ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಮತ್ತೊಂದು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಬಹುದಾದ ಕೆಲವು ಸೂಚನೆಗಳು ಸರ್ಕಾರದಿಂದ ಬರುತ್ತಿವೆ.
1/5Gold news : ಅಮೆರಿಕದ ಡಾಲರ್ ವಿರುದ್ಧ ಭಾರತೀಯ ರೂಪಾಯಿ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಡಿಸೆಂಬರ್ 2ರಂದು ರೂಪಾಯಿ ₹89.95 ಎಂಬ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದು ಹಿಂದಿನ ದಿನದ ₹89.78ಕ್ಕೂ ಕಡಿಮೆ. ಕಳೆದ ಒಂದು ತಿಂಗಳಲ್ಲಿ ರೂಪಾಯಿ ನಿರಂತರವಾಗಿ ಕುಸಿಯುತ್ತಿರುವುದು ಆರ್ಥಿಕ ತಜ್ಞರಲ್ಲಿ ಚರ್ಚೆಗೆ ಕಾರಣವಾಗಿದೆ.
2/5ಇತ್ತೀಚೇಗಷ್ಟೇ ಭಾರತದ GDP 8.2% ಹೆಚ್ಚಳ ಕಂಡಿದೆ. ಸಾಮಾನ್ಯವಾಗಿ GDP ಏರಿದರೆ ದೇಶದ ಕರೆನ್ಸಿಗೆ ಬಲ ಸಿಗಬೇಕು. ಆದರೆ ಇದೀಗ ಅದರ ವಿರುದ್ಧವಾಗಿ ರೂಪಾಯಿ ಇನ್ನಷ್ಟು ದುರ್ಬಲವಾಗಿದೆ. ಆರ್‌ಬಿಐ ನೀತಿ ಸಭೆಗೆ ಕೆಲವೇ ದಿನಗಳು ಇರುವುದರಿಂದ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ.
3/5ಡಿಬಿಎಸ್ ಬ್ಯಾಂಕ್‌ನ ಆರ್ಥಿಕ ತಜ್ಞ ಆಶಿಷ್ ವೈದ್ಯ ಅವರ ಪ್ರಕಾರ, ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ನಡೆಯದಿದ್ದರೆ ರೂಪಾಯಿ 90 ರಿಂದ 92 ಮಟ್ಟಕ್ಕೂ ಕುಸಿಯಬಹುದು. ವಿದೇಶಿ ಹೂಡಿಕೆದಾರರ ಮಾರಾಟ, ಆರ್‌ಬಿಐಯ ಹಸ್ತಕ್ಷೇಪದ ಕೊರತೆ ಮತ್ತು NDF ಮಾರ್ಕೆಟ್ ಒತ್ತಡ, ಇವರಲ್ಲವೂ ಸೇರಿ ರೂಪಾಯಿ ಇನ್ನೂ ದುರ್ಬಲಗೊಳ್ಳುವ ಸಾಧ್ಯತೆಯಿದೆ.
4/5ಮಾರುಕಟ್ಟೆಯಲ್ಲಿ ಕೆಲವು ವರದಿಗಳು ಹೊರಬಿದ್ದಿದ್ದು, ರೂಪಾಯಿ 90 ಗಡಿ ದಾಟದಂತೆ ನಿಲ್ಲಿಸಲು ಆರ್‌ಬಿಐ ಡಾಲರ್ ಮಾರಾಟ ಮಾಡಿರಬಹುದು. ಇದು ಮಾರುಕಟ್ಟೆಗೆ ಡಾಲರ್ ಪೂರೈಕೆ ಹೆಚ್ಚಿಸಿ ರೂಪಾಯಿ ಕುಸಿತವನ್ನು ತಾತ್ಕಾಲಿಕವಾಗಿ ತಡೆದುಹಾಕುವ ಕ್ರಮ. ಇದೇ ವೇಳೆ ಬಡ್ಡಿದರ ಕಡಿತ ಹಾಗೂ ₹2 ಲಕ್ಷ ಕೋಟಿ OMO ಕಾರ್ಯಾಚರಣೆಗಳು ರೂಪಾಯಿ ಮೌಲ್ಯಕ್ಕೆ ಬೆಂಬಲ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.
5/5ರೂಪಾಯಿ ದುರ್ಬಲವಾದಾಗ ಸಾಮಾನ್ಯವಾಗಿ ಚಿನ್ನದ ದರ ಭಾರತದಲ್ಲಿ ಏರುತ್ತದೆ, ಏಕೆಂದರೆ ನಾವು ಚಿನ್ನವನ್ನು ಡಾಲರ್‌ನಲ್ಲಿ ಆಮದು ಮಾಡುತ್ತೇವೆ. ಆದರೆ ವರದಿಗಳ ಪ್ರಕಾರ, ಕೇಂದ್ರ ಸರ್ಕಾರ ಚಿನ್ನದ ಬೆಲೆ ಏರಿಕೆಗೆ ಬ್ರೇಕ್ ಹಾಕುವ ಕ್ರಮಗಳನ್ನು ಯೋಚಿಸುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಚಿನ್ನ ಸ್ವಲ್ಪ ಕೈಗೆಟುಕುವ ದರಕ್ಕೆ ಸಿಗುವ ಸಾಧ್ಯತೆ ಇದೆ. ಆದರೂ ದುರ್ಬಲ ರೂಪಾಯಿ ಚಿನ್ನದ ಬೆಲೆಗೆ ಬಲ ನೀಡುವ ಪ್ರಮುಖ ಕಾರಣವಾಗಿಯೇ ಉಳಿಯುತ್ತದೆ.