"ಈಕೆಯ ಮಗುವಾಗಿ ಮತ್ತೆ ಬರುವೆ... ಮರುಜನ್ಮ ಪಡೆಯುತ್ತೇನೆ"- ಪುನರ್‌ಜನ್ಮ ಗುರೂಜಿ ಜೊತೆ ಮಾತನಾಡಿದ ಪುನೀತ್ ರಾಜ್‌ಕುಮಾರ್ ಆತ್ಮ... ವಿಡಿಯೋ

Ramachandra Guruji spoke to Puneeth Rajkumar soul: ಇಂದು ಕರುನಾಡ ಪ್ರೀತಿಯ ಅಪ್ಪು ಜನಿಸಿ ೫೦ ವರ್ಷವಾಗಿದೆ. ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ... ಬದುಕಿದ್ದ ಸಂದರ್ಭದಲ್ಲಿ ತಾನು ಕೈಗೊಂಡಿದ್ದ ಮಹತ್ಕಾರ್ಯಗಳ ಮೂಲಕ ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆ ಡಾ. ಪುನೀತ್‌ ರಾಜ್‌ ಕುಮಾರ್‌

.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇಂದು ಕರುನಾಡ ಪ್ರೀತಿಯ ಅಪ್ಪು ಜನಿಸಿ ೫೦ ವರ್ಷವಾಗಿದೆ. ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ... ಬದುಕಿದ್ದ ಸಂದರ್ಭದಲ್ಲಿ ತಾನು ಕೈಗೊಂಡಿದ್ದ ಮಹತ್ಕಾರ್ಯಗಳ ಮೂಲಕ ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆ ಡಾ. ಪುನೀತ್‌ ರಾಜ್‌ ಕುಮಾರ್‌. ಅಂದಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪುನರ್‌ಜನ್ಮ ತಜ್ಞ ರಾಮಚಂದ್ರ ಗುರೂಜಿ ಅವರು ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತನಾಡಿದ್ದೆ ಎಂದು ಆರ್‌ಜೆ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.  

2 /5

"ಆತ್ಮ ಸಂಭಾಷಣೆ ಮಾಡಲು ಸಾಧ್ಯವಿದೆ. ಅದೊಂದು ರೀತಿಯ ಟೆಕ್ನಾಲಜಿ, ಆಧ್ಯಾತ್ಮದಲ್ಲಿ ಹಿಂದಿನ ಜನ್ಮದ ಬಗ್ಗೆ ತಿಳಿದುಕೊಳ್ಳಲು ಟೆಕ್ನಾಲಜಿ ಹೇಗೆ ಇದೆಯೋ, ಅದೇ ರೀತಿ ಇದು ಕೂಡ. ಅಪ್ಪು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಅವರ ಆತ್ಮದ ಜೊತೆ ನಾನು ಮಾತನಾಡಿದ್ದೆ. ಆದರೆ ನಾನು ಇದನ್ನು ಪಬ್ಲಿಕ್‌ ಪ್ಲಾಟ್‌ ಫಾರಂನಲ್ಲಿ ಮಾಡಿಲ್ಲ. ಏಕೆಂದರೆ ಹಾಗೆ ಮಾಡಿದರೆ ಆ ಒಂದು ಒತ್ತಡವನ್ನು ತಡೆದುಕೊಳ್ಳುವಷ್ಟು ಶಕ್ತಿ ನಮ್ಮಲ್ಲಿರಲಿಲ್ಲ. ಯಾಕಂದ್ರೆ ಅಷ್ಟೊಂದು ಪ್ರಶ್ನೆಗಳಿದ್ದವು"  

3 /5

"ನಾನು ಒಬ್ಬನೇ ಮಾತನಾಡಲ್ಲ. ಹೀಗಾಗಿ ನಾನು ಮೀಡಿಯಂ ಸಹಾಯ ಪಡೆದಿದ್ದೆ. ಆ ಸಂದರ್ಭದಲ್ಲಿ ನಾನು ಕೇವಲ ಮೂರು ಪ್ರಶ್ನೆಗಳನ್ನು ಕೇಳಿದ್ದೆ, ಅದರಲ್ಲಿ ಒಂದನೆ ಪ್ರಶ್ನೆ, ಅಪ್ಪು ಅವರೆ ನಿಮ್ಮ ಸಾವಿನ ಬಗ್ಗೆ ಹಲವಾರು ಅಪೋಹಗಳಿವೆ ಅದರ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಹೃದಯ ಸಮಸ್ಯೆಯಿಂದಲೇ ನಿಧನರಾಗಿರುವುದಾಗಿ ಸ್ಪಷ್ಟನೆ ನೀಡಿದ್ದರು. ಆ ಬಳಿಕ ಈಗ ಎಲ್ಲಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರಿಂದ ಬಂದ ಉತ್ತರ.. ಅಪ್ಪ ಅಮ್ಮನ ಹುಡುಕಾಟದಲ್ಲಿದ್ದೇನೆ ಎಂಬುದಾಗಿತ್ತು. ಮೂರನೇ ಪ್ರಶ್ನೆಯಲ್ಲಿ ಮರುಜನ್ಮದ ಬಗ್ಗೆ ಪ್ರಶ್ನೆ ಮಾಡಿದ್ದೆ. ಆಗ "ಇನ್ನೂ ಆ ಬಗ್ಗೆ ಯೋಚಿಸಿಲ್ಲ. ಮತ್ತೆ ಹುಟ್ಟಿದರೆ ಅದು ನನ್ನ ಮಗಳ ಹೊಟ್ಟೆಯಲ್ಲಿ" ಅಂತ ಹೇಳಿದ್ದಾಗಿ ಸಂದರ್ಶನದಲ್ಲಿ ಗುರೂಜಿ ಹೇಳಿದ್ದಾರೆ.  

4 /5

ಈ ಹಿಂದೆ ಕಸ್ತೂರಿ ವಾಹಿನಿಯಲ್ಲಿ ‘ಜನ್ಮಾಂತರ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಪುನರ್‌ಜನ್ಮ ತಜ್ಞ ರಾಮಚಂದ್ರ ಗುರೂಜಿ ಈ ಬಗ್ಗೆ ಮಾಡನಾಡಿದ್ದಾರೆ.  

5 /5

“ಆಧ್ಯಾತ್ಮಿಕವಾಗಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಅವರ ಸಾವಾಗುವ 6 ತಿಂಗಳ ಮುಂಚೆಯೇ ಮುನ್ಸೂಚನೆ ಸಿಕ್ಕಿರುತ್ತದೆ. ಅದು ಕೆಲವರಿಗೆ ಗೊತ್ತಾಗಬಹುದು, ಗೊತ್ತಾಗದೆ ಇರಬಹುದು. ಪುನೀತ್ ರಾಜ್‌ಕುಮಾರ್ ಅವರಿಗೂ ಅವರ ಸಾವಿನ ಬಗ್ಗೆ ಗೊತ್ತಿದ್ದಿರಬಹುದು. ಅವರು ಅದನ್ನು ಸ್ವೀಕಾರ ಮಾಡಿ ಸುಮ್ಮನಿದ್ದಿರಬಹುದು ಅಥವಾ ಗೊತ್ತಾಗದೆ ಇರಬಹುದು. ನಾನು ಅವರ ಸಾವಿನ ಕಾರಣವನ್ನು ತಿಳಿದುಕೊಳ್ಳಲು ಆತ್ಮದ ಜೊತೆ ಮಾತನಾಡಿದೆ” ಎಂದು ರಾಮಚಂದ್ರ ಗುರೂಜಿ ಅವರು ಹೇಳಿದ್ದಾರೆ. VIDEO LINK: https://www.youtube.com/watch?v=qmHIuq1RYiU