30ವರ್ಷಗಳ ಬಳಿಕ ಶನಿ ರಾಹು ಯುತಿಯಿಂದ ಪಿಶಾಚ ಯೋಗ: ಈ ರಾಶಿಯವರಿಗೆ ವೃತ್ತಿ ಜೀವನ ಕುಂಠಿತ, ಪ್ರೀತಿಯಲ್ಲಿ ಕಂಕಟ, ಬಿಟ್ಟೂಬಿಡದೆ ಕಾಡಲಿವೆ ಸಮಸ್ಯೆಗಳು..!

Written ByYashaswini VUpdated byYashaswini V
Published: Mar 14, 2025, 08:58 AM IST|Updated: Mar 18, 2025, 12:58 PM IST

Shani Rahu Yuti: ಕ್ರೂರ, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ಶನಿ ಮತ್ತು ರಾಹು ಶೀಘ್ರದಲ್ಲೇ ಒಟ್ಟುಗೂಡಲಿದ್ದಾರೆ. 

Shani Rahu Yuti Pishach Yoga Prabhav1/6

ಬರೋಬ್ಬರಿ 30ವರ್ಷಗಳ ನಂತರ ಮೀನ ರಾಶಿಯಲ್ಲಿ ಶನಿ ಮತ್ತು ರಾಹು ಒಟ್ಟಿಗೆ ಸೇರಲಿದ್ದಾರೆ. ಇದರಿಂದ ಅಶುಭ ಯೋಗಗಳಲ್ಲಿ ಒಂದಾದ ಪಿಶಾಚ ಯೋಗ ನಿರ್ಮಾಣವಾಗುತ್ತಿದ್ದು, ಮೇ 2025ರವರೆಗೂ ಕೆಲವು ರಾಶಿಯವರ ಬದುಕಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಡೆತಡೆ, ಸಂಕಷ್ಟಗಳು ಹೆಚ್ಚಾಗಲಿವೆ. 

Taurus2/6

ವೃಷಭ ರಾಶಿ:  ಪಿಶಾಚ ಯೋಗವು ಈ ರಾಶಿಯವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ. ಸ್ನೇಹಿತರಿಂದಲೇ ಮೋಸ ಹೋಗುವ ಸಂಭವವಿರುವುದರಿಂದ ಯಾರನ್ನೂ ನಂಬಬೇಡಿ. ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಿ.

Gemini3/6

ಮಿಥುನ ರಾಶಿ:  ಪಿಶಾಚ ಯೋಗದ ಪ್ರಭಾವದಿಂದಾಗಿ ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ.   

Leo4/6

ಸಿಂಹ ರಾಶಿ:  ಶನಿ ರಾಹು ಯುತಿ ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಭಾರೀ ಸಮಸ್ಯೆಗಳನ್ನು ಉಂಟು ಮಾಡಲಿದೆ. ಆರ್ಥಿಕ ಸ್ಥಿತಿಯ ಮೇಲೆ ಇದರ ಪರಿಣಾಮ ಗೋಚರಿಸಲಿದ್ದು ಮನಸ್ಸಿನ ನೆಮ್ಮದಿ ಹಾಳಾಗಲಿದೆ. 

Virgo5/6

ಕನ್ಯಾ ರಾಶಿ:  ಶನಿ ರಾಹು ಸಂಯೋಗದಿಂದ ಈ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಬಿರುಕುಂಟಾಗುವ ಸಂಭವವಿದೆ. ಪ್ರೇಮ ಜೀವನದಲ್ಲಿ ಸಮಸ್ಯೆಗಳು ಸೃಷ್ಟಿಯಾಗಬಹುದು. ವ್ಯವಹಾರದಲ್ಲಿ ನಷ್ಟ ಸಾಧ್ಯತೆ. 

Sagittarius6/6

ಧನು ರಾಶಿ:  ಪಿಶಾಚ ಯೋಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲಿದೆ. ವಿನಾಕಾರಣ ಶತ್ರುತ್ವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ಬರುವ ಘಟನೆಗಳು ನಡೆಯಬಹುದು ಎಚ್ಚರ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.