Gray Hair Remedy: ದುಬಾರಿ ಹೇರ್ ಪ್ರಾಡಕ್ಟ್ ಅಲ್ಲ ಊಟಕ್ಕೆ ಬಳಸುವ ಅಕ್ಕಿಯಿಂದಲೂ ಸಹ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
1/6ದುಬಾರಿ ಹೇರ್ ಕಲರ್ ಅಥವಾ ಪ್ರಾಡಕ್ಟ್ ಬಳಕೆಯ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿರುವ ಸಾಮಾಗ್ರಿಗಳನ್ನು ಬಳಸಿಯೇ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
2/6ಮನೆಯಲ್ಲಿರುವ ಅಕ್ಕಿ, ಈರುಳ್ಳಿ, ಕಾಫಿಪುಡಿ ಮತ್ತು ಶಾಂಪೂವನ್ನು ಬಳಸಿ ಬಿಳಿ ಕೂದಲನ್ನು ಸುಲಭವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
3/6ಮೊದಲಿಗೆ 1 ಸ್ಪೂನ್ ಅಕ್ಕಿಗೆ ಮೂರ್ನಾಲ್ಕು ಸ್ಪೂನ್ ನಷ್ಟು ನೀರು ಹಾಕಿ ಅದನ್ನು ಅರ್ಧಗಂಟೆ ನೆನೆಯಲು ಬಿಡಿ.
4/6ಸಣ್ಣ ಗಾತ್ರದ ಈರುಳ್ಳಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಶುದ್ಧವಾದ ಬಟ್ಟೆಯಿಂದ ಅದರ ರಸ ತೆಗೆದುಕೊಳ್ಳಿ. ಅದೇ ರೀತಿ ನೆನೆಸಿಟ್ಟ ಅಕ್ಕಿ ನೀರನ್ನು ಸಹ ಶೋಧಿಸಿಕೊಳ್ಳಿ.
5/6ಮೂರು ಸ್ಪೂನ್ ಅಕ್ಕಿ ನೀರು, ಒಂದೂವರೆ ಸ್ಪೂನ್ ಈರುಳ್ಳಿ ರಸ ಒಟ್ಟಿಗೆ ಹಾಕಿ ಒಂದು ಸ್ಪೂನ್ ಕಾಫಿ ಪುಡಿ ಬೆರೆಸಿ. ಸಣ್ಣ ಗಂಟೂ ಇಲ್ಲದಂತೆ ಮಿಕ್ಸ್ ಮಾಡಿ. ಅರ್ಧದಿಂದ ಮುಕ್ಕಾಲು ಚಮಚ ಶಾಂಪೂ ಬೆರೆಸಿ ಅದನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ನೈಸರ್ಗಿಕ ಹೇರ್ ಕಲರ್ ಅನ್ನು ಕೂದಲಿಗೆ ಅನ್ವಯಿಸಿ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ.
6/6ಅಕ್ಕಿ ನೆನೆಸಿಟ್ಟ ನೀರನ್ನು ಈ ರೀತಿ ಬಳಸುವುದರಿಂದ ಕೆಲವೇ ದಿನಗಳಲ್ಲಿ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಕೂದಲು ಉದ್ದವಾಗಿ ದಷ್ಟಪುಷ್ಟವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.