ಆ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ನನ್ನ ಜೊತೆ ಮಲಗಲು ಬಯಸಿದ್ದ, ಬಲವಂತವಾಗಿ ಚುಂಬಿಸಲು ಬಂದಿದ್ದ: ಕಹಿ ಅನುಭವ ಬಿಚ್ಚಿಟ್ಟ ಕನ್ನಡದ ಖ್ಯಾತ ನಟಿ

Published: Jun 02, 2025, 02:58 PM IST|Updated: Jun 02, 2025, 02:58 PM IST

Kannada Actress On Casting Couch: ಈ ಖ್ಯಾತ ನಟಿಗೆ ಮದುವೆಯಾಗಿದ್ದರೂ ಸಹ, ನಿರ್ದೇಶಕರೊಬ್ಬರು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾರೆ ಎಂಬ ಶಾಕಿಂಗ್‌ ಸಂಗತಿಯ ಬಗ್ಗೆ ಹೇಳಿದ್ದಾರೆ.

surveen chawla1/9

ನಟ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನವಾಲಾ' ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟಿ ಕೊಟ್ಟ ಸುರ್ವೀನ್ ಚಾವ್ಲಾ ಇದೀಗ ಆಘಾತಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. 

surveen chawla2/9

ಕನ್ನಡದ ನಂತರ ತೆಲುಗಿನತ್ತ ಮುಖ ಮಾಡಿದ್ದ ಸುರ್ವೀನ್ ಚಾವ್ಲಾ ಪಂಜಾಬಿ ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾದರು. ಹೇಟ್ ಸ್ಟೋರಿ 2 ಸೇರಿ ಹಿಂದಿಯಲ್ಲಿ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

surveen chawla3/9

ಸುರ್ವೀನ್ ಚಾವ್ಲಾ ಇದೀಗ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌಟರ್‌ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ. 

surveen chawla4/9

ಹಿಂದಿ ಬಾರದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕನೊಬ್ಬ ನನ್ನ ಜೊತೆ ಮಲಗಲು ಬಯಸಿದ್ದ. ನನಗೆ ಬಲವಂತವಾಗಿ ಚುಂಬಿಸಲು ಬಂದಿದ್ದ ಎಂದು ಹೇಳಿದ್ದಾರೆ.

surveen chawla5/9

ಆ ನಿರ್ದೇಶಕರಿಗೆ ಹಿಂದಿ ಮತ್ತು ಇಂಗ್ಲೀಷ್‌ ಎರಡೂ ಬರುವುದಿಲ್ಲ. ಆ ಕಾರಣ ಮೂರನೇ ವ್ಯಕ್ತಿಯನ್ನು ಮಧ್ಯವರ್ತಿಯನ್ನಾಗಿ ನನ್ನ ಬಳಿ ಕಳುಹಿಸಿದ್ದ ಎಂದು ಸುರ್ವೀನ್ ಚಾವ್ಲಾ ಹೇಳಿದ್ದಾರೆ. 

surveen chawla6/9

ಆ ಮೂರನೇ ವ್ಯಕ್ತಿ ಹೇಳಲು ಧೈರ್ಯ ಸಾಲದೇ ಸಂಜ್ಞೆಯ ಮೂಲಕ ಸಂವಹನ ನಡೆಸುವ ಪ್ರಯತ್ನ ಮಾಡಿದರು. ಆ ವ್ಯಕ್ತಿಯ ಹಾವ ಭಾವದಿಂದ ನನಗೆ ಅನುಮಾನ ಬಂತು ಎಂದಿದ್ದಾರೆ.

surveen chawla7/9

ನಾನು ನಿರ್ದೇಶಕರಿಗೆ ನನ್ನ ಜೊತೆ ಮಲಗುವ ಆಸೆಯಾಗಿದೆಯಾ ಎಂದು ನೇರವಾಗಿ ಕೇಳಿದೆ. ಆಗ ಆತ ತಲೆಯಾಡಿಸಿದ ಅಷ್ಟೇ ಎಂದು ಸುರ್ವೀನ್ ಚಾವ್ಲಾ ಹೇಳಿದ್ದಾರೆ.

surveen chawla8/9

ನೀವು ತಪ್ಪಾದ ಮನೆಯ ಬಾಗಿಲು ಬಡಿಯುತ್ತಿದ್ದೀರಿ. ಇದಕ್ಕಾಗಿ ನನಗೆ ವಿಷಾದ ಇದೆ. ಕೆಲಸಕ್ಕೋಸ್ಕರ ನಾನು ರಾಜಿಯಾಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದೇ. ಆ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ತಮಿಳು ಚಿತ್ರರಂಗದಲ್ಲಿರುವುದು ಎಂದು ಸುರ್ವೀನ್ ಚಾವ್ಲಾ ಹೇಳಿದ್ದಾರೆ.

surveen chawla9/9

ಸುರ್ವೀನ್ ಚಾವ್ಲಾ ಅವರ ಈ ಹೇಳಿಕೆ ಚಿತ್ರರಂಗದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಆ ನಿರ್ದೇಶಕ ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.