Post Office Scheme: ಕೇವಲ 5 ಲಕ್ಷ ಹಣ ಹೂಡಿಕೆ ಮಾಡಿದ್ರೆ ಮೆಚ್ಯೂರಿಟಿಯಲ್ಲಿ 15 ಲಕ್ಷ ಸಿಗುತ್ತದೆ!

Written ByPuttaraj K Alur
Published: Oct 01, 2025, 12:42 PM IST|Updated: Oct 01, 2025, 12:42 PM IST

ಅಂಚೆ ಕಚೇರಿಯ ಈ ಯೋಜನೆಯಲ್ಲಿ ನೀವು ಕೇವಲ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯ ಅವಧಿಯಲ್ಲಿ 15 ಲಕ್ಷ ರೂಪಾಯಿ ವಾಪಸ್‌ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

Post Office savings scheme: ನೀವು ದೊಡ್ಡ ಮೊತ್ತದ ಹೂಡಿಕೆ  ಮಾಡಲು ಬಯಸಿದರೆ  ಅಂಚೆ ಕಚೇರಿ ಯೋಜನೆಗಳು ಉತ್ತಮ ಆಯ್ಕೆ. ಇಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದ ಮೂರು ಪಟ್ಟು ಹಣವನ್ನ ಪಡೆಯಬಹುದು. ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್  ಅಂದರೆ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ (FD) ನಿಮ್ಮ ಹಣ ಹೂಡಿಕೆ ಮಾಡುವುದು ಒಳ್ಳೆಯದು. ಅಂಚೆ ಕಚೇರಿಯಲ್ಲಿ 5 ವರ್ಷಗಳ ಎಫ್‌ಡಿ ಬ್ಯಾಂಕ್‌ಗಳಿಗಿಂತ ಉತ್ತಮ ಬಡ್ಡಿಯನ್ನ ನೀಡುತ್ತಿದೆ. ಈ ಯೋಜನೆಯಲ್ಲಿ ನೀವು 5 ಲಕ್ಷ ರೂ. ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ15 ಲಕ್ಷ ರೂ. ಮರಳಿ ಪಡೆಯಬಹುದು. ಈ ಯೋಜನೆಯ ಮೂಲಕ  ನೀವು ಹೂಡಿಕೆ ಮಾಡಿದ ಮೊತ್ತವನ್ನ ಮೂರು ಪಟ್ಟು ಹೆಚ್ಚು ಮಾಡಿಕೊಳ್ಳಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
 

1/6

3 ಪಟ್ಟು ಹಣ ಪಡೆಯಿರಿ: ಮೊದಲು ನೀವು 5 ಲಕ್ಷ ರೂ. ಹಣವನ್ನ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಅಂಚೆ ಕಚೇರಿಯು ಈ 5 ವರ್ಷಗಳ ಎಫ್‌ಡಿಗೆ ಶೇ.7.5ಬಡ್ಡಿಯನ್ನ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಬಡ್ಡಿದರದೊಂದಿಗೆ ಲೆಕ್ಕ ಹಾಕಿದರೆ 5 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತವು 7,24,974 ರೂ. ಆಗುತ್ತದೆ.

2/6

ನೀವು ಈ ಮೊತ್ತವನ್ನ ಹಿಂಪಡೆಯಬೇಕಾಗಿಲ್ಲ, ಆದರೆ ಮುಂದಿನ 5 ವರ್ಷಗಳವರೆಗೆ ಅದನ್ನ ಮುಂದುವರಿಸಬಹುದು. ಈ ರೀತಿ 10 ವರ್ಷಗಳಲ್ಲಿ ನೀವು 5 ಲಕ್ಷಗಳ ಮೊತ್ತದ ಬಡ್ಡಿಯ ಮೂಲಕ 5,51,175 ರೂ. ಹಣ ಗಳಿಸುತ್ತೀರಿ. ಆಗ ನಿಮ್ಮ ಒಟ್ಟು ಮೊತ್ತವು 10,51,175 ರೂ. ಆಗುತ್ತದೆ. ಆದರೆ ನೀವು ಈ ಮೊತ್ತವನ್ನ ಮತ್ತೊಮ್ಮೆ 5 ವರ್ಷಗಳವರೆಗೆ ಮುಂದುವರಿಸಬಹುದು. ಅಂದರೆ ನೀವು ಇದನ್ನ ತಲಾ 5 ವರ್ಷಗಳವರೆಗೆ ಎರಡು ಬಾರಿ ಮುಂದುವರಿಸಬಹುದು. ಈ ರೀತಿ ನಿಮ್ಮ ಮೊತ್ತವನ್ನ ಒಟ್ಟು 15 ವರ್ಷಗಳವರೆಗೆ ಠೇವಣಿ ಮಾಡಬೇಕಾಗುತ್ತದೆ. 15ನೇ ವರ್ಷದಲ್ಲಿ ಅಂದರೆ ಮೆಚ್ಯೂರಿಟಿಯ ವೇಳೆ ನೀವು ಹೂಡಿಕೆ ಮಾಡಿದ 5 ಲಕ್ಷ ರೂ.ಗೆ ಕೇವಲ ಬಡ್ಡಿಯಿಂದಲೇ 10,24,149 ರೂ. ಹಣ ಗಳಿಸುತ್ತೀರಿ.

3/6

ಈ ರೀತಿ ನೀವು ಹೂಡಿಕೆ ಮಾಡಿದ 5 ಲಕ್ಷ ಮತ್ತು 10,24,149 ರೂ.ವನ್ನ ಒಟ್ಟುಗೂಡಿಸಿ, ನೀವು ಒಟ್ಟು 15,24,149 ರೂ.ವನ್ನ ಮೆಚ್ಯೂರಿಟಿ ಸಮಯದಲ್ಲಿ ಪಡೆಯಬಹುದು. 15 ಲಕ್ಷ ರೂ. ಹಣ ಪಡೆಯಲು ನೀವು ಈ ಎಫ್‌ಡಿಯನ್ನ ಮೊದಲ ಐದು ವರ್ಷದ ಜೊತೆಗೆ 5+5 ವರ್ಷದಂತೆ ಹೂಡಿಕೆ ಮುಂದುವರಿಸಬೇಕು. ಅಂದಾಗ ಮಾತ್ರ ನಿಮ್ಮ ಹೂಡಿಕೆಯ ಮೊತ್ತವು ಮೂರು ಪಟ್ಟು ಆಗುತ್ತದೆ.

4/6

15 ಲಕ್ಷ ಬೇಕು ಅಂದ್ರೆ ಹೀಗೆ ಮಾಡಿ!: ನೀವು 15 ಲಕ್ಷ ರೂ. ಮೊತ್ತ ಪಡೆಯಲು ಎರಡು ಬಾರಿ ಈ ಎಫ್‌ಡಿಯನ್ನ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀವು ಅರ್ಥ ಮಾಡಿಕೊಳ್ಳಬೇಕಾದ ಕೆಲವು ನಿಯಮಗಳಿವೆ. ಪೋಸ್ಟ್ ಆಫೀಸ್ ಒಂದು ವರ್ಷದ ಎಫ್‌ಡಿಯನ್ನ ಮೆಚ್ಯೂರಿಟಿ ದಿನಾಂಕದಿಂದ 6 ತಿಂಗಳೊಳಗೆ ವಿಸ್ತರಿಸಬಹುದು, 2 ವರ್ಷದ ಎಫ್‌ಡಿಯನ್ನ ಮೆಚ್ಯೂರಿಟಿ ಅವಧಿಯ 12 ತಿಂಗಳೊಳಗೆ ವಿಸ್ತರಿಸಬೇಕು. ಆದರೆ 3 ಮತ್ತು 5 ವರ್ಷಗಳ ಎಫ್‌ಡಿಯನ್ನ ವಿಸ್ತರಣೆಗಾಗಿ ಮೆಚ್ಯೂರಿಟಿ ಅವಧಿಯ 18 ​​ತಿಂಗಳೊಳಗೆ ಅಂಚೆ ಕಚೇರಿಗೆ ತಿಳಿಸಬೇಕು.

5/6

ಇದರ ಹೊರತಾಗಿ ಖಾತೆಯನ್ನ ತೆರೆಯುವ ಸಮಯದಲ್ಲಿ ಮುಕ್ತಾಯದ ನಂತರ ಖಾತೆ ವಿಸ್ತರಣೆಗೆ ನೀವು ಮನವಿ ಸಲ್ಲಿಸಬಹುದು. ಮುಕ್ತಾಯದ ದಿನದಂದು ಆಯಾ ಟಿಡಿ ಖಾತೆಗೆ ಅನ್ವಯವಾಗುವ ಬಡ್ಡಿ ದರವು ವಿಸ್ತೃತ ಅವಧಿಗೆ ಅನ್ವಯಿಸುತ್ತದೆ. ಬ್ಯಾಂಕ್‌ಗಳಂತೆ ಪೋಸ್ಟ್ ಆಫೀಸ್‌ಗಳಲ್ಲಿಯೂ ನೀವು ವಿವಿಧ ಅವಧಿಯ ಎಫ್‌ಡಿಗಳ ಆಯ್ಕೆಯನ್ನ ಪಡೆಯುತ್ತೀರಿ. ಪ್ರತಿ ಅವಧಿಗೆ ವಿಭಿನ್ನ ಬಡ್ಡಿದರಗಳನ್ನ ನೀಡಲಾಗುತ್ತದೆ. ಒಂದು ವರ್ಷದ ಖಾತೆಗೆ 6.9% ವಾರ್ಷಿಕ ಬಡ್ಡಿ, ಎರಡು ವರ್ಷದ ಖಾತೆಗೆ 7.0% ವಾರ್ಷಿಕ ಬಡ್ಡಿ, ಮೂರು ವರ್ಷಗಳ ಖಾತೆಗೆ 7.1% ವಾರ್ಷಿಕ ಬಡ್ಡಿ ಮತ್ತು ಐದು ವರ್ಷದ ಖಾತೆಗೆ 7.5% ವಾರ್ಷಿಕ ಬಡ್ಡಿ ಸಿಗುತ್ತದೆ.

6/6

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)