ಮೋಹಕತಾರೆ ರಮ್ಯಾ ನಿಜವಾದ ವಯಸ್ಸೆಷ್ಟು, ಇವರ ತಂದೆ ಯಾರು ಗೊತ್ತೇ!
ನಟಿ ರಮ್ಯಾ ಮೋಹಕತಾರೆ ಎಂದೇ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಪಡೆದಿದ್ದಾರೆ. ಇಂದು ರಮ್ಯಾ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ.
ರಮ್ಯಾ 29 ನವೆಂಬರ್ 1982 ರಂದು ಜನಿಸಿದರು. 42 ವರ್ಷದ ರಮ್ಯಾ ಸದ್ಯ ನಿರ್ಮಾಪಕರಾಗಿ ಮಿಂಚಿದರು. ಪ್ರಾಥಮಿಕ ಶಿಕ್ಷಣವನ್ನು ರಮ್ಯಾ ಊಟಿಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಚೆನ್ನೈನಲ್ಲಿ ಕಂಪ್ಲೀಟ್ ಮಾಡಿದ್ದಾರೆ.
ಸಿನಿರಂಗಕ್ಕೆ ಎಂಟ್ರಿ ಕೊಡುವಾಗ ದಿವ್ಯ ಸ್ಪಂದನ ಹೆಸರನ್ನು ರಮ್ಯಾ ಎಂದು ಬದಲಿಸಿಕೊಂಡರು. ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ಅವರು ರಮ್ಯಾ ಎಂಬ ಹೆಸರನ್ನು ನೀಡಿದ್ದಾರೆ.
ನಟಿ ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಅವರು ಎಸ್.ಎಂ ಕೃಷ್ಣ ಅವರಿಗೆ ಅತ್ಯಾಪ್ತರು. ರಂಜಿತಾ ಬೋರಯ್ಯ ಅವರು ಮಂಡ್ಯ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿದ್ದಾರೆ. ಮಂಡ್ಯ ರಾಜಕೀಯದಲ್ಲಿ ರಂಜಿತಾ ಪ್ರಭಾವಿ ಮಹಿಳೆಯಾಗಿದ್ದಾರೆ.
2003 ರಲ್ಲಿ ಅಪ್ಪು ಸಿನಿಮಾದ ಮೂಲಕ ಹೀರೋಯಿನ್ ಆಗಿ ನಟಿ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ರಮ್ಯಾ ಕನ್ನಡ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ಸಿನಿರಂಗದಲ್ಲಿ ಸ್ಟಾರ್ ನಟಿಯಾಗಿದ್ದ ರಮ್ಯಾ, ಮಂಡ್ಯ ಸಂಸದೆಯಾಗಿದ್ದರು.
ನಟಿ ರಮ್ಯಾ ತಂದೆ ಆರ್.ಟಿ ನಾರಾಯಣ್. ಇವರು ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು ಎಂಬುದು ಗಮನಾರ್ಹವಾಗಿದೆ. 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ನಟಿ ರಮ್ಯಾ ಗುರುತಿಸಿಕೊಂಡವರು.
2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ರಮ್ಯಾ ಸಂಸದೆಯಾಗಿ ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.
ರಮ್ಯಾ ಇದು ವರೆಗೂ ಎಲ್ಲಿಯೂ ತಮ್ಮ ತಂದೆಯ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.