ಮದುವೆಗೂ ಮುನ್ನವೇ 34 ಮಕ್ಕಳ ತಾಯಿಯಾದ ಸ್ಟಾರ್‌ ನಟಿ..! ಈಕೆಗೂ IPL ಗೂ ಇದೆ ಬಿಗ್‌ ಲಿಂಕ್‌

Actress Life : ಇತ್ತೀಚಿಗೆ ಮದುವೆಯಗೂ ಮುನ್ನ ನಟಿಯರು ತಾಯಿಯಾಗುವುದು ಸಾಮಾನ್ಯ ವಿಚಾರವಾಗಿದೆ. ಅಲ್ಲದೆ, ಕೆಲವು ನಟಿಯರು ಮಗು ಪಡೆದ ನಂತರ ವಿವಾಹವಾದ ಉದಾರಹಣೆಗಳೂ ಇವೆ. ಈ ಪೈಕಿ ಈ ಸ್ಟಾರ್‌ ನಟಿಯೊಬ್ಬರು ಸಾಂಸಾರಿಕ ಜೀವನಕ್ಕೆ ಕಾಲಿಡುವ ಮುನ್ನವೇ 34 ಮಕ್ಕಳ ತಾಯಿಯಾದರು..

1 /6

ಸೆಲೆಬ್ರಿಟಿಗಳು ಮಕ್ಕಳನ್ನು ದತ್ತು ಪಡೆಯುವುದು ಹೊಸದೇನಲ್ಲ. ಅನೇಕ ಸ್ಟಾರ್ ಹೀರೋಗಳು, ಹೀರೋಯಿನ್‌ಗಳು ಮತ್ತು ಕ್ರಿಕೆಟಿಗರು ಈಗಾಗಲೇ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೂ, ಕೆಲವು ನಾಯಕಿಯರು ಮದುವೆಗೆ ಮುಂಚೆಯೇ ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ರೂಪಿಸುತ್ತಿದ್ದಾರೆ.

2 /6

ಇತ್ತೀಚೆಗೆ, ಟಾಲಿವುಡ್ ಸೆನ್ಸೇಷನ್ ಶ್ರೀಲೀಲಾ ಇಬ್ಬರು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸುದ್ದಿಯಾಗಿದ್ದರು. ಅದರ ನಂತರ, ರವೀನಾ ಟಂಡನ್ ಮತ್ತು ವಿಶ್ವ ಸುಂದರಿ ಸುಶ್ಮಿತಾ ಸೇನ್ ಕೂಡ ಮದುವೆಗೆ ಮೊದಲು ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.. ಆದರೆ, ಅನೇಕರಿಗೆ ತಿಳಿಯದ ವಿಚಾರ ಅಂದ್ರೆ, ಸ್ಟಾರ್‌ ನಟಿ ಒಬ್ಬರು..  34 ಅನಾಥ ಹುಡುಗಿಯರನ್ನು ಪಡೆದುಕೊಂಡಿದ್ದಾರೆ.. ಈ ವಿಚಾರ ಕೆಲವರಿಗೆ ಮಾತ್ರ ಗೊತ್ತಿದೆ.

3 /6

ಅಲ್ಲದೆ, ಅವರನ್ನು ತಮ್ಮ ಸ್ವಂತ ಮಕ್ಕಳಂತೆ ಅವರನ್ನು ನೋಡಿಕೊಳ್ಳುತ್ತಿದ್ದಾರೆ, ಶಿಕ್ಷಣದಿಂದ ಆಹಾರ ಮತ್ತು ಬಟ್ಟೆಯವರೆಗೆ ಎಲ್ಲವನ್ನೂ ಒದಗಿಸುತ್ತಿದ್ದಾರೆ. ಅಂತಹ ಒಳ್ಳೆಯ ಕೆಲಸ ಮಾಡುತ್ತಿರುವ ಮತ್ತು ಅದರ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟು ಕೊಡದ ನಟಿಯೂ ಇದ್ದಾರೆ.. ಅವರು ಬೇರೆ ಯಾರೂ ಅಲ್ಲ, ಬಾಲಿವುಡ್ ನಟಿ, ಐಪಿಎಲ್ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕೆ ಪ್ರೀತಿ ಜಿಂಟಾ.  

4 /6

ಹೌದು.. ಪ್ರೀತಿ ಜಿಂಟಾ 1998 ರಲ್ಲಿ ಶಾರುಖ್ ಖಾನ್ ಅವರ 'ದಿಲ್ ಸೇ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ಸಣ್ಣ ಪಾತ್ರವನ್ನು ನಿರ್ವಹಿಸಿದರು. ನಂತರ, 'ಕ್ಯಾ ಕೆಹ್ನಾ' ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಜನ ಮನ್ನಣೆ ಪಡೆದರು.

5 /6

ಪ್ರೀತಿ 2009 ರಲ್ಲಿ ತಮ್ಮ 34ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ತಮ್ಮ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು, ಅವರು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. 34 ಅನಾಥ ಹುಡುಗಿಯರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಈ ಎಲ್ಲಾ ಯುವತಿಯರ ಜವಾಬ್ದಾರಿಯನ್ನು ತಾವೇ ಹೊರುವುದಾಗಿ, ಮತ್ತು ಭೇಟಿ ಮಾಡಲು ವರ್ಷಕ್ಕೆ ಎರಡು ಬಾರಿ ಋಷಿಕೇಶಕ್ಕೆ ಬರುವುದಾಗಿ ಪ್ರೀತಿ ಹೇಳಿದರು.

6 /6

ಪ್ರೀತಿ 2021 ರಲ್ಲಿ ಸರೊಗಸಿ ಮೂಲಕ ಜಯ್ ಮತ್ತು ಜಿಯಾ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಪ್ರಸ್ತುತ ಚಲನಚಿತ್ರಗಳಿಂದ ದೂರವಿದ್ದು, ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ. ಇತ್ತೀಚಿಗೆ ಪಂಜಾಬ್‌ ಕಿಂಗ್ಸ್‌ ಆರ್‌ಸಿಬಿ ವಿರುದ್ಧ ಸೋಲು ಕಂಡಿತು.