ಒತ್ತಡದಿಂದ ಉಂಟಾಗುವ ಸಮಸ್ಯೆಗಳು!

  • Apr 07, 2018, 17:02 PM IST
1 /7

ಹೆಚ್ಚು ಮಾತನಾಡುವುದು ಒಳ್ಳೆಯದಲ್ಲ, ಆದರೆ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ.

2 /7

ವಾಸ್ತವವಾಗಿ, ನೀವು ನಿಮ್ಮ ಹೃದಯದಲ್ಲಿ ನಿಗ್ರಹಿಸಲು ಪ್ರಯತ್ನಿಸುವ ಯಾವುದೇ ವಿಷವಾದರೂ ಅದು ನಿಮ್ಮ ಮಾನಸಿಕವಾಗಿ ಕುಗ್ಗಿಸುವುದು ಮಾತ್ರವಲ್ಲ ನಿಮ್ಮಲ್ಲಿ ದೈಹಿಕ ಸಮಸ್ಯೆಗಳು ಹೆಚ್ಚಾಗುವಂತೆ ಮಾಡುತ್ತವೆ.

3 /7

ನಿಮ್ಮ ಹೃದಯದಲ್ಲಿರುವ ಒತ್ತಡವು ನಿಮ್ಮ ದೇಹದಲ್ಲಿ ಕೆಟ್ಟ ಪ್ರಭಾವ ಬೀರುವ ಮೂಲಕ ನಿಮ್ಮ ಒತ್ತಡ ಮಟ್ಟವನ್ನು ಹೆಚ್ಚಿಸುತ್ತದೆ.  

4 /7

ನೀವು ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಕಚೇರಿಗೆ ವಿಷಯಕ್ಕೆ ಸಂಬಂಧಿಸಿದ ಮನಸ್ಸಿನ ಒತ್ತಡಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ರಹಸ್ಯವಾಗಿಡಲು ಪ್ರಯತ್ನಿಸಿದರೆ, ಆಗ ಋಣಾತ್ಮಕ ಆಲೋಚನೆಗಳು ನಿಮ್ಮಲ್ಲಿ ಬೆಳೆಯುತ್ತವೆ. ಕೋಪ ಮತ್ತು ಕಿರಿಕಿರಿಯು ಹೆಚ್ಚಾಗುತ್ತದೆ.

5 /7

ಮನಸ್ಸಿನಲ್ಲಿ ಹೆಚ್ಚು ಒತ್ತಡ ಹೊಂದಿರುವ ಜನರು, ಅವರು ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಬೆಳವಣಿಗೆ ಕೂಡ ಕುಂಠಿತವಾಗುತ್ತದೆ.

6 /7

ಬಹಿರಂಗವಾಗಿ ಮಾತನಾಡುವವರು, ಕಡಿಮೆ ಒತ್ತಡದ ಮಟ್ಟವನ್ನು ಹೊಂದಿರುತ್ತಾರೆ. ಈ ಕಾರಣದಿಂದ, ಅವರು ಎಂತಹದ್ದೇ ಸವಾಲುಗಳಿದ್ದರೂ ಚೆನ್ನಾಗಿ ನಿರ್ವಹಿಸುತ್ತಾರೆ.  

7 /7

ನಿಮ್ಮ ಆರೋಗ್ಯವನ್ನು ಚೆನ್ನಾಗಿ ಉಳಿಸಿಕೊಳ್ಳಬೇಕೆಂದರೆ ಮೊದಲು ಒತ್ತಡದಿಂದ ದೂರವಿರಲು ಪ್ರಯತ್ನಿಸಿ.