Kavya Maran hugs Abhishek Sharma parents: ಕಾವ್ಯಾ ಮಾರನ್ ಅಭಿಷೇಕ್ ಶರ್ಮಾ ಅವರ ಪೋಷಕರನ್ನು ಅಪ್ಪಿಕೊಳ್ಳುತ್ತಿರುವ ಫೋಟೋ ವೈರಲ್
1/5ಕಳೆದ ದಿನ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿದ್ದರು. ಟೀಂ ಇಂಡಿಯಾ ಪರ ಬ್ಯಾಟ್ ಬೀಸಿದ್ದ ಅವರು, ಪಾಕ್ ಆಟಗಾರರ ಬೆಂಡೆತ್ತಿದ್ದರು. ಈ ಮಧ್ಯೆ ಅವರಿಗೆ ಸಂಬಂಧಪಟ್ಟ ಸುದ್ದಿಯೊಂದು ವೈರಲ್ ಆಗುತ್ತಿದೆ.
2/5ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಲೀಕರಾದ ಕಾವ್ಯಾ ಮಾರನ್ ಜೊತೆ ಅಭಿಷೇಕ್ ಶರ್ಮಾ ಪ್ರೇಮದಲ್ಲಿದ್ದಾರೆ ಎನ್ನಲಾಗಿತ್ತು. ಆ ಬಗ್ಗೆ ಸಿಕ್ಕಾಪಟ್ಟೆ ವದಂತಿಗಳನ್ನು ಹಬ್ಬಲಾಗಿತ್ತು. ಆ ಬೆನ್ನಲ್ಲೇ 2025ರ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಕಾವ್ಯ ಮಾರನ್, ಅಭಿಷೇಕ್ ಶರ್ಮಾ ಅವರ ಪೋಷಕರಾದ ಮಂಜು ಶರ್ಮಾ ಮತ್ತು ರಾಜ್ ಕುಮಾರ್ ಶರ್ಮಾ ಅವರನ್ನು ತಬ್ಬಿಕೊಂಡಿರುವ ಫೋಟೋವೊಂದು ವೈರಲ್ ಆಗಿತ್ತು.
3/5ಆದರೆ ಈ ಫೋಟೋ ಆರೋಗ್ಯಕರ ಬೆಳವಣಿಗೆಯನ್ನೇ ಸೂಚಿಸಿತ್ತು ಹೊರತಾಗಿ ಇವರಿಬ್ಬರ ಮಧ್ಯೆ ಯಾವುದೇ ಸಂಬಂಧ ಇದೆ ಎಂಬುದನ್ನು ಬಿಂಬಿಸಿರಲಿಲ್ಲ. ಇನ್ನೊಂದೆಡೆ ಅಭಿಷೇಕ್ ಶರ್ಮಾ, ಕಾವ್ಯಾ ಮಾರನ್‌ಗಿಂದ ವಯಸ್ಸಲ್ಲಿ ಹತ್ತು ವರ್ಷ ಕಿರಿಯವರು. ಹೀಗಿರುವಾಗ ಅಂತಹ ಸಂಬಂಧ ಬೆಳೆಸುವುದು ಸಾಧ್ಯದ ಮಾತಲ್ಲ.
4/5ಇದರ ಬೆನ್ನಲ್ಲೇ ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಅವರು ಯುವತಿಯೊಬ್ಬಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹರಿದಾಡಿತ್ತು. ಆದರೆ ಈ ಬಗ್ಗೆಯೂ ಸ್ಪಷ್ಟನೆ ಇಲ್ಲ.
5/5ಇವೆಲ್ಲದಕ್ಕೂ ಮೊದಲು ಅಭಿಷೇಕ್ ಶರ್ಮಾ, ಸೂರತ್‌ನ ಮಾಡೆಲ್ ತಾನಿಯಾ ಸಿಂಗ್ ಎಂಬವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಆದರೆ ಆಕೆ ಆತ್ಮಹತ್ಯೆಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಳು. ಆ ಪ್ರಕರಣದಲ್ಲಿ ಸೂರತ್ ಪೊಲೀಸರು ಅಭಿಷೇಕ್ ಶರ್ಮಾ ಅವರಿಗೆ ಸಮನ್ಸ್ ನೀಡಿದ್ದರು. ಈ ಪ್ರಕರಣವು ಫೆಬ್ರವರಿ 2024 ರಲ್ಲಿ ವರದಿಯಾಗಿದೆ.