Raveena Tandon latest interview : ರವೀನಾ ಟಂಡನ್ ಸಂದರ್ಶನವೊಂದರಲ್ಲಿ ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ನಟಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಐಪಿಎಸ್ ಅಧಿಕಾರಿಯಾಗಲು ಬಯಸಿದ್ದರಂತೆ.. ಸಲ್ಮಾನ್ ಖಾನ್ ಜೊತೆಗಿನ ಒಂದು ಘಟನೆಯ ನಂತರ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಬೇಕಾಯಿತಂತೆ..
ರವೀನಾ ಟಂಡನ್ 90 ರ ದಶಕದ ಜನಪ್ರಿಯ ನಟಿ. ಇಂದಿಗೂ ಅವರು ತಪ್ಪ ಛಾಪು ಉಳಿಸಿಕೊಂಡಿದ್ದಾರೆ. ರವೀನಾ ಚಲನಚಿತ್ರಗಳಿಂದ ಮಾತ್ರವಲ್ಲದೆ ಮುಕ್ತವಾಗಿ ಮಾತನಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ಅವರು ಯುಪಿ ಪೊಲೀಸ್ ಪಾಡ್‌ಕ್ಯಾಸ್ಟ್ "ಬಿಯಾಂಡ್ ದಿ ಬ್ಯಾಡ್ಜ್" ನಲ್ಲಿ ತಮ್ಮ ಅನೇಕ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ IPS ಆಗುವ ಕನಸನ್ನು ಬಿಚ್ಚಿಟ್ಟರು.
ಈ ಸಂದರ್ಶನದಲ್ಲಿ ರವೀನಾ ಟಂಡನ್ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ನನಸಾಗದ ಕನಸುಗಳ ಬಗ್ಗೆಯೂ ಹೇಳಿಕೊಂಡರು.. ನನ್ನ ತಂದೆ ಸಿನಿಉದ್ಯಮದಲ್ಲಿದ್ದರು. ನಾನು ನಾಯಕಿಯಾಗುತ್ತೇನೆ ಅಂತ ಅವರಿಗೆ ಎಂದಿಗೂ ಅನಿಸಿರಲಿಲ್ಲ, ನನಗೂ ತಲೆಗೆ ಬಂದಿದ್ದಿಲ್ಲ.. ಅಲ್ಲದೆ, ಆಗ ನಾನು ನಾಯಕಿ ರೀತಿಯ ಪಾತ್ರಧಾರಿಯಾಗಿರಲಿಲ್ಲ ಎಂದರು.
ಸಂದರ್ಶನದಲ್ಲಿ ನಟಿ, ನಾನು ಕಿರಣ್ ಬೇಡಿ ಅವರನ್ನು ತಮ್ಮ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದೆ.. ಹಾಗಾಗಿ ನನಗೆ ಐಪಿಎಸ್ ಅಧಿಕಾರಿಯಾಗುವ ಆಸಕ್ತಿ ಇತ್ತು. ಆ ಸಮಯದಲ್ಲಿ ನಾನು ಕಿರಣ್ ಬೇಡಿ ಅವರ ಅಭಿಮಾನಿಯಾಗಿದ್ದೆ. ಅವರ ಧೈರ್ಯಶಾಲಿ ವ್ಯಕ್ತಿತ್ವ, ಅವರ ಕಥೆಗಳನ್ನು ಕೇಳುತ್ತಿದ್ದೆವು, ಆದ್ದರಿಂದ ನಾನು ಸ್ಫೂರ್ತಿ ಪಡೆಯುತ್ತಿದ್ದೆ ಅಂತ ರವೀನಾ ಹೇಳಿದ್ದಾರೆ..
ಅಲ್ಲದೆ, ಪದವಿ ಪಡೆದ ನಂತರ ಐಪಿಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದೆ. ಆದರೆ ಈಗ ಚಲನಚಿತ್ರಗಳ ಮೂಲಕ ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದೆ ಅಂತ ಹೇಳುತ್ತಾ, ಟಂಡನ್ ತಮ್ಮ ಐಪಿಎಸ್ ಅಧಿಕಾರಿಯಾಗುವ ಕನಸು ಇನ್ನೂ ನನಸಾಗಿಲ್ಲ ಅಂತ ಹೇಳಿಕೊಂಡರು.
ಅದಕ್ಕೆ ಕಾರಣವನ್ನೂ ಬಿಚ್ಚಿಟ್ಟಿರುವ ನಟಿ, ನನಗೆ ಸಿನಿಮಾ ಆಫರ್‌ಗಳು ಬರುತ್ತಿದ್ದವು. ನಾನು ಎಲ್ಲಾ ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಿದ್ದೆ. ಆದರೆ ನಂತರ ಸಲ್ಮಾನ್ ಖಾನ್ ಜೊತೆ 'ಪತ್ಥರ್ ಕೆ ಫೂಲ್' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮರುದಿನ ನಾನು ಕಾಲೇಜಿಗೆ ಹೋಗಿ ನನ್ನ ಸ್ನೇಹಿತರಿಗೆ, "ನನಗೆ ಯಾರ ಚಿತ್ರಕ್ಕೆ ಆಫರ್ ಬಂದಿದೆ ಊಹಿಸಿ" ಅಂತ ಹೇಳಿದೆ.
ಸಲ್ಮಾನ್ ಖಾನ್ ಜೊತೆ ನಟಿಸುವ ಆಫರ್ ಬಂದಿದೆ ಎಂದು ನನ್ನ ಸ್ನೇಹಿತರಿಗೆ ತಿಳಿಸಿದಾಗ ಅವರು.. ದಯವಿಟ್ಟು ಆ ಚಿತ್ರವನ್ನು ತಿರಸ್ಕರಿಸಬೇಡಿ ಎಂದರು. ಕೊನೆಗೆ, ನಾನು ಈ ಚಿತ್ರಕ್ಕೆ ಒಕೆ ಎಂದೆ.. ಈ ರೀತಿಯಾಗಿ, ರವೀನಾ ಸಲ್ಮಾನ್ ಅವರ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು IPS ಕನಸಿನ ಕಡೆ ಹಿಂತಿರುಗಿ ನೋಡಲಿಲ್ಲ. ಪ್ರಸ್ತುತ ಅವರು ಬಾಲಿವುಡ್‌ನ ಅಗ್ರ ನಟಿಯರ ಸ್ಥಾನದಲ್ಲಿದ್ದಾರೆ.