ಸಚಿನ್‌ ಪುತ್ರಿಗಿದೆ ಆ ಗಂಭೀರ ಆರೋಗ್ಯ ಸಮಸ್ಯೆ..! ಚಿಕ್ಕವಳಿದ್ದಾಗಲೇ ಗೊತ್ತಾಯ್ತು.. ಬದುಕುಳಿಯುವುದು.. ಅಚ್ಚರಿ ವಿಷಯ ಬಹಿರಂಗ

Sara Tendulkar health : ನಾನು ಶಾಲೆಯಲ್ಲಿದ್ದಾಗ, ನನ್ನ ಮುಖದ ಮೇಲೆ ಬಹಳಷ್ಟು ಮೊಡವೆಗಳು ಇದ್ದವು. ಇದರ ಹಿಂದಿನ ಕಾರಣವನ್ನು ತನಿಖೆ ಮಾಡಿದಾಗ, ನನಗೆ ಗಂಭೀರವಾದ ಖಾಯಿಲೆ ಇರುವುದು ಪತ್ತೆಯಾಯಿತು.. ಅಂತ ಕ್ರಿಕೆಟ್‌ ಗಾಡ್‌ ಸಚಿನ್‌ ಪುತ್ರಿ ಸಾರಾ ತೆಂಡೂಲ್ಕರ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಶಾಕ್‌ ಆತಂಕಗೊಂಡಿದ್ದಾರೆ..

1 /5

ಸಾರಾ ತೆಂಡೂಲ್ಕರ್ ಅವರು ತಮಗೆ ಇರುವ ಕಾಯಿಲೆಯನ್ನು ಬಹಿರಂಗಪಡಿಸಿರುವ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾರಾ ಚಿಕ್ಕ ವಯಸ್ಸಿನಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಒಳಗಾಗಿದ್ದಾಗಿ ತಿಳಿಸಿದ್ದಾರೆ.. ಅಸಲಿಗೆ ಸಾರಾಗೆ ಏನಾಗಿತ್ತು.. ಈಗ ಹೇಗಿದ್ದಾರೆ..? ಬನ್ನಿ ತಿಳಿಯೋಣ..

2 /5

ನಾನು 7ನೇ ತರಗತಿ ಓದುತ್ತಿದ್ದಾಗ ನನ್ನ ಮುಖದಲ್ಲಿ ತುಂಬಾ ಮೊಡವೆಗಳಿದ್ದವು. ಏಕೆ ಹೀಗೆ ಆಗುತ್ತಿದೆ ಅಂತ ಪರೀಕ್ಷೆ ಮಾಡಿಸಿದೆ. ಆಗ ನನ್ನ ಅಂಡಾಶಯಗಳಲ್ಲಿ ಚೀಲಗಳು ಇರುವುದು ಪತ್ತೆಯಾಯಿತು. ಚಿಕಿತ್ಸೆ ನೀಡಿದ ವೈದ್ಯರು ಮಧ್ಯಂತರ ಉಪವಾಸ ಮತ್ತು ತೂಕ ತರಬೇತಿಯನ್ನು ಪ್ರಾರಂಭಿಸುವಂತೆ ಶಿಫಾರಸು ಮಾಡಿದರು ಎಂದು ಸಾರಾ ಹೇಳಿಕೊಂಡಿದ್ದಾರೆ. 

3 /5

ಕೂದಲು ಬೆಳವಣಿಗೆ, ಎಣ್ಣೆಯುಕ್ತ ಚರ್ಮ ಮತ್ತು ಪಿಸಿಓಎಸ್ ನಿಂದ ಉಂಟಾದ ಮೊಡವೆಗಳು ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿದವು. ಆರಂಭಿಕ ಹಂತಗಳಲ್ಲಿ ಇದನ್ನೆಲ್ಲಾ ಮರೆಮಾಡಲು ನಾನು ಮೇಕಪ್ ಮಾಡಿಕೊಳ್ಳುತ್ತಿದೆ ಎಂದು ಸಚಿನ್‌ ಪುತ್ರಿ ಬಹಿರಂಗ ಪಡಿಸಿದರು.   

4 /5

ಪಿಸಿಓಎಸ್ ಎಂದರೇನು? : ಅಂಡಾಶಯಗಳಲ್ಲಿ ಪುರುಷ ಹಾರ್ಮೋನುಗಳು ಅಧಿಕವಾಗಿ ಉತ್ಪತ್ತಿಯಾಗುವುದರಿಂದ, ಅಂಡಾಣುಗಳು ಬೆಳೆಯುವುದನ್ನು ನಿಲ್ಲಿಸಿ ಕೋಶಕಗಳಿಂದ ತುಂಬುತ್ತವೆ. ರಾಸಾಯನಿಕ ಅಂಶಗಳು ಮತ್ತು ಇತರ ಹಾರ್ಮೋನುಗಳ ಕಾರ್ಯನಿರ್ವಹಣೆಯಲ್ಲಿನ ಬದಲಾವಣೆಗಳ ಪರಿಣಾಮವಾಗಿ ಪಿಸಿಓಎಸ್ ಸಂಭವಿಸುತ್ತದೆ.  

5 /5

ಲಕ್ಷಣಗಳು : ಪಿಸಿಓಎಸ್ ನ ಆರಂಭಿಕ ಲಕ್ಷಣವೆಂದರೆ ಮುಟ್ಟಿನಲ್ಲಿ ವಿಳಂಬ. ಪಿಸಿಓಎಸ್ ನ ಲಕ್ಷಣಗಳು ರಕ್ತಸ್ರಾವದಲ್ಲಿ ಏರಿಳಿತಗಳು, ಮುಟ್ಟಿನ ದಿನಗಳ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆ, ವಿಳಂಬವಾದ ಮುಟ್ಟು, ಭಾರೀ ರಕ್ತಸ್ರಾವ, ಮುಟ್ಟಿನ ನಿಲುಗಡೆ, ಬೊಜ್ಜು, ಕೂದಲು ಬೆಳವಣಿಗೆ ಮತ್ತು ಮೊಡವೆಗಳನ್ನು ಒಳಗೊಂಡಿವೆ.