Upendra Son Ayush Upendra Sandalwood Entry :ಸ್ಯಾಂಡಲ್‌ವುಡ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ಜೀ ಕನ್ನಡ ನ್ಯೂಸ್‌ಗೆ ಲಭ್ಯವಾಗಿದೆ.
Real star Upendra Son Ayush : ನಟ ಉಪೇಂದ್ರ ಪುತ್ರ ಆಯುಷ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ನಟ ಉಪೇಂದ್ರ ಪುತ್ರ ಆಯುಷ್ ಸಿನಿರಂಗಕ್ಕೆ ಕಾಲಿಡಲಿದ್ದಾರೆ ಎಂದು ಜೀ ಕನ್ನಡ ನ್ಯೂಸ್ ಗೆ ಸಿಕ್ಕ Exclusive ಮಾಹಿತಿಯಲ್ಲಿ ತಿಳಿದುಬಂದಿದೆ.
ಇಂಡಸ್ಟ್ರಿಗೆ ಉಪ್ಪಿ ಮಗ ಆಯುಷ್ ಉಪೇಂದ್ರ ಲಾಂಚ್ ಆಗಲು ಭರ್ಜರಿ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.
ಇಂದು ನಟ ಉಪೇಂದ್ರ ಪುತ್ರನ ಹುಟ್ಟುಹಬ್ಬದಿನ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಮೊದಲ ಸಲ ಸಿನಿಮಾದ ನಿರ್ದೇಶಕ ಪುರುಷೋತಮ್ ಡೈರೆಕ್ಷನ್ ನಲ್ಲಿ ಆಯುಷ್ ಉಪೇಂದ್ರ ಲಾಂಚ್ ಫಿಕ್ಸ್ ಆಗಿದೆ ಎಂದು ತಿಳಿದು ಬಂದಿದೆ.
ಇಂದು ಆಯುಷ್ ಹುಟ್ಟುಹಬ್ಬದ ಹಿನ್ನಲೆ ಮಂತ್ರಾಲಯಕ್ಕೆ ಉಪ್ಪಿ ಕುಟುಂಬ, ನಟಿ ತಾರಾ ಕುಟುಂಬ ಭೇಟಿ ಕೊಟ್ಟಿದ್ದಾರೆ.
ನಟಿ ತಾರಾ ಪತಿ ವೇಣುಗೋಪಾಲ್ ಉಪ್ಪಿ ಪುತ್ರನ ಮೊದಲ ಸಿನಿಮಾದ ಛಾಯಾಗ್ರಹಣ ಮಾಡಲಿದ್ದಾರೆ. ಜೀ ಕನ್ನಡ ನ್ಯೂಸ್ ಗೆ ಸಿಕ್ಕ Exclusive ಮಾಹಿತಿ ಇದಾಗಿದೆ.