Masal Puri Origin: ಮಸಾಲ್ ಪುರಿ ಅಥವಾ ಮಸಾಲ ಪುರಿ... ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ವಿಶೇಷವಾಗಿ ಜನಪ್ರಿಯವಾಗಿರುವ ಚಾಟ್ ಮಸಾಲ. ಅನೇಕ ಜನರು ಈ ತಿನಿಸನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಕಡಿಮೆ ಬೆಲೆಯಲ್ಲೇ ಸಿಗುವ ಈ ಖಾದ್ಯಕ್ಕೆ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಬಹುಬೇಡಿಕೆಯಿದೆ.
1/5ಮಸಾಲ್ ಪುರಿ ಅಥವಾ ಮಸಾಲ ಪುರಿ... ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ವಿಶೇಷವಾಗಿ ಜನಪ್ರಿಯವಾಗಿರುವ ಚಾಟ್ ಮಸಾಲ. ಅನೇಕ ಜನರು ಈ ತಿನಿಸನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಕಡಿಮೆ ಬೆಲೆಯಲ್ಲೇ ಸಿಗುವ ಈ ಖಾದ್ಯಕ್ಕೆ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಬಹುಬೇಡಿಕೆಯಿದೆ.
2/5ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಮಸಾಲ ಪುರಿ ತಯಾರಿಸಿ ಅನೇಕ ಭಾಗಗಳಲ್ಲಿ ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ಕಂಡಿರಬಹುದು. ಅಷ್ಟೇ ಅಲ್ಲ, ಜನರು ಸಂಜೆಯ ವೇಳೆ ಹೆಚ್ಚಾಗಿ ಇಂತಹ ಅಂಗಡಿಗಳ ಮುಂದೆ ಚಪ್ಪರಿಸಿಕೊಂಡು ಮಸಾಲ್‌ಪುರಿಯನ್ನು ಸವಿಯುವುದನ್ನು ಕಾಣಬಹುದು.
3/5ಇಷ್ಟೆಲ್ಲಾ ಇಷ್ಟಪಟ್ಟು ತಿನ್ನುವ ಮಸಾಲ್ ಪುರಿ ಮೊದಲು ಹುಟ್ಟಿಕೊಂಡಿದ್ದು ಎಲ್ಲಿ ಗೊತ್ತಾ? ಕರ್ನಾಟಕದ ಈ ಜಿಲ್ಲೆಯೇ ಮಸಾಲಪುರಿಯ ಮೂಲ ಎಂದ್ರೆ ನಿಮಗೆ ಆಶ್ಚರ್ಯವಾಗದಿರದು.
4/5ಈ ಖಾದ್ಯ ಹುಟ್ಟಿಕೊಂಡಿದ್ದು ಮೈಸೂರಿನಲ್ಲಿ. ಈಗ ಇಡೀ ಭಾರತೀಯ ಉಪಖಂಡದಲ್ಲೇ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ಮಸಾಲೆಯುಕ್ತವಾಗಿರುವ ಈ ಖಾದ್ಯವನ್ನು ಅವಶ್ಯಕತೆಗೆ ಅನುಗುಣವಾಗಿ ಸಿಹಿಯಾಗಿಯೂ ಮಾಡಬಹುದು.
5/5ಪುಡಿಮಾಡಿದ ಪೂರಿಗಳನ್ನು ಪಫ್ಡ್ ರೈಸ್, ಹಸಿರು ಬಟಾಣಿ , ಮೆಣಸಿನ ಪುಡಿ, ಗರಂ ಮಸಾಲ, ಚಾಟ್ ಮಸಾಲ, ಕೊತ್ತಂಬರಿ ಪುಡಿ ಇತ್ಯಾದಿಗಳಿಂದ ಮಾಡಿದ ಬಿಸಿ ಮಸಾಲಾ ಗ್ರೇವಿಯಲ್ಲಿ ನೆನೆಸಲಾಗುತ್ತದೆ. ನಂತರ ಖಾದ್ಯವನ್ನು ಬಡಿಸುವ ಮೊದಲು ಈರುಳ್ಳಿ ಮತ್ತು ಟೊಮೆಟೊದ ಸಣ್ಣ ಹೋಳುಗಳು, ಕೊತ್ತಂಬರಿ ಸೊಪ್ಪು ಮತ್ತು ಸೇವ್ ಅನ್ನು ಸೇರಿಸಲಾಗುತ್ತದೆ. ಬೇಕಿದ್ದರೆ ಕ್ಯಾರೆಟ್ ಕೂಡ ಸೇರಿಸಬಹುದು.