ನನಗೆ 5-10 ಮಕ್ಕಳನ್ನು ಹೆರುವ ಆಸೆ ಇದೆ.. ನನ್ನ ಗಂಡ ಚನ್ನಾಗಿ ನೋಡಿಕೊಳ್ಳುತ್ತಾರೆ..! ಸ್ಟಾರ್‌ ನಟಿಯ ಹೇಳಿಕೆ ವೈರಲ್‌

Sana Khan News : ಚಿತ್ರರಂಗದಲ್ಲಿ ಸರಣಿ ಸಿನಿಮಾಗಳನ್ನು ಮಾಡಿ ನಂತರ ಕಣ್ಮರೆಯಾದ ಅನೇಕ ನಾಯಕಿಯರು ಇದ್ದಾರೆ. ಅದರಂತೆ ಈ ನಟಿಯೂ ಸಹ ಕನ್ನಡ, ತೆಲುಗು ಮತ್ತು ಹಿಂದಿ ಸಿನಿರಂಗದಲ್ಲಿ ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಇಂದು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ಒಂದೇ ಒಂದು ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಯಾರು ಆ ನಟಿ.. ಹೇಳಿದ್ದೇನು..? ಬನ್ನಿ ನೋಡೋಣ..

1 /5

ಸನಾ ಖಾನ್ ಚಿತ್ರರಂಗದಿಂದ ಇದ್ದಕ್ಕಿದ್ದಂತೆ ದೂರ ಉಳಿದಿರುವ ನಟಿಯರಲ್ಲಿ ಒಬ್ಬರು. ಈ ಸುಂದರಿ ಕೂಲ್‌ ಸಖತ್‌ ಹಾಟ್‌ ಮಗಾ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಯವಾದರು. 2019 ರಲ್ಲಿ, ಸನಾ ದುಬೈನ ಮುಸ್ಲಿಂ ಧರ್ಮಗುರು ಮತ್ತು ಉದ್ಯಮಿ ಮುಫ್ತಿ ಅನಸ್ ಸೈಯದ್ ಅವರನ್ನು ವಿವಾಹವಾದರು. ಇದೀಗ ಸಿನಿರಂಗದಲ್ಲಿ ದೂರ ಉಳಿದಿದ್ದಾರೆ.

2 /5

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಸನಾ, ಮಕ್ಕಳ ಹೆರುವ ಕುರಿತು ತಮ್ಮ ಅಭಿಮಾನಿಗಳೊಂದಿಗೆ ವಿವಿಧ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಈ ಹಿಂದಿನ ವೀಡಿಯೊವೊಂದರಲ್ಲಿ, ಸನಾ 5-10 ಮಕ್ಕಳಿಗೆ ಜನ್ಮ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕಾಗಿ ನೆಟಿಜನ್‌ಗಳು ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

3 /5

ಈ ವಿಡಿಯೋದಲ್ಲಿ ಸನಾ, "ನಾನು ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಬಯಸುತ್ತೇನೆ. 5-10 ಮಕ್ಕಳೂ ಆಗಿರುಬಹುದು. ಹಿಂದೆ, ಮಹಿಳೆಯರು ತಲಾ 12 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ನಾನು ಗರ್ಭಿಣಿಯಾಗಿದ್ದಾಗಿನಿಂದ ನನ್ನ ಪತಿ ಅನಾಸ್ ನನ್ನನ್ನು ತುಂಬಾ ನೋಡಿಕೊಂಡಿದ್ದಾರೆ.  

4 /5

ಮಗು ಜನಿಸುವವರೆಗೂ ಅವರು ನನ್ನ ಮಗುವಿನಂತೆ ನನ್ನೊಂದಿಗೆ ಇದ್ದಾರೆ" ಎಂದು ಸನಾ ಹೇಳಿದರು. ಸನಾ ಅವರ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. 10-12 ಮಕ್ಕಳಿಗೆ ಜನ್ಮ ನೀಡುವುದು ಅಷ್ಟು ಸುಲಭವೇ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. 

5 /5

ಸನಾ ಖಾನ್ ಅವರ ಪತಿ ಗುಜರಾತ್‌ನ ಸೂರತ್‌ನವರು. ಮುಫ್ತಿ ಅನಸ್ ಸೈಯದ್ ಧಾರ್ಮಿಕ ನಾಯಕ ಮತ್ತು ಇಸ್ಲಾಮಿಕ್ ವಿದ್ವಾಂಸ. ಎಜಾಜ್ ಖಾನ್ ಮೂಲಕ ಸನಾ ಅವರಿಗೆ ಮುಫ್ತಿ ಪರಿಚಯವಾಯಿತು. ಮುಫ್ತಿ ಅನಸ್ ಕೂಡ ಒಬ್ಬ ಉದ್ಯಮಿಯಾಗಿದ್ದಾರೆ.