ಈ ತಿಂಗಳಿನಿಂದ ಪಿಎಫ್ ಸದಸ್ಯರ ಮಾಸಿಕ ಪಿಂಚಣಿಯಲ್ಲಿ 3 ಪಟ್ಟು ಹೆಚ್ಚಳ!ಸರ್ಕಾರದ ಮಹತ್ವದ ನಿರ್ಧಾರ

Written ByRanjitha R K
Published: Aug 05, 2025, 09:42 AM IST|Updated: Aug 05, 2025, 09:42 AM IST

ಪಿಎಫ್ ಸದಸ್ಯರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರ ಬಳಿಕ ಮಾಸಿಕ ಪಿಂಚಣಿಯಲ್ಲಿ 3 ಪಟ್ಟು ಏರಿಕೆಯಾಗಲಿದೆ. ಮೂರು ದಶಕಗಳ ಹಿಂದೆ ಪ್ರಾರಂಭಿಸಲಾದ ಇಪಿಎಸ್-95 ಪಿಂಚಣಿ ಯೋಜನೆಯಡಿಯಲ್ಲಿ ಸಿಗುವ ಪಿಂಚಣಿಯಲ್ಲಿ ಮೂರು ಪಟ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. 

 increase in Monthly Pension 1/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

ಪ್ರತಿ ತಿಂಗಳು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನದ 12%ವನ್ನು  ಇಪಿಎಫ್ ಗಾಗಿ ಕಡಿತಗೊಳಿಸಲಾಗುತ್ತದೆ. ಕಂಪನಿಯು ಕೂಡಾ  ಅಷ್ಟೇ ಪ್ರಮಾಣದ ಮೊತ್ತವನ್ನು ನೌಕರರ ಖಾತೆ ವರ್ಗಾವಣೆ ಮಾಡುತ್ತದೆ. ಇದರಲ್ಲಿ ಒಂದು ಭಾಗ ಇಪಿಎಫ್ ಖಾತೆಗೆ ಹೋದರೆ ಇನ್ನೊಂದು ಭಾಗ ಇಪಿಎಸ್ ಖಾತೆ ಸೇರುತ್ತದೆ.  

 increase in Monthly Pension 2/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

ವೇತನದಿಂದ ಕಡಿತಗೊಂಡು ಪಿಎಫ್ ಖಾತೆ ಸೇರಿದ ಮೊತ್ತ ನಿವೃತ್ತಿಯ ನಂತರ  ನೌಕರರ ಕೈ ಸೇರುತ್ತದೆ. ಜೊತೆಗೆ ಇಪಿಎಸ್ ಮೂಲಕ ಮಾಸಿಕ ಪಿಂಚಣಿ ಕೂಡಾ ಸಿಗುತ್ತದೆ. 

 increase in Monthly Pension 3/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

ಪಿಂಚಣಿದಾರರು ಸದ್ಯ ಕನಿಷ್ಠ 1000.ರೂ ಯನ್ನು ಪ್ರತಿ ತಿಂಗಳು ಪಿಂಚಣಿಯಾಗಿ ಪಡೆಯುತ್ತಿದ್ದಾರೆ. ಆದರೆ, ಈಗ ಇದನ್ನು  3000.ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.    

 increase in Monthly Pension 4/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

ನಿವೃತ್ತ ನೌಕರರ  ಪಿಂಚಣಿ ಹೆಚ್ಚಿಸುವ ಬಗ್ಗೆ  ಇದೀಗ  ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮೇಲಿನ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ ನಂತರ ಮಾಸಿಕ ಪಿಂಚಣಿಯಲ್ಲಿ ಮೂರು ಪಟ್ಟು ಹೆಚ್ಚಳವಾಗಲಿದೆ.   

 increase in Monthly Pension 5/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

2014ರಲ್ಲಿ, ಪಿಂಚಣಿಯನ್ನು 250 ರೂ.ಗಳಿಂದ  1000. ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದೀಗ ಹತ್ತು ವರ್ಷಗಳ ಬಳಿಕ ಒಂದು ಸಾವಿರ ರೂಪಾಯಿಯನ್ನು  3000.ರೂ.ಗೆ ಸರ್ಕಾರ ಹೆಚ್ಚಿಸಲಿದೆ ಎನ್ನಲಾಗಿದೆ.

 increase in Monthly Pension 6/6

ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ

ಕನಿಷ್ಠ ಪಿಂಚಣಿಯನ್ನು 3000. ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಇನ್ನು ಇಪಿಎಸ್‌ನ ನಿವೃತ್ತ ನೌಕರರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಪಿಂಚಣಿಯನ್ನು 7500 ರೂ.ಗಳಿಗೆ ಹೆಚ್ಚಿಸುವಂತೆಯೂ  ಒತ್ತಾಯಿಸಿದ್ದರು.