50 ವರ್ಷಗಳ ಬಳಿಕ ಅಪರೂಪದ ತ್ರಿಗ್ರಹಿ ಯೋಗ: ಈ ರಾಶಿಯವರ ಲಕ್ ಚೇಂಜ್, ರಾಜವೈಭೋಗದ ಜೀವನ

Written ByYashaswini VUpdated byYashaswini V
Published: May 15, 2025, 07:06 AM IST|Updated: May 15, 2025, 07:06 AM IST

Trigrahi Yoga: ಒಂದೇ ರಾಶಿಯಲ್ಲಿ ಹಲವು ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. 

Trigrahi Yog1/6

ಬರೋಬ್ಬರಿ 50 ವರ್ಷಗಳ ಬಳಿಕ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳು ಒಟ್ಟಿಗೆ ಸೇರಲಿದ್ದು ಅತ್ಯಂತ ಮಂಗಳಕರವಾದ ತ್ರಿಗ್ರಹಿ ಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಕೆಲವು ರಾಶಿಯವರ ಲಕ್ ಚೇಂಜ್ ಆಗಲಿದ್ದು ಕೈ ತುಂಬಾ ಹಣದ ಜೊತೆ ಸಮಾಜದಲ್ಲಿ ಕೀರ್ತಿ ಸಂಪತ್ತು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. 

Aries2/6

ಮೇಷ ರಾಶಿ: ತ್ರಿಗ್ರಹಿ ಯೋಗದಿಂದಾಗಿ ಈ ರಾಶಿಯವರಿಗೆ ಹೊಸ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ದೊರೆಯಲಿವೆ. ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಸುಸಮಯ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. 

Gemini3/6

ಮಿಥುನ ರಾಶಿ:  ತ್ರಿಗ್ರಹಿ ಯೋಗವು ಈ ರಾಶಿಯಯ್ವಾರ ಬದುಕಿನಲ್ಲಿ ಶುಭ ದಿನಗಳನ್ನು ತರಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗಸ್ಥರಿಗೆ ಅತ್ಯುತ್ತಮವಾದ ಸಮಯ. ಯಾವುದೇ ರೀತಿಯ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಪರಿಹಾರ ದೊರೆಯಲಿದೆ. 

Leo 4/6

ಸಿಂಹ ರಾಶಿ:  ಯಾವುದೇ ಕಾರಣದಿಂದಾಗಿ ನಿಮ್ಮಿಂದ ದೂರಾಗಿದ್ದ ಸಂಗಾತಿ ಮರಳಿ ನಿಮ್ಮ ಬಳಿ ಬರುವರು. ಕೆಲಸದ ನಿಮಿತ್ತ ಪ್ರಯಾಣವು ಲಾಭದಾಯಕವಾಗಿರಲಿದೆ. ದೊಡ್ಡ ವ್ಯವಹಾರಗಳಿಗೆ ಕೈ ಹಾಕಲು ಸಮಯ ಕೂಡಿ ಬರಲಿದೆ. 

Libra5/6

ತುಲಾ ರಾಶಿ:  ಬಹುದಿನಗಳ ನಿಮ್ಮ ಕನಸೊಂದು ನನಸಾಗುವ ಸಮಯ. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದ್ದು ಶಾಂತಿ, ನೆಮ್ಮದಿ ನೆಲೆಸಲಿದೆ. ಹೂಡಿಕೆಯಿಂದ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. 

Pisces6/6

ಮೀನ ರಾಶಿ:  ವ್ಯವಹಾರವನ್ನು ವಿಸ್ತರಿಸುವ ನಿಮ್ಮ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. ಸಮಾಜದಲ್ಲಿ ಖ್ಯಾತಿ ಬೆಳೆಯಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.