HBD Prabhas : ಸಿನಿ ಉದ್ಯಮವು ಒಂದು ಐಷಾರಾಮಿ ಲೋಕ. ಒಮ್ಮೆ ಇಲ್ಲಿ ಯಶಸ್ವಿಯಾದರೆ, ಹಣದ ಹೊಳೆ ಹರಿಯುತ್ತದೆ. ಕಷ್ಟ ಪಟ್ಟು ಸಿನಿರಂಗಕ್ಕೆ ಬಂದು ಯಶಸ್ವಿಯಾಗಿ ಇಂದು ಖ್ಯಾತಿ ಗಳಿಸಿದ ಅನೇಕ ನಟ-ನಟಿಯರಿದ್ದಾರೆ. ಅಲ್ಲದೆ, ಕುಟುಂಬದ ಹಿನ್ನೆಲೆಯಿಂದ ಇಂದಿಗೂ ಹಿಟ್ ಸಿನಿಮಾ ನೀಡಲು ಕೆಲವರು ಹೆಣಗಾಡುತ್ತಿದ್ದಾರೆ.. ಆದರೆ ಪ್ರಭಾಸ್ ಇವರೆಲ್ಲರಿಗಿಂಗಲೂ ಡಿಫ್ರೆಂಟ್...
1/6ದಿವಂಗತ ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರ ಉತ್ತರಾಧಿಕಾರಿಯಾಗಿ 'ಈಶ್ವರ್' ಚಿತ್ರದ ಮೂಲಕ ಪ್ರಭಾಸ್ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ಪ್ರಸ್ತುತ ಅವರು ಭಾರತದ ಅತ್ಯಂತ ಜನಪ್ರಿಯ ನಟರಾಗಿದ್ದಾರೆ. ಅಲ್ಲದೆ, ಆಸ್ತಿ ವಿಚಾರವಾಗಿಯೂ ಇತರೇ ನಟರಿಗಿಂತ ಮುಂದಿದ್ದಾರೆ.
2/6ಪ್ರಭಾಸ್ ಅವರ ವೃತ್ತಿಜೀವನದ ಮೊದಲ ಹಿಟ್ ಚಿತ್ರ 'ವರ್ಷಂ' (2004). ಅದಾದ ನಂತರ, ರಾಜಮೌಳಿ ನಿರ್ದೇಶನದ 'ಛತ್ರಪತಿ' (2005) ಮೂಲಕ ಪ್ರಭಾಸ್ ಮಾಸ್ ಹೀರೋ ಆಗಿ ಗುರುತಿಸಿಕೊಂಡರು. 'ಬಾಹುಬಲಿ' ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದರು..
3/6'ಬಾಹುಬಲಿ' ಚಿತ್ರದ ನಂತರ ಸತತ ಸೋಲುಗಳನ್ನು ಎದುರಿಸಿದ ಪ್ರಭಾಸ್, 'ಸಲಾರ್' ಚಿತ್ರದ ಮೂಲಕ ಮತ್ತೆ ಅದ್ಭುತ ಪ್ರದರ್ಶನ ನೀಡಿದರು. ಇದಲ್ಲದೆ, ಮೇಡಮ್ ಟುಸ್ಸಾಡ್ಸ್‌ನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಹೊಂದಿರುವ ಮೊದಲ ತೆಲುಗು ಮತ್ತು ದಕ್ಷಿಣ ಭಾರತೀಯ ನಟ ಪ್ರಭಾಸ್. ಕಳೆದ ವರ್ಷ ಬಿಡುಗಡೆಯಾದ 'ಕಲ್ಕಿ 2898 AD' ಚಿತ್ರದ ಮೂಲಕ ಅವರು ಮತ್ತೊಮ್ಮೆ 1000 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿ ದಾಖಲೆ ನಿರ್ಮಿಸಿದರು. ಎರಡು ಚಿತ್ರಗಳೊಂದಿಗೆ 1000 ಕೋಟಿ ರೂ. ಕಲೆಕ್ಷನ್ ಮಾಡಿದ ದಕ್ಷಿಣ ಭಾರತೀಯ ನಾಯಕ ಎಂಬ ದಾಖಲೆಯನ್ನು ಪ್ರಭಾಸ್ ಹೊಂದಿದ್ದಾರೆ.
4/6ಪ್ರಭಾಸ್ ಸ್ವತಃ ರಾಜಮನೆತನಕ್ಕೆ ಸೇರಿದವರು. ಅವರು ನೂರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಪಿತ್ರಾರ್ಜಿತವಾಗಿ ಹೊಂದಿದ್ದಾರೆ. ಪ್ರಸ್ತುತ, ಪ್ರಭಾಸ್ ಅವರ ಒಟ್ಟು ಆಸ್ತಿ ಸುಮಾರು 2000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅವರು ಚಲನಚಿತ್ರಗಳ ಮೂಲಕವೇ ಸುಮಾರು 350 ಕೋಟಿ ರೂ.ಗಳನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ.
5/6ಇದಲ್ಲದೆ, ಪ್ರಭಾಸ್ ಕುಟುಂಬವು ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಪುಣೆಯಂತಹ ಮೆಟ್ರೋ ನಗರಗಳಲ್ಲಿ ನೂರಾರು ಎಕರೆ ಕೃಷಿಭೂಮಿ, ಗ್ರಾನೈಟ್ ಕಾರ್ಖಾನೆ ಮತ್ತು ತೋಟದ ಮನೆಗಳನ್ನು ಹೊಂದಿದೆ. ಅವರು ವಿದೇಶದಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
6/6ಪ್ರಭಾಸ್ ರೋಲ್ಸ್ ರಾಯ್ಸ್ ಫ್ಯಾಂಟಮ್, ಲ್ಯಾಂಬೋರ್ಘಿನಿ ಅವೆಂಟಡಾರ್ ರೋಡ್‌ಸ್ಟರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ವಾರ್ಷಿಕ ಆದಾಯ ಸುಮಾರು 250 ಕೋಟಿ ರೂ. ಎಂದು ವರದಿಯಾಗಿದೆ.