ಖ್ಯಾತ ನಟಿಯ ಅಂದಕ್ಕೆ ಮಾರುಹೋಗಿ ಪ್ರೀತಿಯನ್ನೇ ಮರೆತ ರಣಬೀರ್‌..! ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವನಿಂದಲೇ ಮೋಸ ಹೋದ ದೀಪಿಕಾ.

Published: Nov 20, 2025, 06:24 PM IST|Updated: Nov 20, 2025, 06:24 PM IST

Deepika Love Story : ರಣಬೀರ್‌ ಕಪೂರ್‌ ಮತ್ತು ದೀಪಿಕಾ ಪಡಕೋಣೆ ಪ್ರೇಮಕಥೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರಿಬ್ಬರ ನಡುವೆ ಈ ಖ್ಯಾತ ನಟಿಯ ಪ್ರವೇಶದಿಂದ ಅವರು ಬೇರೆಯಾದರು ಎಂಬುವುದು ಬಹಳ ಜನಕ್ಕೆ ಗೊತ್ತಿಲ್ಲ. ಇಲ್ಲಿದೆ ನೋಡಿ ಅವರ ಅಚ್ಚರಿಯ ಲವ್‌ಸ್ಟೋರಿ
 

1/8

Deepika Love Story: ಬಾಲಿವುಡ್‌ನಲ್ಲಿ ಹಲವು ಪ್ರೇಮಕಥೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅವುಗಳಲ್ಲಿ ಒಂದು ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅವರ ಲವ್ ಸ್ಟೋರಿ ಕೂಡ ಒಂದು. ಈ ಇಬ್ಬರು ತಮ್ಮ ಕಾಲದ ಅತ್ಯಂತ ಜನಪ್ರೀಯತೆ ಪಡೆದಿದ್ದರು, ಹಾಗೂ ಅವರ ಸಂಬಂಧವು ಅಭಿಮಾನಿಗಳಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಯಿತು.    

2/8

ಅವರ ಮೊದಲ ಭೇಟಿಯು "ಬಚ್‌ನ ಆ ಏ ಹಸೀನೋ" ಚಿತ್ರದ ಸಮಯದಲ್ಲಿ ಆಯಿತು. ಚಿತ್ರೀಕರಣದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿತು. ಈ ಸ್ನೇಹವೇ ಪ್ರೀತಿಯಾಗಿ ಮಾರ್ಪಟ್ಟಿತು. ಆ ಸಮಯದಲ್ಲಿ ದೀಪಿಕಾ ತನ್ನ ಕೈ ಮೇಲೆ ರಣಬೀರ್ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದರಿಂದಲೇ ಆ ಪ್ರೀತಿಯ ಆಳತೆ ಸ್ಪಷ್ಟವಾಯಿತು.    

3/8

ದೀಪಿಕಾ ಮತ್ತು ರಣಬೀರ್ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ಹಿಂದೇಟು ಹಾಕಲಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ, ಮತ್ತು ಪಾರ್ಟಿಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಆಗಾಗ ಚರ್ಚೆಯಾಗುತ್ತಿದ್ದರು. ಅಭಿಮಾನಿಗಳು ಇವರಿಬ್ಬರನ್ನು ಬಾಲಿವುಡ್‌ನ ಪರ್ಫೆಕ್ಟ್ ಜೋಡಿ ಎಂದು ಕರೆಯುತ್ತಿದ್ದರು.    

4/8

ಆದರೆ, ಎಲ್ಲ ಪ್ರೇಮಕಥೆಗಳಂತೆ ಈ ಜೋಡಿಯ ನಡುವೆಯೂ ಸಹ ಸವಾಲುಗಳು ಬಂದವು. ಸಮಯ ಕಳೆಯುತ್ತಿದ್ದಂತೆ, ರಣಬೀರ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ವದಂತಿಗಳು ಹೊರಬಂದವು. ವಿಶೇಷವಾಗಿ, ಅವರ ಕತ್ರಿನಾ ಕೈಫ್ ಜೊತೆಗೆ ಬೆಳೆದ ಪ್ರೇಮ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು.    

5/8

ರಣಬೀರ್ ಮತ್ತು ಕತ್ರಿನಾ ಬೀಚ್ ಪ್ರವಾಸದ ಖಾಸಗಿ ಫೋಟೋಗಳು ಹೊರಬಂದ ನಂತರ, ದೀಪಿಕಾ-ರಣಬೀರ್ ಸಂಬಂಧದಲ್ಲಿ ಭಾರೀ ಬಿರುಕು ಬಂತು. ಈ ಚಿತ್ರಗಳು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೀಪಿಕಾ ಅಭಿಮಾನಿಗಳನ್ನು ಕಳವಳಗೊಳಿಸಿತು.    

6/8

ಈ ಘಟನೆ ದೀಪಿಕಾಗೆ ಭಾರೀ ಆಘಾತ ತಂದಿತು. ಅವರು ಕೆಲವು ಕಾಲ ಡಿಪ್ರೆಶನ್‌ನಲ್ಲೂ ಮುಳುಗಿದ್ದರು ಎಂಬುವುದನ್ನ ನಟಿ ಸಂದರ್ಶನಗಳಲ್ಲಿ ಸ್ವತಃ ಹೇಳಿಕೊಂಡಿದ್ದಾರೆ. ಮೊದಲೇ ಕತ್ರಿನಾ ಮತ್ತು ರಣಬೀರ್‌ ಪ್ರೇಮವದಂತಿಗಳಿಂದ ಆಘಾತವಾಗಿದ್ದ ದೀಪಿಕಾಗೆ ಅವರಿಬ್ಬರೂ ಬೀಚ್‌ನಲ್ಲಿದ್ದ ವೈಯಕ್ತಿಕ ಫೋಟೊಗಳು ಹೊಬರುತ್ತಿದ್ದಂತೆ, ರಣಬೀರ್‌ ದೀಪಿಕಾಗೆ ಪ್ರೀತಿ ಹೆಸರಿನಲ್ಲಿ ಮೋಸ ಮಾಡುತ್ತಿರುವದು ತಿಳಿದು, ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದರು.     

7/8

ಆದರೂ, ಈ ಅನುಭವವು ದೀಪಿಕಾವನ್ನು ಮತ್ತಷ್ಟು ಶಕ್ತಿಶಾಲಿಯಾಗಿ ರೂಪಿಸಿತು. ಅವರು ತಮ್ಮ ವೃತ್ತಿಜೀವನದಲ್ಲಿ ಗಮನ ಹರಿಸಿದರು, ಹಲವಾರು ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟರು ಮತ್ತು ನಿಧಾನವಾಗಿ ತಮ್ಮ ನೋವನ್ನು ಜಯಿಸಿದರು. ಇದೇ ಸಮಯದಲ್ಲಿ ಅವರು ಮಾನಸಿಕ ಆರೋಗ್ಯದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸಲು ಮುಂದಾದರು.    

8/8

ಒಟ್ಟಾರೆ, ದೀಪಿಕಾ ಮತ್ತು ರಣಬೀರ್ ಅವರ ಪ್ರೇಮ ಕಥೆ ಪ್ರಾರಂಭದಲ್ಲಿ ಕನಸಿನಂತೆ ಕಂಡರೂ, ಕತ್ರೀನಾ ಕೈಫ್ ಪ್ರವೇಶದ ನಂತರ ದೊಡ್ಡ ತಿರುವು ಕಂಡಿತು. ಈ ಪ್ರೇಮಕಥೆ ಕೊನೆಗೊಂಡಿದ್ದರೂ, ದೀಪಿಕಾ ತಮ್ಮ ಜೀವನದಲ್ಲಿ ಮತ್ತಷ್ಟು ಬೆಳೆದು, ಆ ನಂತರ ರಣವೀರ್ ಸಿಂಗ್ ಅವರೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು.