ಟಾಕ್ಸಿಕ್‌ ಮೂವಿಯಲ್ಲಿ ರಾಕಿಂಗ್ ಸ್ಟಾರ್ ಯಶ್‌ ನ್ಯೂ ಲುಕ್ಸ್‌.. ಸಿನಿಮಾ ರಿಲೀಸ್‌ ಆಗೋದು ಯಾವಾಗ?

Written ByBhimappa
Published: Dec 21, 2025, 05:20 PM IST|Updated: Dec 21, 2025, 05:20 PM IST

ಮಲಯಾಳಂ ಸಿನಿಮಾ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಡೈರೆಕ್ಷನ್‌ನಲ್ಲಿ ಹಾಗೂ ವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ಬಹುನಿರೀಕ್ಷಿತ ಟಾಕ್ಸಿಕ್‌ ಮೂವಿ ರಿಲೀಸ್‌ ಆಗಲಿದೆ.
 

1/5

ಟಾಕ್ಸಿಕ್‌ ಮೂವಿಯಲ್ಲಿ ಯಶ್‌ ಅವರ ನ್ಯೂ ಲುಕ್‌ ಅನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿತ್ತು. ಪೋಸ್ಟರ್‌ನಲ್ಲಿ ಯಶ್‌ ಬರೀ ರಕ್ತದಲ್ಲೇ ಮೈತೊಳೆಯುವಂತೆ ಇದೆ. ಫ್ಯಾನ್ಸ್‌ ವಲಯದಲ್ಲಿ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ರಿಲೀಸ್‌ಗಾಗಿ ಕಾಯುತ್ತಿದ್ದಾರೆ.     

2/5

ಯಶ್‌ ಅವರ 19ನೇ ಸಿನಿಮಾ ಟಾಕ್ಸಿಕ್‌ ಆಗಿದ್ದು ಕೆಜಿಎಫ್‌- 2 ನಂತರ ಮಾಡುತ್ತಿರುವ ಪ್ಯಾನ್‌ ಇಂಡಿಯಾ ಮೂವಿ ಇದಾಗಿದೆ. ಇದು ಗ್ಯಾಂಗ್‌ಸ್ಟರ್‌ ಮೂವಿಯಾಗಿದ್ದು ಕನ್ನಡ ಸೇರಿದಂತೆ ಭಾರತದ ಇತರೆ ಭಾಷೆಗಳಲ್ಲೂ ತೆರೆಗೆ ಅಪ್ಪಳಿಸಲಿದೆ.   

3/5

ಕೆಜಿಎಫ್‌ ಬಳಿಕ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಭಾರತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಶೂಟಿಂಗ್‌ ಮಾಡಿದ ಮೂವಿಯಾಗಿದೆ. ಕಿಯಾರಾ ಅಡ್ವಾಣಿ ಸೇರಿ ಕೆಲವು ಪ್ರಮುಖ ನಟಿಯರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.   

4/5

ಟಾಕ್ಸಿಕ್‌ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಬಾಲಿವುಡ್‌ ಬ್ಯೂಟಿ ಕಿಯಾರಾ ಅಡ್ವಾಣಿ ಅವರ ಫಸ್ಟ್‌ ಲುಕ್‌ ಅನ್ನು ಸಿನಿಮಾ ತಂಡ ರಿಲೀಸ್‌ ಮಾಡಿದೆ. ಈ ಪೋಸ್ಟರ್‌ನಲ್ಲಿ ಕಿಯಾರಾ, ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನಪ್ಸ್‌ನ ಲುಕ್‌ನಲ್ಲಿ ಇದ್ದಾರೆ.   

5/5

ಯಶ್ ಅಭಿನಯದ ಟಾಕ್ಸಿಕ್‌ ಮೂವಿಯೂ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು 2026ರ ಮಾರ್ಚ್ 19 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ. ಗೀತು ಮೋಹನ್‌ದಾಸ್ ಡೈರೆಕ್ಷನ್‌ನಲ್ಲಿ ಈ ಮೂವಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ನಿರೀಕ್ಷೆ ಇದೆ.