ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಪಿಂಚಣಿ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೆಚ್ಚುವರಿ ಪಿಂಚಣಿ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು : CCS (ಪಿಂಚಣಿ) ನಿಯಮಗಳು 2021ರ ನಿಯಮ 44ರ ಉಪ-ನಿಯಮ 6ರ ನಿಬಂಧನೆಗಳ ಪ್ರಕಾರ, ನಿವೃತ್ತ ಸರ್ಕಾರಿ ನೌಕರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ನಂತರ ನಿಯಮಗಳ ಅಡಿಯಲ್ಲಿ ಪಿಂಚಣಿ ಮತ್ತು ಅನುಕಂಪದ ಭತ್ಯೆಗೆ ಅರ್ಹರಾಗಿರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರವು ಈಗ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಪ್ರಯೋಜನವನ್ನು ಘೋಷಿಸಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಈ ಕುರಿತಂತೆ ಅಧಿಸೂಚನೆ ಹೊರಡಿಸಿದೆ.
80 ವರ್ಷ ವಯಸ್ಸಿನ ನಿವೃತ್ತ ಕೇಂದ್ರ ಸರ್ಕಾರಿ ನಾಗರಿಕ ಸೇವಾ ನೌಕರರಿಗೆ ಪಿಂಚಣಿ ಸಚಿವಾಲಯವು ಪಿಂಚಣಿ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
CCS (ಪಿಂಚಣಿ) ನಿಯಮಗಳು 2021ರ ನಿಯಮ 44ರ ಉಪ-ನಿಯಮ 6ರ ನಿಬಂಧನೆಗಳ ಪ್ರಕಾರ, ನಿವೃತ್ತ ಸರ್ಕಾರಿ ನೌಕರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ನಂತರ ನಿಯಮಗಳ ಅಡಿಯಲ್ಲಿ ಪಿಂಚಣಿ ಮತ್ತು ಅನುಕಂಪದ ಭತ್ಯೆಗೆ ಅರ್ಹರಾಗಿರುತ್ತಾರೆ.
80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 20 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿರುತ್ತಾರೆ. 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ ಶೇಕಡಾ 30 ರಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.
90 ರಿಂದ 95 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿಯ 40 ಪ್ರತಿಶತದಷ್ಟು ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 95 ರಿಂದ 100 ವರ್ಷ ವಯಸ್ಸಿನ ಹಿರಿಯ ನಾಗರಿಕರು 50 ಪ್ರತಿಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ 100 ಪ್ರತಿಶತ ಹೆಚ್ಚುವರಿ ಪಿಂಚಣಿ ಪಡೆಯುತ್ತಾರೆ.
ಪಿಂಚಣಿದಾರರು ನಿಗದಿತ ವಯಸ್ಸನ್ನು ತಲುಪಿದ ಮೊದಲ ದಿನದಿಂದಲೇ ಹೆಚ್ಚುವರಿ ಪಿಂಚಣಿ ಅಥವಾ ಅನುಗ್ರಹ ಭತ್ಯೆ ಜಾರಿಗೆ ಬರಲಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಧಿಸೂಚನೆ ತಿಳಿಸಿದೆ.
ಪಿಂಚಣಿ ಮತ್ತು ಪಿಂಚಣಿ ಪೂರೈಕೆಯಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕ್‌ಗಳು ಹೊಸ ಪಿಂಚಣಿ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲು ಸೂಚಿಸಲಾಗಿದೆ. ಎಲ್ಲಾ ಅರ್ಹ ಪಿಂಚಣಿದಾರರು ವಿಳಂಬವಿಲ್ಲದೆ ಸರಿಯಾದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಇದು ಖಚಿತಪಡಿಸುತ್ತದೆ.