Boss Kannada new season contestants: ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
1/6ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ. ಬಿಗ್ ಬಾಸ್ ಶುರುವಾಗುವ ದಿನ ಹತ್ತಿರವಾಗ್ತಿದ್ದಂತೆ ಕಂಟೆಸ್ಟಂಟ್ ಗಳ ಹೆಸರು ಸಹ ಸಖತ್ ವೈರಲ್ ಆಗುತ್ತಿದೆ.
2/6ಬಿಗ್ ಬಾಸ್ ಮನೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಾಮಾಚಾರಿ ಧಾರಾವಾಹಿಯಲ್ಲಿರುವ ಖ್ಯಾತ ನಟಿ ಒಬ್ಬರು ಬರಲಿದ್ದಾರೆ ಎನ್ನಲಾಗುತ್ತಿದೆ.
3/6ರಾಮಾಚಾರಿ ಕಳೆದ ನಾಲ್ಕು ವರ್ಷಗಳಿಂದ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಚಾರು ಪಾತ್ರವನ್ನು ನಿರವಹಿಸುವ ಮೌನ ಗುಡ್ಡೆಮನೆ ತಮ್ಮದೇ ಫ್ಯಾನ್ ಬೇಸ್ ಹೊಂದಿದ್ದಾರೆ.
4/6ಮೌನ ಗುಡ್ಡೆಮನೆ ಬಿಗ್ ಬಾಸ್ ಕನ್ನಡ ಸೀಸನ್ 12 ರ ಮನೆಗೆ ಸ್ಪರ್ಧಿಯಾಗಿ ಬರಲಿದ್ದಾರೆ ಎಂಬ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
5/6ಮೌನ ಗುಡ್ಡೆಮನೆ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ಮನೆಗೆ ಮೌನ ಗುಡ್ಡೆಮನೆ ಬರೋದು ಕನ್ಫರ್ಮ್ ಎನ್ನಲಾಗುತ್ತಿದೆ.
6/6ಬಿಗ್ ಬಾಸ್ ಮನೆಗೆ ಬರುವ ಬಗ್ಗೆ ಬಿಗ್ ಬಾಸ್ ತಂಡವಾಗಲಿ ನಟಿ ಮೌನ ಗುಡ್ಡೆಮನೆ ಆಗಲಿ ಖಚಿತ ಮಾಹಿತಿ ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.