ಮಾನವೀಯತೆಯೇ ಶ್ರೀಮಂತಿಕೆ ಎಂದು ಸಾರಿದ ʻರಾಜಕುಮಾರʼ.. ಸಮಾಜಕ್ಕಾಗಿ ಅಪ್ಪು ಮುಡಿಪಿಟ್ಟಿದ್ದು ಎಷ್ಟು ಕೋಟಿ ಗೊತ್ತೇ?

Written ByDeepa A Reddy
Published: Oct 29, 2025, 08:15 AM IST|Updated: Oct 29, 2025, 08:15 AM IST

Puneeth Rajkumar: ಅಪ್ಪು ಅಗಲುವ ಮುನ್ನ ಸಾಕಷ್ಟು ಜನರಿಗೆ ನೆರವಾಗಿದ್ದರು.
 

1/10

Puneeth Rajkumar: ಅಕ್ಟೋಬರ್ 29, 2021 ಈ ದಿನ ಕನ್ನಡಿಗರ ಪಾಲಿಗೆ ಅರಗಿಸಿಕೊಳ್ಳಲಾಗದ ದಿನ. ಅಪ್ಪು ನಮ್ಮನ್ನೆಲ್ಲಾ ಅಗಲಿ ಇಂದಿಗೆ ನಾಲ್ಕು ವರ್ಷ.   

2/10

ಕನ್ನಡಿಗರ ಪಾಲಿಗೆ ಅಪ್ಪು ದೇವರಂತೆ, ಜನದಿಂದ ಮರೆಯಾದರೂ ಎಂದಿಗೂ ಅಭಿಮಾನಿಗಳ ಮನಸ್ಸಿಂದ ಮರೆಯಾಗದ ಮಾಣಿಕ್ಯ ಅಪ್ಪು.   

3/10

ಪುನೀತ್‌ ರಾಜ್‌ಕುಮಾರ್‌ ತಮ್ಮ ನಟನೆ, ನೃತ್ಯದಿಂದ ಅಷ್ಟೇ ಅಲ್ಲದೆ ತಮ್ಮ ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದರು.   

4/10

ಪುನೀತ್‌ ರಾಜ್‌ಕುಮಾರ್‌ ಅವರು ಬದುಕಿರುವಷ್ಟೂ ದಿನ ಲಕ್ಷ ಲಕ್ಷ ಮಂದಿಗೆ ಸಹಾಯ ಹಸ್ತ ಚಾಚಿದ್ದರು. ಎಡಗೈಯಲ್ಲಿ ಕೊಟ್ಟಿದ್ದು, ಬಲಗೈಗೆ ತಿಳಿಯದಂತೆ ಸಹಾಯ ಮಾಡುತ್ತಿದ್ದರು.   

5/10

ರಾಜ್‌ಕುಮಾರ ಎಂಬುದು ಅವರ ಹೆಸರಿನಲ್ಲಿ ಅಷ್ಟೇ ಅಲ್ಲ, ಅವರ ಗುಣದಲ್ಲಿಯೂ ಇತ್ತು. ಹೆಸರಿಗೆ ತಕ್ಕಂತೆ ಪುನೀತ್‌ ರಾಜಕುಮಾರನಾಗಿದ್ದರು.   

6/10

ಪುನೀತ್‌ ಅವರು ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ ಅನೇಕ ಜನರಿಗೆ ಸಹಾಯ ಮಾಡಿದ್ದರು. ಪುನೀತ್‌ ಅವರ ಅಗಲಿಕೆಯವರೆಗೂ ಅವರು ಮಾಡಿದ್ದ ಈ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ.   

7/10

ಅನಾಥಾಶ್ರಮ, ವೃದ್ಧಾಶ್ರಮ ಅಷ್ಟೇ ಅಲ್ಲ ಗೋಶಾಲೆಗಳಿಗೂ ಪುನೀತ್‌ ರಾಜ್‌ಕುಮಾರ್‌ ಅವರು ಎಲೆ ಮರೆಯಲಿದ್ದು, ಸೇವೆ ಮಾಡಿದ್ದರು.   

8/10

26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು ಸೇರಿ ಅಪ್ಪು 19 ಗೋಶಾಲೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದರು ಎಂದು ವರದಿಯಾಗಿದೆ.   

9/10

ಪುನೀತ್‌ ರಾಜ್‌ಕುಮಾರ್‌ ಅವರು 45ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ನೆರವು ನೀಡಿದ್ದಾರೆ.   

10/10

ಹೀಗೆ ಪುನೀತ್‌ ರಾಜ್‌ಕುಮಾರ್‌ ಅವರು ಸಮಾಜ ಸೇವೆಗಾಗಿ ಕೋಟಿ ಕೋಟಿ ಹಣವನ್ನು ವೆಚ್ಚ ಮಾಡಿದ್ದರು. ಸಮಾಜ ಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು.