ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಮತ್ತು ನಕ್ಷತ್ರಗಳ ಸ್ಥಾನಗಳು ಈ ವರ್ಷದ ದೀಪಾವಳಿ ಹಬ್ಬವನ್ನ ವಿಶೇಷವಾಗಿಸಿವೆ. ದೀಪಾವಳಿಯ ಶುಭಮಹೂರ್ತದಲ್ಲಿ 500 ವರ್ಷಗಳ ನಂತರ ಶನಿಗ್ರಹವು ವಕ್ರಿ ಸ್ಥಿತಿಗೆ ಬರಲಿದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, 2025ರ ಅಕ್ಟೋಬರ್ 20ರಂದು ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಪೌರಾಣಿಕ ನಂಬಿಕೆಗಳ ಪಕಾರ, ಭಗವಾನ್ ಶ್ರೀರಾಮನು 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದ ದಿನವಿದು. ಈ ವರ್ಷದ ದೀಪಾವಳಿ ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
Shani Vakri 2025: 500 ವರ್ಷಗಳ ನಂತರ ದೀಪಾವಳಿ ಹಬ್ಬದಲ್ಲಿ ಶನಿ ವಕ್ರಿಯಾಗಲಿದ್ದು, ವಿಶೇಷವಾಗಿ ಮೂರು ರಾಶಿಯ ಜನರಿಗೆ ಬಂಪರ್ ಲಾಟರಿ ಹೊಡೆಯಲಿದೆ. ಗ್ರಹಗಳ ಸಂಚಾರವು ಅನೇಕ ಶುಭ ಮತ್ತು ಅಶುಭ ಸಂಯೋಗಗಳನ್ನ ಸೃಷ್ಟಿಸುತ್ತದೆ. ಅದರಂತೆ ಈ ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ಶನಿಗ್ರಹ ವಕ್ರಿಯಾಗುತ್ತದೆ. ಈ ಅಪರೂಪದ ಘಟನೆಯಿಂದ ಮೂರು ರಾಶಿಗಳಿಗೆ ಅದೃಷ್ಟ ಲಭಿಸಲಿದ್ದು, ಆರ್ಥಿಕವಾಗಿ ಲಾಭವಾಗುವ ಸಾಧ್ಯತೆಗಳಿವೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
1/5ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನ 'ಕರ್ಮಫಲದಾತ' ಎಂದು ಕರೆಯಲಾಗುತ್ತದೆ. ಶನಿ ಪ್ರತಿಯೊಬ್ಬರಿಗೂ ಅವರ ಕರ್ಮಕ್ಕನುಗುಣವಾಗಿ ಫಲ ನೀಡುತ್ತಾನೆ. ಶನಿಗ್ರಹದ ವಕ್ರಿ ಚಲನೆಯು ಅಂದರೆ ಹಿಮ್ಮುಖ ಚಲನೆಯು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಸ್ಥಿತಿಯಲ್ಲಿ ಶನಿಗ್ರಹದ ಚಲನೆಯು ನಿಧಾನವಾಗಿರುತ್ತದೆ. ಇದು ಹಲವು ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಶನಿಗ್ರಹದ ಈ ವಕ್ರಿ ಸ್ಥಿತಿಯಿಂದ ಯಾವ ರಾಶಿಗಳಿಗೆ ಲಾಭವಾಗಲಿದೆ ಎಂಬುದರ ಬಗ್ಗೆ ತಿಳಿಯಿರಿ...
2/5ಮಿಥುನ ರಾಶಿ: ಮಿಥುನ ರಾಶಿಯವರಿಗೆ ಶನಿಯ ವಕ್ರಿ ಅಥವಾ ಶನಿಯ ಹಿಮ್ಮುಖ ಚಲನೆಯು ನಿಮ್ಮ ವೃತ್ತಿಜೀವನ ಮತ್ತು ವ್ಯವಹಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ನಿಮ್ಮ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಉತ್ತಮವಾಗುತ್ತದೆ. ಕುಟುಂಬದಲ್ಲಿ ಗೌರವ ಮತ್ತು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಅಲ್ಲದೆ ಉದ್ಯೋಗದಲ್ಲಿ ಬಡ್ತಿ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಹೊಸ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬಹುದು.
3/5ಮಕರ ರಾಶಿ: ಶನಿಯ ವಕ್ರಿ ಸ್ಥಿತಿಯು ಮಕರ ರಾಶಿಯವರ ವೃತ್ತಿಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಈ ಸಮಯದಲ್ಲಿ, ಆದಾಯದ ಅನೇಕ ಅವಕಾಶಗಳು ದೊರೆಯುತ್ತವೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚುತ್ತದೆ. ಅನಿರೀಕ್ಷಿತ ಧನಲಾಭದ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭಸುದ್ದಿಗಳು ಕೇಳಿಬರುವುದರಿಂದ ಮನಸ್ಸು ಸಂತೋಷವಾಗಿರಲಿದೆ. ವಿದೇಶಕ್ಕೆ ಪ್ರಯಾಣಿಸಲು ಇದು ಉತ್ತಮ ಅವಕಾಶ. ಹೊಸ ಮನೆ, ವಾಹನ ಅಥವಾ ಆಸ್ತಿಯನ್ನ ಖರೀದಿಸುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವ ಸಾಧ್ಯತೆಯಿದೆ.
4/5ಕುಂಭ ರಾಶಿ: ಕುಂಭ ರಾಶಿ ಶನಿಗ್ರಹದ ಸ್ವಂತ ರಾಶಿಯಾಗಿದೆ. ಶನಿ ವಕ್ರಿ ಸ್ಥಿತಿಯಲ್ಲಿರುವಾಗ ಈ ರಾಶಿಯವರಿಗೆ ಉತ್ತಮ ಲಾಭ ದೊರೆಯಲಿದೆ. ಈ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಹೂಡಿಕೆಗೆ ಇದು ಸೂಕ್ತ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಮತ್ತಷ್ಟು ಹೆಚ್ಚುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುತ್ತದೆ. ಶನಿ ಕರ್ಮಫಲದಾತನಾಗಿರುವುದರಿಂದ ನಿಮ್ಮ ಕರ್ಮಗಳ ಫಲವನ್ನ ಇದೇ ಅವಧಿಯಲ್ಲಿ ಪಡೆಯುವಿರಿ. ಆದಾಯದಲ್ಲಿ ಗಣನೀಯ ಹೆಚ್ಚಳದಿಂದ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ಇತರ ಮೂಲಗಳಿಂದಲೂ ಹಣ ಹರಿದು ಬರಲಿದೆ.
5/5(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)