ಕೋಪ ಶಮನಗೊಳಿಸುವ ಮೋದಿಯವರ ಉಪಾಯ ಬಹಳ ವಿಭಿನ್ನ!

'ನಾನು ಮೊದಲ ಬಾರಿಗೆ ನಿಮ್ಮನ್ನು ಭೇಟಿ ಮಾಡಿದಾಗ, ಆ ಸಮಯದಲ್ಲಿ ನೀವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಿರಿ. ಆ ಸಮಯದಲ್ಲಿ ನಾನು ನಿಮಗೆ ಒಂದು ಜೋಕ್ ಹೇಳಿದ್ದೆ. ನೀವು ನನಗೆ ಒಂದು ಜೋಕ್ ಹೇಳಿದ್ದಿರಿ. ಆದರೆ, ನೀವೂ ಪ್ರಧಾನಮಂತ್ರಿಯಾದ ಬಳಿಕ ನಿಮ್ಮ ಸ್ವಭಾವದಲ್ಲಿ ವ್ಯತ್ಯಾಸವಿದೆ, ಏಕೆಂದರೆ ನಿಮ್ಮ ಹೊರ ಭಾವ ಬಹಳ ಪ್ರಬಲ(ಕಠಿಣ)ವಾಗಿದೆ' - ಅಕ್ಷಯ್ ಕುಮಾರ್

  • Apr 24, 2019, 12:13 PM IST

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದು, ರಾಜಕೀಯೇತರ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಬಹಳ ರಿಲಾಕ್ಸ್ ಆಗಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಅವರು ಅಕ್ಷಯ್ ಕುಮಾರ್ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋಪ ಬಂದಾಗ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಬಹಳ ವಿಭಿನ್ನವಾಗಿದೆ.

ಅಕ್ಷಯ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಸಾಮಾನ್ಯವಾಗಿ ನನಗೆ ಕೋಪ ಬರುವುದಿಲ್ಲ. ಒಂದುವೇಳೆ ಕೋಪ ಬಂದರೆ, ಕಾಗದವೊಂದರಲ್ಲಿ ಪೂರ್ಣ ಕಥೆ ಬರೆದು ಬಳಿಕ ಅದನ್ನು ಕಿತ್ತು ಎಸೆಯುತ್ತೇನೆ. ಅದರ ನಂತರ ಮತ್ತೆ ಒಂದು ಕಾಗದ ತೆಗೆದುಕೊಂಡು ಪುನಃ ಕಥೆ ಬರೆಯುತ್ತೇನೆ. ಮೊದಲಿನಂತೆಯೇ ಅದನ್ನು ಹರಿದು ಎಸೆಯುತ್ತೇನೆ. ಈ ರೀತಿ ನನ್ನ ಕೋಪ ಶಮನವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 /5

ಪ್ರಧಾನಿ ಮೋದಿ ಅವರು ಕೋಪ ಶಮನದ ಉಪಾಯ ಹಂಚಿಕೊಂಡ ಬಳಿಕ ತಮಗೆ ಕೋಪ ಬಂದಾಗ ಏನು ಮಾಡುತ್ತೇನೆ ಎಂಬ ಸಂಗತಿಯನ್ನೂ ತಿಳಿಸಿದ ಅಕ್ಷಯ್ ಕುಮಾರ್, ನನಗೆ ಕೋಪ ಬಂದರೆ ಬೆಳಿಗ್ಗೆಯೇ ಎದ್ದು ಬಾಕ್ಸಿಂಗ್ ಗೆ ಹೋಗುತ್ತೇನೆ. ಅಲ್ಲಿ ಪಂಚಿಂಗ್ ಬ್ಯಾಗ್ ಗೆ ಹೊಡೆದೋ ಅಥವಾ ಸಮುದ್ರದ ತೀರಕ್ಕೆ ತೆರಳಿ ಕಿರಿಚಿಯೋ ತನ್ನ ಕೋಪ ತಣಿಸಿಕೊಳ್ಳುವುದಾಗಿ ತಿಳಿಸಿದರು.  

2 /5

'ನಾನು ಮೊದಲ ಬಾರಿಗೆ ನಿಮ್ಮನ್ನು ಭೇಟಿ ಮಾಡಿದಾಗ, ಆ ಸಮಯದಲ್ಲಿ ನೀವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಿರಿ. ಆ ಸಮಯದಲ್ಲಿ ನಾನು ನಿಮಗೆ ಒಂದು ಜೋಕ್ ಹೇಳಿದ್ದೆ. ನೀವು ನನಗೆ ಒಂದು ಜೋಕ್ ಹೇಳಿದ್ದಿರಿ. ಆದರೆ, ನೀವೂ ಪ್ರಧಾನಮಂತ್ರಿಯಾದ ಬಳಿಕ ನಿಮ್ಮ ಸ್ವಭಾವದಲ್ಲಿ ವ್ಯತ್ಯಾಸವಿದೆ, ಏಕೆಂದರೆ ನಿಮ್ಮ ಹೊರ ಭಾವ ಬಹಳ ಪ್ರಬಲ(ಕಠಿಣ)ವಾಗಿದೆ' ಎಂದು ಅಕ್ಷಯ್ ಕುಮಾರ್ ಪ್ರಧಾನಿ ಮೋದಿಯವರಿಗೆ ತಮ್ಮ ಅನುಭವವನ್ನು ತಿಳಿಸಿದರು.  

3 /5

ಪ್ರಧಾನಿ ಮೋದಿಯವರ ಸ್ವಭಾವದಲ್ಲಿನ ವ್ಯತ್ಯಾಸದ ಬಗ್ಗೆ ಅಕ್ಷಯ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ನಾನು ಕಠಿಣ ಸ್ವಭಾವದವನಲ್ಲ. ನನ್ನ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ. ವಾಸ್ತವವಾಗಿ ನಾನು ಕೆಲಸಕ್ಕೆ ಹೆಚ್ಚು ಮಹತ್ವ ನೀಡುತ್ತೇನೆ. ನಾವೊಂದು ಮೀಟಿಂಗ್ ನಲ್ಲಿ ಇದ್ದೇವೆ ಎಂದು ಭಾವಿಸಿ, ಈ ವೇಳೆ ಯಾರದಾದರೂ ಫೋನ್ ರಿಂಗ್ ಆದರೆ ಅವರ ಗಮನ ಫೋನ್ ನತ್ತವೇ ಇರುತ್ತದೆ. ಆವೇಳೆ ನಾನು ಏನು ಹೇಳುತ್ತಿದ್ದೆ ಎಂದು ಅವರನ್ನು ಪ್ರಶ್ನಿಸುತ್ತೇನೆ. ಆನಂತರದ ಸಭೆಗಳಿಗೆ ಬರುವಾಗ ಅವರು ಫೋನ್ ತರುವುದಿಲ್ಲ ಎಂದು ವಿವರಿಸಿದರು.

4 /5

ಸಂದರ್ಶನದ ವೇಳೆ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು, ನೀವೂ ಎಂದಾದರೂ ಪ್ರಧಾನ ಮಂತ್ರಿ ಆಗುವ ಬಗ್ಗೆ ಯೋಚಿಸಿದ್ದಿರೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಂ, 'ನನಗೆ ಎಂದಿಗೂ ಪ್ರಧಾನಿಯಾಗುವ ಕಲ್ಪನೆಯೇ ಇರಲಿಲ್ಲ. ಒಂದುವೇಳೆ ನನಗೆ ಎಲ್ಲಾದರೂ ಕೆಲಸ ಸಿಕ್ಕಿದ್ದರೆ, ನನ್ನ ತಾಯಿ ಇಡೀ ಹಳ್ಳಿಗೇ ಬೆಲ್ಲ ಹಂಚುತ್ತಿದ್ದರು' ಎಂದರು.

5 /5

ನೀವು ಸೈನ್ಯಕ್ಕೆ ಸೇರಲು ಬಯಸಿದ್ರಾ, ನೀವು ಸೈನ್ಯಕ್ಕೆ ಸೇರಲು ಬಯಸುತ್ತೀರಾ? ಎಂಬ ಅಕ್ಷಯ್ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, "1962 ರ ಯುದ್ಧದಲ್ಲಿ ಮೆಹ್ಸಾನಾ ನಿಲ್ದಾಣದಲ್ಲಿ ಸೈನಿಕರು ತೆರಳುತ್ತಿದ್ದರೆ ನಾನು ಸಹ ಹೋಗುತ್ತಿದ್ದೆ. ಮನಸ್ಸು ಸಂತೋಷವಾಗಿತ್ತು. ಗುಜರಾತ್ನಲ್ಲಿ ಸೈನಿಕ್ ಶಾಲೆಗೆ ನಡೆಸುತ್ತಿದ್ದರು. ನಾನು ಅಲ್ಲಿಗೆ ಸೇರಲು ಬಯಸಿದ್ದೆ. ನಾವು ವಾಸವಿದ್ದ ಪ್ರದೇಶದಲ್ಲಿ ಒಬ್ಬರು ಪ್ರಾಂಶುಪಾಲರಿದ್ದರು. ನಾನು ಅವರೊಂದಿಗೆ ಹೋಗುತ್ತಿದ್ದೆ. ಎಂದಿಗೂ ದೊಡ್ಡ ವ್ಯಕ್ತಿಗಳನ್ನು ಭೇಟಿ ಮಾಡಲು ಹೆದರುತ್ತಿರಲಿಲ್ಲ. ಅಲ್ಲದೆ ಎಂದೂ ಕೂಡ ನಾನು ಪಿಎಂ ಆಗಬಹುದು ಎಂದು ಭಾವಿಸಿರಲಿಲ್ಲ.