ಯಾವ ಹೊತ್ತಲ್ಲಾದರೂ ಸರಿ... ದೇಹದ ಈ ಭಾಗವನ್ನು 1 ನಿಮಿಷ ಮಸಾಜ್ ಮಾಡಿದ್ರೆ ಸೊಂಟದ ಮತ್ತು ಹೊಟ್ಟೆಯ ಕೊಬ್ಬು ಮಂಜು ಕರಗಿದಂತೆ ಕರಗುತ್ತೆ
ಆಕ್ಯುಪ್ರೆಶರ್ ಎನ್ನುವುದು ದೇಹದ ಭಾಗಗಳ ಮೇಲೆ ಕೆಲವು ಬಿಂದುಗಳನ್ನು ಒತ್ತುವ ಮೂಲಕ ತೂಕವನ್ನು ಕಳೆದುಕೊಳ್ಳುವ ಒಂದು ವಿಧಾನವಾಗಿದೆ. ಆಕ್ಯುಪ್ರೆಶರ್ ಪಾಯಿಂಟ್‌ಗಳ ಮೇಲೆ ಸರಿಯಾದ ರೀತಿಯಲ್ಲಿ ಒತ್ತಡವನ್ನು ಹಾಕುವುದರಿಂದ ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸಬಹುದು ಎಂದು ಕೆಲ ಸಂಶೋಧನೆಗಳು ಬಹಿರಂಗಪಡಿಸಿವೆ.ಇದರಿಂದಾಗಿ ಚಯಾಪಚಯವು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಸಂಶೋಧನೆಯ ಉಲ್ಲೇಖವಿದೆ. ಸಂಶೋಧನೆಯ ಪ್ರಕಾರ, ಆಕ್ಯುಪ್ರೆಶರ್ ಪಾಯಿಂಟ್‌ಗಳನ್ನು ಒತ್ತುವುದರಿಂದ ಆಹಾರವನ್ನು ತಿನ್ನುವ ಬಯಕೆಯನ್ನು ನಿಯಂತ್ರಿಸುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರ ಸಂಶೋಧನೆಗಳ ಪ್ರಕಾರ, ಇದು ಅಡಿಪೋನೆಕ್ಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಡಿಪೋನೆಕ್ಟಿನ್ ಒಂದು ರೀತಿಯ ಪ್ರೋಟೀನ್ ಹಾರ್ಮೋನ್, ಇದು ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇತರ ಸಂಶೋಧನೆಗಳು ಆಕ್ಯುಪ್ರೆಶರ್, ಏಕಾಂಗಿಯಾಗಿ ಅಥವಾ ಇತರ ಚಿಕಿತ್ಸೆಗಳ ಸಂಯೋಜನೆಯೊಂದಿಗೆ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಹೀಗಿರುವಾಗ ದೇಹದ ಯಾವ ಪಾಯಿಂಟ್‌ಗಳಿಗೆ ಮಸಾಜ್ ಮಾಡುವ ಮೂಲಕ ತೂಕ ಇಳಿಕೆ ಮಾಡಬಹುದು ಎಂಬುದನ್ನು ಮುಂದೆ ತಿಳಿಯೋಣ.
ಶುಗೌ ಸ್ಪಾಟ್ (Shuigou Spot): ತುಟಿಯ ಮೇಲೆ ಮತ್ತು ಮೂಗಿನ ಕೆಳಗೆ ಇರುವ ಭಾಗವನ್ನು ಶುಗೌ ಸ್ಪಾಟ್ ಎಂದು ಕರೆಯಲಾಗುತ್ತದೆ. ಈ ಭಾಗವನ್ನು ಬೆರಳಿನ ಸಹಾಯದಿಂದ ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು. ಇದರಿಂದ ತೂಕ ಕಡಿಮೆಯಾಗುತ್ತದೆ.
ಪಾದ: ಈ ಭಾಗಕ್ಕೆ ಮಸಾಜ್ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ನೀಡಬಹುದು. ಜೊತೆಗೆ ಆಯಾಸವನ್ನು ತೆಗೆದುಹಾಕುತ್ತದೆ. ಪ್ರತಿದಿನ 1 ನಿಮಿಷ ಈ ಭಾಗಕ್ಕೆ ಹೆಬ್ಬೆರಳಿನಿಂದ ಮಸಾಜ್ ಮಾಡಬೇಕು. ಎರಡು ಮೂರು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿದರೆ ತೂಕ ಇಳಿಕೆಗೆ ಸಹಾಯವಾಗುತ್ತದೆ.
ಹೊಕ್ಕುಳ: ಈ ಭಾಗವನ್ನು ಮಸಾಜ್ ಮಾಡುವುದರಿಂದ ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಎರಡು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಆ ಪ್ರದೇಶವನ್ನು ಮಸಾಜ್ ಮಾಡಬಹುದು.
ಕಿವಿ: ಕಿವಿಯ ಹೊರ ತ್ರಿಕೋನ ಭಾಗದಲ್ಲಿ ಇರುತ್ತದೆ. ಬಾಯಿಯನ್ನು ತೆರೆಯುತ್ತಾ ಮತ್ತು ಮುಚ್ಚುತ್ತಾ ಒಂದು ನಿಮಿಷಗಳ ಕಾಲ ಈ ಭಾಗವನ್ನು ಮಸಾಜ್ ಮಾಡಿದರೆ ಹಸಿವು ನಿಯಂತ್ರಣವಾಗುತ್ತದೆ.
ಹೆಬ್ಬೆರಳು ಮತ್ತು ಬೆರಳಿನ ನಡುವೆ ಒಂದು ಬಿಂದುವಿದೆ. ಇದನ್ನು ಆಗಾಗ್ಗೆ ಒತ್ತುತ್ತಾ ಬಂದರೆ ಥೈರಾಯ್ಡ್ ಗ್ರಂಥಿಯು ಪ್ರಚೋದನೆಯನ್ನು ಪಡೆಯುತ್ತದೆ. ಅಷ್ಟೇ ಅಲ್ಲದೆ, ಚಯಾಪಚಯವು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು ತೂಕ ಕಡಿಮೆಗೊಳಿಸಲು ಬಹಳಷ್ಟು ಸಹಾಯಕ. 1-2 ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು.
ಆದರೆ ಆಕ್ಯುಪ್ರೆಶರ್ ಒಂದು ನುರಿತ ಶೈಲಿಯಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಆಕ್ಯುಪ್ರೆಶರ್ ಅನ್ನು ತಪ್ಪಾಗಿ ಅನುಸರಿಸುವುದರಿಂದ ಸ್ನಾಯು ನೋವಿನ ಸಮಸ್ಯೆಯನ್ನು ಸಹ ಎದುರಿಸಬೇಕಾಗಬಹುದು. ಆದ್ದರಿಂದ, ನುರಿತ ಬೋಧಕರ ಮಾರ್ಗದರ್ಶನದಲ್ಲಿ ಮಾತ್ರ ಆರಂಭದಲ್ಲಿ ಅದನ್ನು ಮಾಡುವುದು ಮುಖ್ಯ. ಈ ಮಾಹಿತಿಯನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.