಕಿಸ್ತಾನಿ ಮಹಿಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೀಗ ಮಹಿಳೆಯೊಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರು ಐಶ್ವರ್ಯಾ ರೈ ಅಂತೆಯೇ ಕಾಣುತ್ತಾರೆ.
ಈ ಮಹಿಳೆ ಪಾಕಿಸ್ತಾನದವರು. ಅವರ ಹೆಸರು ಕನ್ವಾಲ್ ಚೀಮಾ. ಐಶ್ವರ್ಯಾ ರೈ ಅವರಂತೆಯೇ ಎತ್ತರ, ಮುಖದ ಚೆಹರೇ ಯನ್ನು ಹೋಲುತ್ತಾರೆ. ಅವರ ಧ್ವನಿಯೂ ಐಶ್ವರ್ಯಾ ರೈ ಅವರಂತೆಯೇ ಇರುವುದು ಮತ್ತೊಂದು ವಿಶೇಷವಾಗಿದೆ .
ಇಸ್ಲಾಮಾಬಾದ್ ನಲ್ಲಿ ನೆಲೆಸಿರುವ ಈಕೆ ಇತ್ತೀಚೆಗೆ ತನ್ನ ಪೋಷಕರೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು ಎನ್ನಲಾಗಿದೆ. ಅವಳನ್ನು ನೋಡಿದ ಅನೇಕರು "ಪಾಕಿಸ್ತಾನಿ ಐಶ್ವರ್ಯಾ ರೈ" ಎಂದು ಕರೆಯುತ್ತಾರೆ.
ಇದೀಗ ಈ ಹುಡುಗಿಯ ಫೋಟೋವನ್ನು ಐಶ್ವರ್ಯಾ ರೈ ಜೊತೆ ಹೋಲಿಸಿ ಹಲವರು ವೈರಲ್ ಮಾಡುತ್ತಿದ್ದಾರೆ.