Rakshita Shetty remuneration in Bigg Boss: ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಸಿಹಿ ಮಾತುಗಳು ಮತ್ತು ಕನ್ನಡ ಮಾತನಾಡುವ ಪ್ರಯತ್ನಗಳು ವೀಕ್ಷಕರ ಗಮನ ಸೆಳೆಯುತ್ತಿವೆ.
1/7ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಸಿಹಿ ಮಾತುಗಳು ಮತ್ತು ಕನ್ನಡ ಮಾತನಾಡುವ ಪ್ರಯತ್ನಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಅಷ್ಟೇ ಅಲ್ಲ, ಕಳೆದ ವಾರ, ಗಿಲ್ಲಿ ಅವರ ಮಾತುಗಳನ್ನು ಕೇಳಿ ರಕ್ಷಿತಾ ಅವರ ಆಟ ಹಾಳುಮಾಡಿಕೊಂಡಿದ್ದರು. ಅದೇ ಕಾರಣಕ್ಕೆ ಕಿಚ್ಚ ಸುದೀಪ್ ಈ ವಿಷಯದ ಬಗ್ಗೆ ರಕ್ಷಿತಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
2/7ಆದರೆ ರಕ್ಷಿತಾ ಸುದೀಪ್ ಅವರ ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಈ ವಾರ ತನ್ನದೇ ಆದ ರೀತಿಯಲ್ಲಿ ಚೆನ್ನಾಗಿ ಆಡಿದ್ದಾರೆ. ಅವರು ಎಲ್ಲಾ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿದ್ದಲ್ಲದೆ, ಮಾನವೀಯತೆಯನ್ನೂ ಮೆರೆದಿದ್ದಾರೆ. ಇದೇ ಕಾರಣಗಳನ್ನು ಪರಿಗಣಿಸಿ ರಕ್ಷಿತಾಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
3/7ಕಳೆದ ವಾರ, ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ಟಾಸ್ಕ್‌ನಲ್ಲಿ ಬೇರೆ ಬೇರೆ ತಂಡಗಳಲ್ಲಿದ್ದರು. ಅದೇ ರೀತಿ, ರಕ್ಷಿತಾ ಅವರ ತಂಡವು ಪಂದ್ಯವನ್ನು ಗೆದ್ದಿತು. ಈ ಕಾರಣಕ್ಕಾಗಿ, ಅವರ ತಂಡದ ಒಬ್ಬ ಸದಸ್ಯರನ್ನು ನಾಮನಿರ್ದೇಶನದಿಂದ ರಕ್ಷಿಸಬೇಕಾಗಿತ್ತು. ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕಾಗಿತ್ತು. ಇದನ್ನು ಚರ್ಚಿಸಲು ಹೊರಡುವ ಮೊದಲು, ಗಿಲ್ಲಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಮಾತನಾಡಿದ್ದರು. "ಏನೇ ಆಗಲಿ ರಕ್ಷಿತಾ, ನೀನು ನಿನ್ನ ನಿರ್ಧಾರ ಬಿಡಬಾರದು" ಎಂದು ಗಿಲ್ಲಿ ರಕ್ಷಿತಾಗೆ ಹೇಳಿದ್ದಳು. ಕಳೆದ ವಾರ ಕಿಚ್ಚ ಈ ಬಗ್ಗೆ ಪ್ರಸ್ತಾಪಿಸಿ ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದರು.
4/7ಒಟ್ಟಾರೆಯಾಗಿ, ರಕ್ಷಿತಾ ತನ್ನ ಶೆಟ್ಟಿ ತರಹದ ಮಾತು ಮತ್ತು ನೇರ ಭಾಷೆಯಿಂದ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ. ಇಷ್ಟು ದಿನ ಯಾರಿಗೂ ತೊಂದರೆ ಕೊಡದೆ ಆಟವಾಡುತ್ತಿದ್ದ ರಕ್ಷಿತಾ, ಕಳೆದ ವಾರ ಗಿಲ್ಲಿಯ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಹೀಗಾಗಿ, ಕಳೆದ ವಾರಾಂತ್ಯದಲ್ಲಿ ಸುದೀಪ್ ರಕ್ಷಿತಾ ಶೆಟ್ಟಿಗೆ ಕೆಲವು ವಿಷಯಗಳನ್ನು ವಿವರಿಸಿದ್ದರು.
5/7ಅಂದಹಾಗೆ ರಕ್ಷಿತಾ ಶೆಟ್ಟಿ ಮೂಲತಃ ಕರಾವಳಿ ಭಾಗದವರು. ಇವರು ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತೃಭಾಷೆ ತುಳು ಆದ ಕಾರಣ ಅವರಿಗೆ ಕನ್ನಡ ಸರಿಯಾಗಿ ಓದಲು ಬರೆಯಲು ಬರುತ್ತಿರಲಿಲ್ಲ. ಆದರೆ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ರಕ್ಷಿತಾ ಕಷ್ಟಪಟ್ಟು, ಇಷ್ಟಪಟ್ಟು ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಹಾಗೆಯೇ ವಿಡಿಯೋ ಕೂಡ ಮಾಡುತ್ತಾರೆ. ಬ
6/7ರಕ್ಷಿತಾ ಶೆಟ್ಟಿ ವಿವಾ ಕಾಲೇಜಿನಲ್ಲಿ ಬಿಎ ಎಂಎಂಸಿ (ಬ್ಯಾಚುಲರ್ ಆಫ್ ಆರ್ಟ್ಸ್ ಮಾಸ್ ಮೀಡಿಯಾ ಕಮ್ಯೂನಿಕೇಷನ್) ಓದಿದ್ದಾರೆ. ಡಿಗ್ರಿ ಮುಗಿಸಿರುವ ರಕ್ಷಿತಾ ಶೆಟ್ಟಿಗೆ ಸ್ನಾತಕೋತ್ತರ ಪದವಿ ಪಡೆಯಲು ಆಸಕ್ತಿ ಇಲ್ವಂತೆ. ಕೊರೊನಾ ಟೈಮ್‌ನಲ್ಲಿ ಅಜ್ಜಿ ಮನೆ (ಮಂಗಳೂರು)ಗೆ ಬಂದಿದ್ದ ರಕ್ಷಿತಾ ಅಲ್ಲಿ ಸಾಮಾನ್ಯವಾಗಿ ಮಾಡಿದ ಒಂದು ರೀಲ್ ವೈರಲ್ ಆಗಿತ್ತು. ಹೀಗಾಗಿ ಅಲ್ಲಿಂದ ವಿಡಿಯೋ ಮಾಡುತ್ತಾ ಬಂದಿರುವ ಅವರು, ಸದ್ಯ ಫೇಮಸ್ ಆಗಿದ್ದಾರೆ. ಈಗ ಯೂಟ್ಯೂಬ್‌ನಲ್ಲಿ 349K subscribersನ್ನು ಹೊಂದಿದ್ದಾರೆ.
7/7ಕೆಲವೊಂದು ಮೂಲಗಳ ಪ್ರಕಾರ ಅವರ ಸಂಭಾವನೆ ವಾರಕ್ಕೆ 25 ಸಾವಿರ ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟತೆ ಇಲ್ಲ. ಇನ್ನು ರಕ್ಷಿತಾ ಅವರ ಯೂಟ್ಯೂಬ್ ಆದಾಯದ ಬಗ್ಗೆ ಮಾತನಾಡುವುದಾದರೆ, ಒಬ್ಬ ಯೂಟ್ಯೂಬರ್ 3,00,000 ಚಂದಾದಾರರನ್ನು ಹೊಂದಿದ್ದರೆ ಜಾಹೀರಾತುಗಳಿಂದ ಮಾಸಿಕ ರೂ.88840 ರಿಂದ ರೂ. 534417 ವರೆಗೆ ಗಳಿಸಬಹುದು. ಇದರ ಹೊರತಾಗಿ ಕಂಟೆಂಟ್ ಲೈಸನ್ಸಿಂಗ್ ಮತ್ತು ಬ್ರ್ಯಾಂಡ್ ಡೀಲ್‌ಗಳಿಂದ ಒಂದು ವರ್ಷದಲ್ಲಿ $50,000 ಕ್ಕಿಂತ ಹೆಚ್ಚು ಗಳಿಸಬಹುದು. ಹೀಗಿರುವಾಗ ರಕ್ಷಿತಾ ಶೆಟ್ಟಿಯವರು 349K subscribersನ್ನು ಹೊಂದಿದ್ದಾರೆ. ಅವರ ಆದಾಯ ಇದರ ಆಸುಪಾಸಿನಲ್ಲೇ ಇರಬಹುದು ಎಂದು ಅಂದಾಜಿಸಬಹುದಾಗಿದೆ.