Lakshmi Narayana Rajayoga: ವೃಶ್ಚಿಕ ರಾಶಿಯಲ್ಲಿ ತರ್ಕ, ವೃತ್ತಿ-ವ್ಯವಹಾರಕಾರಕನಾದ ಬುಧ, ಐಶಾರಾಮಿ ಜೀವನದ ಅಂಶನಾದ ಶುಕ್ರನೊಂದಿಗೆ ಸಂಯೋಗ ಹೊಂದಲಿದ್ದು, ಇದರಿಂದ ಅತ್ಯಂತ ಶುಭ ರಾಶಿಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗಲಿದೆ.
1/6ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರೀತಿ, ಸುಖ-ಸಂಪತ್ತು, ಐಶಾರಾಮಿಕಾರಕ ಎಂದು ಪರಿಗಣಿಸಲಾಗುವ ಶುಕ್ರ ಹಾಗೂ ಬುದ್ದಿ, ತರ್ಕ, ವೃತ್ತಿ-ವ್ಯವಹಾರದ ಅಂಶನಾದ ಬುಧ ಒಟ್ಟಿಗೆ ಕೂಡಿದಾಗ ಲಕ್ಷ್ಮೀ ನಾರಾಯಣ ಎಂಬ ರಾಜಯೋಗ ಸೃಷ್ಟಿಯಾಗುತ್ತದೆ.
2/6ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್‌ನಲ್ಲಿ ಕಮಾಂಡರ್ ಗ್ರಹ ಮಂಗಳನ ಅಧಿಪತ್ಯ ವೃಶ್ಚಿಕ ರಾಶಿಯಲ್ಲಿ ಬುಧ ಶುಕ್ರರ ಸಂಯೋಗದಿಂದ ಅತ್ಯಂತ ಶಕ್ತಿಶಾಲಿಯಾದ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗಲಿದೆ.
3/6ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ವೃಶ್ಚಿಕ ರಾಶಿಯಲ್ಲಿ ಐದು ವರ್ಷಗಳ ಬಳಿಕ ಬುಧ ಶುಕ್ರರ ಯುತಿಯಿಂದ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ.
4/6ಸ್ವಂತ ರಾಶಿಯಲ್ಲೇ ಬುಧ ಶುಕ್ರ ಯುತಿಯಿಂದ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಎಲ್ಲಾ ಆಯಾಮಗಳಲ್ಲೂ ಯಶಸ್ಸನ್ನು ನೀಡಲಿದೆ. ಆರ್ಥಿಕವಾಗಿ ಭರ್ಜರಿ ಲಾಭವನ್ನು ಗಳಿಸುವರು. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವೃತ್ತಿ ಬದುಕಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಭೌತಿಕ ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
5/6ಲಕ್ಷ್ಮೀ ನಾರಾಯಣ ಯೋಗದ ಫಲವಾಗಿ ಈ ರಾಶಿಯವರಿಗೆ ಕಷ್ಟದ ದಿನಗಳು ಕಳೆದ ಒಳ್ಳೆಯ ದಿನಗಳು ಆರಂಭವಾಗಲಿವೆ. ಹಣಕಾಸಿಗೆ ಸಂಬಂಧಿಸಿದ ಸಂಕಷ್ಟಗಳಿಂದ ಪರಿಹಾರ ದೊರೆತು ಸಂಪತ್ತಿನ ಹೊಳೆಯೇ ಹರಿಯಲಿದೆ. ವೃತ್ತಿಪರರಿಗೆ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯುವ ಸಮಯ ಇದಾಗಿದೆ.
6/6ಮಂಗಳನ ರಾಶಿಯಲ್ಲಿ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರಿಗೆ ವೃತ್ತಿಯಲ್ಲಿ ಕೀರ್ತಿ, ವ್ಯವಹಾರದಲ್ಲಿ ಯಶಸ್ಸನ್ನು ತರಲಿದೆ. ಹಠಾತ್ ಆರ್ಥಿಕ ಹರಿವು ಹೆಚ್ಚಾಗಲಿದ್ದು ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನವು ಹೆಚ್ಚಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.