ಜೋಕ್‌ ಅಲ್ಲ, ವ್ಯಕ್ತಿತ್ವ ಗೆಲ್ಲಬೇಕು..! ಗಿಲ್ಲಿ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ನಟಿ ಸಂಗೀತಾ ಶೃಂಗೇರಿ

Written ByKrishna N K
Published: Dec 28, 2025, 06:46 PM IST|Updated: Dec 28, 2025, 06:46 PM IST

Sangeetha Sringeri on Gilli nata : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದ್ದೆ. ಬಹುತೇಕ ಜನರು ಈ ಬಾರಿ ಗಿಲ್ಲಿ ನಟ ಗೆಲ್ಲಬೇಕು ಅಂತ ಹೇಳುತ್ತಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಬಾರಿ ವಿನ್ನರ್‌ ಗಿಲ್ಲಿ ಅಂತ ಅವರ ಅಭಿಮಾನಿಗಳು ಪೋಸ್ಟ್‌ ಸಹ ಹಾಕುತ್ತಿದ್ದಾರೆ. ಇದರ ನಡುವೆ ನಟಿ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ನೀಡಿರುವ ಹೇಳಿಕೆಯೊಂದು ಗಮನ ಸೆಳೆದಿದೆ.

1/5

ಬಿಗ್‌ ಬಾಸ್‌ ಕನ್ನಡ ಜನಪ್ರಿಯ ರಿಯಾಲಿಟಿ ಶೋ. ಅಲ್ಲದೆ, ಕಿರುತೆರೆ ಲೋಕದಲ್ಲಿ ಈ ಶೋ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರಸ್ತುತು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ನಡೆಯುತ್ತಿದೆ. ದೊಡ್ಮನೆಯಲ್ಲಿ, ಅ‍ಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಸ್ಪಂದನಾ, ಮಾಳು, ಧ್ರುವಂತ್‌ ಇದ್ದಾರೆ. ನಿನ್ನೆ ಸೂರಜ್‌ ಎಲಿಮಿನೇಟ್‌ ಆದರು. ಇಂದು ಬಹುಷಃ ಮಾಳು ಇಲ್ಲವೆ ಸ್ಪಂದನಾ ದೊಡ್ಮನೆಯಿಂದ ಹೊರ ಬರಲಿದ್ದಾರೆ.

2/5

ಇದರ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ, ಸಿಂಹಿಣಿ ಅಂತಲೇ ಜನಪ್ರೀಯತೆ ಗಳಿಸಿದ್ದ ನಟಿ ಸಂಗೀತಾ ಶೃಂಗೇರಿ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅಚ್ಚೋ ಎಂಬ ಆಲ್ಬಂ ಸಾಂಗ್‌ ಬಿಡುಗಡೆ ವೇಳೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಿಗ್‌ ಬಾಸ್‌ 12 ರ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.. ಅಸಲಿಗೆ ಹೇಳಿದ್ದಾರೂ ಏನು..? ಬನ್ನಿ ನೋಡೋಣ..

3/5

ನಾನು ಈ ಹಿಂದಿನ ಯಾವುದೇ ಬಿಗ್‌ ಬಾಸ್‌ ಸೀಸನ್‌ಗಳನ್ನು ನೋಡಿರಲಿಲ್ಲ, ನಂದೇ ಸೀಸನ್‌ ಸಹ ನಾನು ನೋಡಿಲ್ಲ, ಬಿಗ್‌ ಬಾಸ್‌ ಸೀಸನ್‌ 12ರ ಕೆಲ ಎಪಿಸೋಡ್‌ ನೋಡಿದ್ದಕ್ಕೆಕ ನನಗೆ ಖುಷಿ ಇದೆ.. ಅದಕ್ಕೆ ಕಾರಣ ಗಿಲ್ಲಿ ನಟ. ಹೌದು.. ನನ್ನ ಅತ್ತಿಗೆ ಅಣ್ಣ ಈ ಶೋ ನೋಡ್ತಾರೆ, ನೋಡಿ ಬಿದ್ದು ಬಿದ್ದು ನಗ್ತೀರುವಾಗ ಏನಿದೆ ಇದರಲ್ಲಿ ಗಮ್ಮತ್ತು ಅಂತ ನೋಡಿದಾಗ ಗಿಲ್ಲಿ ಆಟ ನೋಡಿ ನನಗೂ ನಗು ಬಂತು.. ಆವತ್ತು ರಾತ್ರಿ 12 ಕ್ಕೆ ಸ್ಟೋರಿ ಹಾಕಿದ್ದೆ ಎಂದರು.

4/5

ಅಲ್ಲದೆ, ಗಿಲ್ಲಿ ಬರೀ ಜೋಕ್‌ ಮಾಡ್ತಾರೆ ಅಂತಲ್ಲ, ಅವರು ಯಾವ ರೀತಿ ಸಂದರ್ಭವನ್ನು ಎದುರಿಸುತ್ತಾರೆ ಎನ್ನುವುದು ಇಲ್ಲಿ ಬಹುಮುಖ್ಯ ವಿಚಾರ. ಜನರಿಗೆ ನಾನು ಹೇಳೋದು ಒಂದೆ ಮಾತು, ಪರ್ಸನಾಲಿಟಿ ನೋಟಿ ವೋಟ್‌ ಹಾಕಿ, ಸ್ಪರ್ಧಿಗಳು ಯಾವ ಜಾತಿ, ಶ್ರೀಮಂತರಾ.. ಬಡವರಾ ಎನ್ನುವುದರ ಮೇಲಲ್ಲ. ಏಕೆಂದರೆ ವ್ಯಕ್ತಿತ್ವ ಗೆಲ್ಲಬೇಕು.. ಅಂದಾಗ ಮಾತ್ರ ಅವರು ಮುಂದಿನ ದಿನಗಳಲ್ಲಿ ಮಾದರಿಯಾಗ್ತಾರೆ ಎಂದು ಸಂಗೀತಾ ಅಭಿಪ್ರಾಯ ವ್ಯಕ್ತಪಡಿಸಿದರು.

5/5

ನಿಮ್ಮ ಹಾಗೆ ಗಿಲ್ಲಿ ಆಟವಾಡ್ತೀದಾನೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸಿದ ಸಂಗೀತಾ.. ನನ್ನ ಬಗ್ಗೆ ನನಗೆ ಗೊತ್ತಿರಲ್ಲ, ಅದು ಜನರಿಗೆ ಗೊತ್ತಿರುತ್ತೆ. ಗಿಲ್ಲಿ ನನಗೆ ಕನೆಕ್ಷನ್‌ ಅನಿಸುತ್ತೆ. ಏಕೆಂದರೆ ಅವರು ಎಲ್ಲವನ್ನು ಬಾಯಿಬಿಟ್ಟು ಹೇಳ್ತಾರೆ. ನಮ್ಮ ಸೀಸನ್‌ ಲಿ ಹಾಗೆ ಹೇಳಿದ್ರ ಗಲಾಟೆ ಆಗ್ತಿತ್ತು. ಗಿಲ್ಲಿ ಶೋನಲ್ಲಿ ಜೀವಿಸ್ತಾ ಇದಾರೆ.. ಕಾವ್ಯಾ ಚನ್ನಾಗಿ ಆಡ್ತೀದಾರೆ.. ಎಲ್ಲರಿಗೂ ಒಳ್ಳೆಯದಾಗಲಿ.. ಒಳ್ಳೆಯ ಪರ್ಸಾಲಿಟಿ ಗೆಲ್ಲಲಿ ಎಂದು ನಟಿ ಸಂಗೀತಾ ಶೃಂಗೇರಿ ಆಶೀಸಿದರು.