ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

Published: Jun 16, 2025, 12:50 PM IST|Updated: Jun 16, 2025, 12:50 PM IST

Kichcha Sudeep Net Worth: ಅಭಿನಯ ಚಕ್ರವರ್ತಿ, ಕರುನಾಡ ಮಾಣಿಕ್ಯ, ಬಹುಭಾಷಾ ನಟ ಕಿಚ್ಚ ಸುದೀಪ್... ಸದ್ಯ ಬಹುಮುಖ ಪ್ರತಿಭೆಯಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ರಾಜ್ಯ ಅಂತರಾಜ್ಯದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ನಟ ಎಂದೇ ಹೇಳಬಹುದು. ನಟ, ನಿರ್ದೇಶಕ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕರಾಗಿ ಅದ್ಭುತ ವೃತ್ತಿಜೀವನವನ್ನು ಕಂಡುಕೊಂಡ ಅಮೋಘ ಪ್ರತಿಭೆ. 

 

Kichcha Sudeep Net Worth1/8

ಅಭಿನಯ ಚಕ್ರವರ್ತಿ, ಕರುನಾಡ ಮಾಣಿಕ್ಯ, ಬಹುಭಾಷಾ ನಟ ಕಿಚ್ಚ ಸುದೀಪ್... ಸದ್ಯ ಬಹುಮುಖ ಪ್ರತಿಭೆಯಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ರಾಜ್ಯ ಅಂತರಾಜ್ಯದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ನಟ ಎಂದೇ ಹೇಳಬಹುದು. ನಟ, ನಿರ್ದೇಶಕ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕರಾಗಿ ಅದ್ಭುತ ವೃತ್ತಿಜೀವನವನ್ನು ಕಂಡುಕೊಂಡ ಅಮೋಘ ಪ್ರತಿಭೆ. 

Kichcha Sudeep Net Worth2/8

ಈ ವರದಿಯಲ್ಲಿ ಸುದೀಪ್ ಅವರ ಯಶಸ್ಸಿನ ಹಾದಿ, ಅವರ ಅಂದಾಜು ನಿವ್ವಳ ಮೌಲ್ಯ ಮತ್ತು ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

 

Kichcha Sudeep Net Worth3/8

 ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಿಚ್ಚ ಸುದೀಪ್ ಅವರ ಒಟ್ಟು ಆಸ್ತಿ ಮೌಲ್ಯ 125 ಕೋಟಿ ರೂಪಾಯಿ. ಅವರ ಗಳಿಕೆಯು ಅವರನ್ನು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ. ನಟನೆ, ರಿಯಾಲಿಟಿ ಶೋಗಳ ನಿರೂಪಣೆ, ನಿರ್ದೇಶನ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಅವರ ಆದಾಯದ ಪ್ರಮುಖ ಮೂಲಗಳು.   

 

Kichcha Sudeep Net Worth4/8

ವಿವಿಧ ವ್ಯವಹಾರಗಳು, ಚಲನಚಿತ್ರಗಳಿಂದ ಸಂಭಾವನೆ ಮತ್ತು ಲಾಭ ಹಂಚಿಕೆ ಸುದೀಪ್ ಅವರ ಆದಾಯವನ್ನು ಗಳಿಸುವ ಪ್ರಮುಖ ಮಾರ್ಗಗಳಾಗಿವೆ. ಸುದೀಪ್ ಅವರ ಚಲನಚಿತ್ರಗಳು ಭಾರಿ ವ್ಯವಹಾರವನ್ನು ಮಾಡುತ್ತವೆ. 

 

Kichcha Sudeep Net Worth5/8

ಸುದೀಪ್ ಒಬ್ಬ ನಟ ಮಾತ್ರವಲ್ಲ, ನಿರ್ದೇಶಕ ಮತ್ತು ನಿರ್ಮಾಪಕ ಕೂಡ. ಸುದೀಪ್ ಅವರಿಗೆ ಬಹು ಭಾಷೆಗಳಲ್ಲಿ ಉತ್ತಮ ಬೇಡಿಕೆಯಿದೆ. ಸುದೀಪ್ ದೂರದರ್ಶನ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ. ಆದರೆ ಮುಂದಿನ ಸೀಸನ್‌ನಿಂದ ಅವರು ನಿರೂಪಣೆ ಮಾಡಲ್ಲ ಎಂದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.  

 

Kichcha Sudeep Net Worth6/8

ಕಿಚ್ಚ ಜನಿಸಿದ್ದು ಶಿವಮೊಗ್ಗದಲ್ಲಿ. ಇವರ ಮನೆಯ ಹೆಸರು ಶ್ರೀನಿಧಿ. ಈ ಮನೆಯನ್ನು 1991ರಲ್ಲಿ ಸುದೀಪ್ ಅವರ ತಂದೆ ನಿರ್ಮಿಸಿದ್ದರು. ಕಿಚ್ಚ ಈಗಲೂ ಕೂಡ ಅದೇ ಮನೆಯಲ್ಲಿ ವಾಸವಿದ್ದು, ಇದು ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿದೆ. ಇನ್ನು ಇದರ ಮಾರುಕಟ್ಟೆ ಮೌಲ್ಯ 20 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಸುದೀಪ್ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.   

 

Kichcha Sudeep Net Worth7/8

2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಕಿಚ್ಚ ಸುದೀಪ್‌ ಮೂರನೇ ಸ್ಥಾನದಲ್ಲಿದ್ದರು. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ಮಾಡಿರುವ ಕಿಚ್ಚನಿಗೆ ಅವರ ಧ್ವನಿಯೇ ಪ್ಲಸ್‌ ಪಾಯಿಂಟ್‌. ಇನ್ನು 2023ರ ವರದಿಗಳ ಪ್ರಕಾರ ಕಿಚ್ಚ, ಪ್ರತಿ ಚಿತ್ರಕ್ಕೆ 20 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.   

 

Kichcha Sudeep Net Worth8/8

 ಇನ್ನು ಸುದೀಪ್‌ಗೆ ಕಾರುಗಳ ಕ್ರೇಜ್‌ ಕೂಡ ಇದ್ದು, ರೇಂಜ್ ರೋವರ್, ಜೀಪ್ ರಾಂಗ್ಲರ್, ಜೀಪ್ ಕಂಪಾಸ್, ಬಿಎಂಎಬ್ಲ್ಯೂ ಎಂ3, ಜಾಗ್ವಾರ್, ಹಮ್ಮರ್ ಹೆಚ್‌3, ಲ್ಯಾಂಬೋರ್ಗಿನಿ ಅವೆಂಟಾ ಡಾರ್, ವೋಲ್ವೋದಂತಹ ಕೋಟ್ಯಂತರ ಮೌಲ್ಯದ ಐಷಾರಾಮಿ ಕಾರುಗಳಿವೆ.