ಪಿಂಚಣಿದಾರರಿಗೆ 20% ಪಿಂಚಣಿ ಹೆಚ್ಚಿಸಿ ಸರ್ಕಾರದ ಅಧಿಸೂಚನೆ ಪ್ರಕಟ : ಯಾರಿಗೆ ಎಷ್ಟು ಪಿಂಚಣಿ ಸಂಪೂರ್ಣ ವಿವರ ಇಲ್ಲಿದೆ

Written ByRanjitha R K
Published: Aug 14, 2025, 07:05 PM IST|Updated: Aug 14, 2025, 07:05 PM IST

ಪಿಂಚಣಿಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ  ಪಿಂಚಣಿ ಸಚಿವಾಲಯ ಅಧಿಸೂಚನೆ ಕೂಡಾ ಪ್ರಕಟಿಸಿದೆ. 
ಪಿಂಚಣಿದಾರರಿಗೆ ಇದು ನಿಜವಾಗಿಯೂ ಸಿಹಿ ಸುದ್ದಿ .  
 

 Higher Pension 1/7

ಪಿಂಚಣಿ ಹೆಚ್ಚಳ

ಪಿಂಚಣಿದಾರರಿಗೆ ಇದು ಸಂತಸದ ವಿಷಯ. ಪಿಂಚಣಿಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 

 Higher Pension 2/7

ಪಿಂಚಣಿ ಹೆಚ್ಚಳ

CCS (ಪಿಂಚಣಿ) ನಿಯಮಗಳು 2021 ರ ನಿಯಮ 44 ರ ಉಪ-ನಿಯಮ 6 ರ ನಿಬಂಧನೆಗಳ ಪ್ರಕಾರ, ಪಿಂಚಣಿ ಮತ್ತು ಅನುಕಂಪದ ಭತ್ಯೆಯನ್ನು ಬಿಡುಗಡೆ ಮಾಡಿದೆ.

 Higher Pension 3/7

ಪಿಂಚಣಿ ಹೆಚ್ಚಳ

ನಿವೃತ್ತ ಸರ್ಕಾರಿ ನೌಕರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ  ಅನುಕಂಪದ ಭತ್ಯೆ ಪಡೆಯುತ್ತಾರೆ. 80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 20 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿರುತ್ತಾರೆ. 

 Higher Pension 4/7

ಪಿಂಚಣಿ ಹೆಚ್ಚಳ

85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ ಶೇಕಡಾ 30 ರಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.90 ರಿಂದ 95 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 40 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 

 Higher Pension 5/7

ಪಿಂಚಣಿ ಹೆಚ್ಚಳ

95 ರಿಂದ 100 ವರ್ಷ ವಯಸ್ಸಿನ ಹಿರಿಯ ನಾಗರಿಕರು 50 ಪ್ರತಿಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ 100 ಪ್ರತಿಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.  

 Higher Pension 6/7

ಪಿಂಚಣಿ ಹೆಚ್ಚಳ

ಪಿಂಚಣಿದಾರರು ನಿಗದಿತ ವಯಸ್ಸನ್ನು ತಲುಪಿದ ಮೊದಲ ದಿನದಿಂದಲೇ ಹೆಚ್ಚುವರಿ ಪಿಂಚಣಿ  ಅನ್ವಯವಾಗಲಿದೆ.  ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ  ಅಧಿಸೂಚನೆ ಹೊರಡಿಸಿದೆ.    

 Higher Pension 7/7

ಪಿಂಚಣಿ ಹೆಚ್ಚಳ

ಇನ್ನು ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿ ಪೂರೈಕೆಯಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಹೊಸ ಪಿಂಚಣಿ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲು ಸೂಚಿಸಲಾಗಿದೆ.