Sagarika Ghatge: ಯಾವ ಅಪ್ಸರೆಗೂ ಕಮ್ಮಿ ಇಲ್ಲ… ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ಮಡದಿಯ ಸೌಂದರ್ಯ!
ಸಾಗರಿಕಾ ಘಾಟ್ಗೆ. ಈ ಹೆಸರು ಕೊಂಚ ಅಪರಿಚಿತ ಎಂದೆನಿಸಿದರೂ ಇವರು ಪರಿಚಿತರೇ. ಏಕೆಂದರೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಜಹೀರ್ ಅವರ ಮಡದಿ ಇವರು. ಅಷ್ಟೇ ಅಲ್ಲದೆ, ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿದ್ದ ‘ಚಕ್ ದೇ ಇಂಡಿಯಾ’ ಸಿನಿಮಾದಲ್ಲಿ ಸಾಗರಿಕ ನಟಿಸಿದ್ದಾರೆ.
ಸಾಗರಿಕಾ ಅವರಿಗೆ ಜನವರಿ 8ರಂದು 37 ವರ್ಷ ತುಂಬಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ ಸಾಗರಿಕಾ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಜಹೀರ್ ಮತ್ತು ಸಾಗರಿಕಾ ಅವರ ಸಂಬಂಧವು ಮುನ್ನೆಲೆಗೆ ಬಂದಿದ್ದು, ಇಬ್ಬರೂ ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ ಅವರ ಮದುವೆಯ ಸಂದರ್ಭದಲ್ಲಿ. ಇವರರಿಬ್ಬರು ಒಟ್ಟಿಗೆ ಹಾಜರಾಗಿದ್ದರು. ಇದಕ್ಕೂ ಮುನ್ನ ಸಾಗರಿಕಾ ಅನೇಕ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು.
ಸಾಗರಿಕಾಗೂ ಮೊದಲು, ಜಹೀರ್ ಖಾನ್ ಬಾಲಿವುಡ್ ನಟಿ ಇಶಾ ಶರ್ವಾಣಿ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಅವರ ಸಂಬಂಧ ಸುಮಾರು ಎಂಟು ವರ್ಷಗಳ ಕಾಲ ಇತ್ತು. ಅಷ್ಟೇ ಅಲ್ಲ, 2011ರ ವಿಶ್ವಕಪ್ ವೇಳೆ ಇವರಿಬ್ಬರು ವಿವಾಹವಾಗುತ್ತಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ ಅವರ ಸಂಬಂಧ ಕೊನೆಗೊಂಡಿತು.
‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ಸಾಗರಿಕಾ ಸ್ಮರಣೀಯ ಪಾತ್ರ ನಿರ್ವಹಿಸಿದ್ದಾರೆ. ಪ್ರೀತಿ ಸಬರ್ವಾಲ್ ಪಾತ್ರದಿಂದ ಅವರು ಸಾಕಷ್ಟು ಪ್ರಸಿದ್ಧರಾದರು. ನಂತರ ಅವರು 'ಫಾಕ್ಸ್' ಚಿತ್ರದಲ್ಲಿ ಊರ್ವಶಿ ಮಾಥುರ್ ಪಾತ್ರದಲ್ಲಿ ಕಾಣಿಸಿಕೊಂಡರು. 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ (ಸೀಸನ್ 6)' ನಲ್ಲಿ ಸಾಗರಿಕಾ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಮಿಲೇ ನಾ ಮಿಲೇ ಹಮ್' ಮತ್ತು 'ರಶ್' ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.