ಸಂಸದೆ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್‌..! ಫೋಟೋಸ್‌ ಇಲ್ಲಿವೆ ನೋಡಿ..

Rinku Singh Engagement : ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಲಕ್ನೋದ ಪಂಚತಾರಾ ಹೋಟೆಲ್‌ನಲ್ಲಿ ನಡೆಯಿತು. ಎರಡೂ ಕುಟುಂಬಗಳ ಅತಿಥಿಗಳು ಮತ್ತು ಸಂಬಂಧಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕುರಿತು ಫೋಟೋಸ್‌ ಇಲ್ಲಿವೆ ನೋಡಿ..
 

1 /7

ಉತ್ತರ ಪ್ರದೇಶದ ಮಚಿಲಿಶಹರ್‌ನ ಸಂಸದೆ ಪ್ರಿಯಾ ಸರೋಜ್ ಮತ್ತು ಕ್ರಿಕೆಟಿಗ ರಿಂಕು ಸಿಂಗ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯಿತು. 

2 /7

ನಿಶ್ಚಿತಾರ್ಥ ಲಕ್ನೋದ ಪಂಚತಾರಾ ಹೋಟೆಲ್‌ನಲ್ಲಿ ಜರುಗಿತು. ಮಾಜಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು..

3 /7

ಪ್ರಿಯಾ ಸರೋಜ್.. ಪ್ರಸ್ತುತ, ಉತ್ತರ ಪ್ರದೇಶದ ಮಚಿಲಿಶಹರ್‌ನಿಂದ ಸಂಸತ್ತಿನಲ್ಲಿ ಎಸ್‌ಪಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. 

4 /7

ಪ್ರಿಯಾ ಸರೋಜ್ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿಯೂ ಕೆಲಸ ಮಾಡಿದ್ದಾರೆ. 

5 /7

ರಿಂಕು ಸಿಂಗ್ ಪ್ರಸ್ತುತ ಕ್ರಿಕೆಟಿಗರಾಗಿ ತಮ್ಮದೇ ಆದ ಶೈಲಿಯಲ್ಲಿ ಮಿಂಚುತ್ತಿದ್ದಾರೆ. 

6 /7

ಈ ಬಾರಿಯ IPL 2025 ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್‌ ತಂಡಕ್ಕೆ ಆಟವಾಡಿದರು.

7 /7

ನವೆಂಬರ್ 18 ರಂದು ವಾರಣಾಸಿಯ ಹೋಟೆಲ್ ತಾಜ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನಡೆಯಲಿದೆ.