Dhan yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರ (ಅ.8) ಕೆಲವು ರಾಶಿಗಳಿಗೆ ಅತ್ಯಂತ ಶುಭದಿನವಾಗಿರಲಿದೆ. ಈ ದಿನ ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುವುದರಿಂದ ಮತ್ತು ಕುಜನ ಸಂಪೂರ್ಣ ದೃಷ್ಟಿಯಿಂದ ವಿಶೇಷವಾದ ಧನಯೋಗವು ರೂಪುಗೊಳ್ಳಲಿದೆ. ಗ್ರಹಗಳ ಈ ಅಪರೂಪದ ಸಂಯೋಜನೆಯು ಅನೇಕ ರಾಶಿಗಳ ಭವಿಷ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನ ತರಲಿದೆ. ಅಶ್ವಿನಿ ನಕ್ಷತ್ರದೊಂದಿಗೆ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗಗಳು ಈ ದಿನದ ಮಹತ್ವವನ್ನ ಹೆಚ್ಚಿಸಿವೆ. ಈ ಕಾರಣದಿಂದ ಮೇಷ ಮತ್ತು ಕರ್ಕ ರಾಶಿ ಸೇರಿದಂತೆ ಒಟ್ಟು ಐದು ರಾಶಿಗಳಿಗೆ ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆಯಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
1/6ಮೇಷ ರಾಶಿ: ಮೇಷ ರಾಶಿಯವರಿಗೆ ಅ.8 ಶುಭದಿನ. ನೀವು ಕೈಗೊಂಡ ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿದ್ದು, ಆದಾಯದಲ್ಲಿ ಗಣನೀಯ ಹೆಚ್ಚಳ ಕಂಡುಬರಲಿದೆ. ಇದು ನಿಮ್ಮ ಮನಸ್ಸಿಗೆ ಅಪಾರ ಸುಖ-ಸಂತೋಷ ನೀಡಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ನಿಮ್ಮ ಆಸೆಗಳು ಈ ದಿನ ಈಡೇರಲಿವೆ. ಹಳೆಯ ಹೂಡಿಕೆಗಳು ನಿಮಗೆ ಉತ್ತಮ ಲಾಭ ತರಲಿವೆ. ಹಳೆಯ ಪರಿಚಯಸ್ಥರಿಂದಲೂ ಸಹಕಾರ ದೊರೆಯಲಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ.
2/6ಕರ್ಕ ರಾಶಿ: ಕರ್ಕ ರಾಶಿಯವರಿಗೆ ವೃತ್ತಿ ಮತ್ತು ಕೆಲಸದ ವಿಷಯದಲ್ಲಿ ಇದು ಅತ್ಯಂತ ಅನುಕೂಲಕರ ದಿನ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿವೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿದ್ದವರಿಗೆ ಯಶಸ್ಸು ಖಂಡಿತ. ಆರ್ಥಿಕ ವಿಷಯಗಳಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಪ್ರೇಮ ಜೀವನದಲ್ಲಿಯೂ ನೀವು ಅದೃಷ್ಟವಂತರಾಗಿರುತ್ತೀರಿ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಸಿಗಲಿದೆ.
3/6ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಅವಕಾಶಗಳು ಸಿಗಲಿವೆ. ಎಲ್ಲಾ ಕ್ಷೇತ್ರದಲ್ಲಿಯೂ ನಿಮಗೆ ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಆರ್ಥಿಕವಾಗಿ ಅದೃಷ್ಟ ನಿಮ್ಮನ್ನ ಬೆಂಬಲಿಸುತ್ತದೆ. ಅನಗತ್ಯ ಖರ್ಚುಗಳು ನಿಯಂತ್ರಣಕ್ಕೆ ಬಂದು ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹೂಡಿಕೆಯ ಮೂಲಕವೂ ನೀವು ಉತ್ತಮ ಹಣ ಗಳಿಸಬಹುದು. ನಿಮ್ಮ ಅದೃಷ್ಟವು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನ ತಂದುಕೊಡಲಿದೆ.
4/6ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಆರ್ಥಿಕ ಲಾಭದ ಹಲವು ಅವಕಾಶಗಳು ದೊರೆಯಲಿವೆ. ಸಾಲವಾಗಿ ನೀಡಿದ ಹಣ ಮರಳಿ ಸಿಗುವ ಸಾಧ್ಯತೆಯಿದೆ. ಎಲ್ಲಾ ಸಮಸ್ಯೆಗಳು ಬಗೆಹರಿದು ನಿಮಗೆ ಅದೃಷ್ಟದ ಬೆಂಬಲ ಸಿಗಲಿದೆ. ನಿಮ್ಮ ಕುಟುಂಬದಿಂದ ಸಂಪೂರ್ಣ ಸಹಕಾರ ಸಿಗಲಿದೆ. ಲಾಭ ಗಳಿಸುವ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ವೈವಾಹಿಕ ಜೀವನವು ಪ್ರೀತಿ ಮತ್ತು ಸಂತೋಷದಿಂದ ತುಂಬಿರುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರಿಂದಲೂ ಆರ್ಥಿಕ ಲಾಭ ದೊರೆಯುವ ಸಾಧ್ಯತೆಯಿದೆ.
5/6ಮಕರ ರಾಶಿ: ಮಕರ ರಾಶಿಯವರಿಗೆ ಅ.8 ತುಂಬಾ ಲಾಭದಾಯಕ ದಿನವಾಗಿರಲಿದೆ. ನಿಮ್ಮ ಸುಖ-ಸಂತೋಷ ಹೆಚ್ಚಾಗುತ್ತದೆ. ಅದೃಷ್ಟದ ನಿಮ್ಮ ಪರವಾಗಿರಲಿದ್ದು, ದೊಡ್ಡ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ತಂದೆಯಿಂದಲೂ ಆರ್ಥಿಕ ಲಾಭ ಸಿಗಲಿದೆ. ವಾಹನ ಖರೀದಿಸಲು ಪ್ರಯತ್ನಿಸುತ್ತಿದ್ದರೆ ಇದುವೇ ಶುಭ ಸಮಯ. ವ್ಯವಹಾರದಲ್ಲಿ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದ್ದು, ದೊಡ್ಡಮಟ್ಟದ ಲಾಭವನ್ನ ತಂದುಕೊಡುತ್ತದೆ. ಸರ್ಕಾರಿ ಕ್ಷೇತ್ರದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
6/6(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)