Actress Life : ಭಾರತೀಯ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ಈ ದಾಳಿ ವೇಳೆ ನಟಿಯ ಬಾತ್ ರೂಮಿನಲ್ಲಿ 100 ಕೋಟಿ ರೂ. ಪತ್ತೆಯಾಗಿದೆ. ಅಷ್ಟು ಹಣ ನಟಿಗೆ ಎಲ್ಲಿಂದ ಬಂತು ಅಂತ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ...
ಸ್ಟಾರ್ ನಟಿಯ ಮನೆಯ ಮೇಲೆ ನಡೆದ ಐಟಿ ದಾಳಿಯಲ್ಲಿ 100 ಕೋಟಿ ರೂ. ಪತ್ತೆಯಾಗಿದೆ. ಈ ವೇಳೆ ನಟಿ ಹೇಳಿದ ಒಂದೇ ಒಂದು ಸುಳ್ಳಿನಿಂದಾಗಿ ಆಕೆಯ ವೃತ್ತಿ ಜೀವನ ಅಂತ್ಯ ಕಂಡಿದೆ. 50 ರಿಂದ 90 ರ ದಶಕದವರೆಗೆ ಭಾರತೀಯ ಚಲನಚಿತ್ರೋದ್ಯಮವನ್ನು ತನ್ನ ನಟನೆ ಮತ್ತು ಸೌಂದರ್ಯದಿಂದ ಆಳಿದ್ದ ನಟಿ ಇದೀಗ ಸಿನಿರಂಗದಿಂದ ದೂರಾಗಿದ್ದಾರೆ.
ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ 'ಲೇಡಿ ಸೂಪರ್‌ಸ್ಟಾರ್' ಪ್ರಸಿದ್ಧ ಬಾಲಿವುಡ್ ನಟಿ ಮಾಲಾ ಸಿನ್ಹಾ ಅವರಿಗೆ ಸಂಬಂಧ ಪಟ್ಟ ಸುದ್ದಿ. ಹೌದು.. ಮಾಲಾ ಸಿನ್ಹಾ ಅವರ ಜೀವನ ಪಯಣ ತುಂಬಾ ಆಸಕ್ತಿದಾಯಕವಾಗಿತ್ತು. ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು.
1954 ರಲ್ಲಿ 'ಬಾದ್‌ಶಾ' ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಲಾ ಅವರು ಅತೀ ಕಡಿಮೆ ಅವಧಿಯಲ್ಲಿಯೇ ಪ್ರಮುಖ ನಟರಿಗೆ ಸಮಾನವಾಗಿ ಬೆಳೆದರು.. ಸುಮಾರು 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಮಾಲಾ ಸಿನ್ಹಾ, ಧರ್ಮೇಂದ್ರ, ಗುರುದತ್, ಅಶೋಕ್ ಕುಮಾರ್, ದಿಲೀಪ್ ಕುಮಾರ್, ರಾಜಕುಮಾರ್, ಮನೋಜ್ ಕುಮಾರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಅವರಂತಹ ಅನೇಕ ಸೂಪರ್‌ಸ್ಟಾರ್‌ಗಳೊಂದಿಗೆ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದು 1978 ರ ಕಥೆ. ಮಾಲಾ ಸಿನ್ಹಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಇದ್ದಕ್ಕಿದ್ದಂತೆ ಒಂದು ದಿನ ಆದಾಯ ತೆರಿಗೆ ಇಲಾಖೆ ಅವರ ಮನೆಯ ಮೇಲೆ ದಾಳಿ ಮಾಡಿತು. ಈ ವೇಳೆ ಮಾಲಾ ಅವರ ಮನೆಯ ಸ್ನಾನಗೃಹದ ಗೋಡೆಯಲ್ಲಿ ರಾಶಿಗಟ್ಟಲೆ ನೋಟುಗಳು ಪತ್ತೆಯಾದವು. ಇದರಲ್ಲಿ 100 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. ಮಾಲಾ ಸಿನ್ಹಾ ನ್ಯಾಯಾಲಯದಲ್ಲಿ ಹೇಳಿದ ಮಾತು ಎಲ್ಲರಿಗೂ ಆಘಾತವನ್ನುಂಟು ಮಾಡಿತು. 'ಸೆಲ್ಲಿಂಗ್ ಸೆ*ಕ್ಸ್' ಮೂಲಕ ಈ ಹಣವನ್ನು ಗಳಿಸಿದ್ದಾಗಿ ನಟಿ ನ್ಯಾಯಾಲಯದಲ್ಲಿ ಒಪ್ಪಿಕೊಂಡರು.. ಈ ಒಂದು ಸುಳ್ಳು ಅವರ ಚಿತ್ರರಂಗದ ಪ್ರಯಾಣವನ್ನು ಸಂಪೂರ್ಣ ಹಾಳುಮಾಡಿತು.
ಮುಟ್ಟುಗೋಲು ಹಾಕಿಕೊಂಡ ಹಣವನ್ನು ಮರಳಿ ಪಡೆಯಲು ಮಾಲಾ ಅವರಿಗೆ ಈ ಸುಳ್ಳು ಹೇಳುವಂತೆ ಅವರ ತಂದೆ ಮತ್ತು ವಕೀಲರು ಹೇಳಿದ್ದರು ಎಂದು ನಂತರ ಹೇಳಲಾಯಿತು. ಆದರೆ ಈ ಹೇಳಿಕೆ ಮಾಲಾ ಸಿನ್ಹಾ ಅವರ ಜೀವನವನ್ನೇ ಹಾಳುಮಾಡಿತು.
ಇದರಿಂದಾಗಿ ರಾತ್ರೋರಾತ್ರಿ ದೊಡ್ಡ ಚಿತ್ರಗಳಿಂದ ನಟಿಯನ್ನು ಹೊರಹಾಕಲಾಯಿತು. ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು ಸೇರಿದಂತೆ ಯಾರೂ ಅವರೊಂದಿಗೆ ಕೆಲಸ ಮಾಡಲು ಇಷ್ಟ ಪಡಲಿಲ್ಲ. ಈ ಘಟನೆಯಿಂದಾಗಿ, ಮಾಲಾ ಕೊನೆಗೂ ಸಿನಿ ಉದ್ಯಮವನ್ನೇ ತೊರೆಯಬೇಕಾಯಿತು.