50 ವರ್ಷಗಳ ಬಳಿಕ ಅಪರೂಪದ ಚತುರ್ಗ್ರಹಿ ರಾಜಯೋಗ: 3 ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ರಾಜವೈಭೋಗದ ಜೀವನ

Written ByYashaswini V
Published: Dec 02, 2025, 07:21 AM IST|Updated: Dec 02, 2025, 07:21 AM IST

Chaturgrahi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಇದೀಗ  50 ವರ್ಷಗಳ ನಂತರ ಚತುರ್ಗ್ರಹಿ ಯೋಗ ನಿರ್ಮಾಣವಾಗುತ್ತಿದೆ.

Chaturgrahi Yoga1/6

ಚತುರ್ಗ್ರಹಿ ಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ, ಡಿಸೆಂಬರ್‌ನಲ್ಲಿ ಸೂರ್ಯ, ಬುಧ, ಮಂಗಳ, ಶುಕ್ರ ಗ್ರಹಗಳ ಸಂಯೋಗದಿಂದ ಚತುರ್ಗ್ರಹಿ ಯೋಗ ನಿರ್ಮಾಣವಾಗಲಿದೆ.

Chaturgrahi Yoga2/6

50 ವರ್ಷಗಳ ನಂತರ ಚತುರ್ಗ್ರಹಿ ಯೋಗ

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸುಮಾರು 50 ವರ್ಷಗಳ ಬಳಿಕ ಈ ರೀತಿಯಾಗಿ  ಧನು ರಾಶಿಯಲ್ಲಿ ಸೂರ್ಯ, ಬುಧ, ಮಂಗಳ, ಶುಕ್ರರ ಸಂಯೋಗದಿಂದ ಚತುರ್ಗ್ರಹಿ ರಾಜಯೋಗ ರೂಪುಗೊಳ್ಳಲಿದೆ.

Chaturgrahi Yoga3/6

ಮೂರು ರಾಶಿಯವರ ಲಕ್‌ ಚೇಂಜ್‌

50 ವರ್ಷಗಳ ನಂತರ ಧನುರ್‌ ಮಾಸದಲ್ಲಿ ನಿರ್ಮಾಣವಾಗಲಿರುವ ಈ ಅಪರೂಪದ ಚತುರ್ಗಹಿ ರಾಜಯೋಗದ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಮೂರು ರಾಶಿಯವರಿಗೆ ಇದು ಅದೃಷ್ಟದ ಸಮಯ ಎನ್ನಲಾಗುತ್ತಿದೆ.

Chaturgrahi Yoga4/6

ಮೇಷ ರಾಶಿ

50 ವರ್ಷಗಳ ನಂತರ ಬಳಿಕ ನಿರ್ಮಾಣವಾಗಲಿರುವ ಅಪರೂಪದ ಚತುರ್ಗಹಿ ರಾಜಯೋಗವು ಈ ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ವೇಳೆ ವೃತ್ತಿ ಬದುಕಿನಲ್ಲಿ ಏಳ್ಗೆಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳಲಿದೆ. 

Chaturgrahi Yoga5/6

ವೃಶ್ಚಿಕ ರಾಶಿ

ಧನುರ್‌ ಮಾಸದಲ್ಲಿ ನಿರ್ಮಾಣಗೊಳ್ಳಲಿರುವ ಚತುರ್ಗ್ರಹಿ ಯೋಗವು ಈ ರಾಶಿಯವರ ಬಾಳಲ್ಲಿ ಕಷ್ಟದ ದಿನಗಳಿಂದ ಮುಕ್ತಿ ನೀಡಿ ರಾಜವೈಭೋಗದ ಜೀವನವನ್ನು ತರಲಿದೆ. ಹಠಾತ್‌ ಧನಲಾಭವು ನಿಮ್ಮನ್ನು ಸಾಲಭಾದೆಯಿಂದ ಹೊರತರಲಿದೆ. ದಾಂಪತ್ಯ ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಹಿಂದಿನ ಹೂಡಿಕೆಗಳಿಂದ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿ ಪ್ರಗತಿಯ ಹಾದಿ ತೆರೆಯಲಿದೆ.

Chaturgrahi Yoga6/6

ಮೀನ ರಾಶಿ

ಚತುರ್ಗ್ರಹಿ ರಾಜಯೋಗವು ಈ ರಾಶಿಯವರ ಬಾಳಲ್ಲಿ ಶುಭ ಫಲಗಳನ್ನು ಹೆಚ್ಚಿಸಲಿದೆ.  ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.   ಆದಾಯದ ಮೂಲಗಳು ವೃದ್ಧಿಯಾಗಲಿವೆ. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ವೃತ್ತಿ ಬದಲಾವಣೆಗೆ ಅತ್ಯುತ್ತಮ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.