ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳಿದ್ದರೂ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ಸೌತೆಕಾಯಿಯನ್ನು ತಿನ್ನಲೇಬಾರದು.
1/6ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳು ಅಡಗಿವೆ. ಆದರೂ ಕೂಡಾ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ತಪ್ಪಿಯೂ ಸೌತೆಕಾಯಿಯನ್ನು ತಿನ್ನುವಂತಿಲ್ಲ.
2/6ಸೌತೆಕಾಯಿಯನ್ನು ನೈಸರ್ಗಿಕ ಮೂತ್ರವರ್ಧಕ ಹಣ್ಣು ಎಂದು ಕರೆಯಲಾಗುತ್ತದೆ. ಆದ್ದರಿಂದ, ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆ ಇರುವವರು ಸೌತೆಕಾಯಿಯನ್ನು ಕಡಿಮೆ ತಿನ್ನಬೇಕು ಅಥವಾ ತಿನ್ನಲೇಬಾರದು. ಇಲ್ಲವಾದರೆ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆ ಮೊದಲಿಗಿಂತ ಹೆಚ್ಚಾಗಬಹುದು.
3/6ಶೀತ, ಕೆಮ್ಮು, ಜ್ವರ ಅಥವಾ ಕಫದ ಸಮಸ್ಯೆ ಇರುವವರು ಸೌತೆಕಾಯಿಯನ್ನು ತಿನ್ನಬಾರದು. ಸೌತೆಕಾಯಿ ಶೀತದ ಗುಣವನ್ನು ಹೊಂದಿದೆ. ಇದರಿಂದಾಗಿ ಅನಾರೋಗ್ಯದ ಸಮಯದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯ ಮತ್ತಷ್ಟು ಹದಗೆಡಬಹುದು.
4/6ಅಲರ್ಜಿ ಇರುವವರು ಸೌತೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಅದು ಊತ, ಹೊಟ್ಟೆ ನೋವು ಅಥವಾ ತುರಿಕೆಗೆ ಕಾರಣವಾಗಬಹುದು.
5/6ಹೊಟ್ಟೆ ಸಮಸ್ಯೆ ಇರುವವರು ಸೌತೆಕಾಯಿಯನ್ನು ಹೆಚ್ಚು ತಿನ್ನಬಾರದು. ಇದರಲ್ಲಿ ನಾರಿನಂಶ ಇರುವುದರಿಂದ ಕಡಿಮೆ ಪ್ರಮಾಣದಲ್ಲಿ ತಿಂದರೆ ಪ್ರಯೋಜನಕಾರಿ. ಆದರೆ ಹೆಚ್ಚು ತಿಂದರೆ ಅಜೀರ್ಣ, ಗ್ಯಾಸ್ ಅಥವಾ ಹೊಟ್ಟೆ ಉಬ್ಬುವ ಸಮಸ್ಯೆ ಎದುರಿಸಬಹುದು.
6/6ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.