ಲಂಡನ್‌ನಲ್ಲಿ ಶಾರುಖ್‌ ಖಾನ್‌- ಕಾಜೋಲ್ ಏನ್‌ ಮಾಡುತ್ತಿದ್ದಾರೆ.. ಮತ್ತೆ ಒಂದಾದ್ರಾ ಈ ಕ್ಯೂಟ್‌ ಜೋಡಿ?

ಬರೋಬ್ಬರಿ 30 ವರ್ಷಗಳ ಹಿಂದೆ ಶಾರುಖ್‌ ಖಾನ್‌ ಮತ್ತು ಕಾಜೋಲ್‌ ಅವರ ಲೈಫ್‌ ಟರ್ನಿಂಗ್‌ ಪಾಯಿಂಟ್‌ ಸಿನಿಮಾವೊಂದು ತೆರೆಗೆ ಅಪ್ಪಳಿಸಿತ್ತು. ಇದರಿಂದ ಅವರಿಬ್ಬರು ಎಷ್ಟು ಖ್ಯಾತಿ ಪಡೆದರು ಎಂದರೆ ಈಗಲೂ ಈ ಜೋಡಿ ಬೇರೆ ಬೇರೆಯವರನ್ನು ಮದುವೆಯಾದರೂ ಸ್ಟೇಜ್‌ ಮೇಲೆ ಕಂಡಾಗ ಆ ಕ್ರೇಜ್‌ ಬೇರೆನೇ ಇರುತ್ತದೆ.    

1 /5

ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಹಾಗೂ ಕಾಜೋಲ್‌ ಅವರ ಪ್ರತಿಮೆಯನ್ನು ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆ ಯಾಕೆ ನಿರ್ಮಾಣ ಮಾಡಲಾಗಿದೆ, ಇದನ್ನು ಶಾರುಖ್‌ ಮತ್ತು ಕಾಜೋಲ್‌ ಯಾಕೆ ಅನಾವರಣ ಮಾಡಿದರು ಎನ್ನುವುದರ ಹಿನ್ನೆಲೆ ಈ ಕೆಳಗಿನಂತೆ ಇದೆ. 

2 /5

ಬಾಲಿವುಡ್‌ನ ಸೂಪರ್‌ ಜೋಡಿ ಶಾರುಖ್ ಖಾನ್ ಹಾಗೂ ಬ್ಯೂಟಿ ಕಾಜೋಲ್ ಲಂಡನ್‌ನಲ್ಲಿ ಒಟ್ಟಿಗೆ ಕಾಣಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಇಬ್ಬರು ನಟಿಸಿದ್ದ ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾಗೆ 30 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಲಂಡನ್‌ನ ಲೀಸೆಸ್ಟರ್ ಚೌಕದಲ್ಲಿ 30ನೇ ವಾರ್ಷಿಕೋತ್ಸವದ ನೆನಪಿಗಾಗಿ ಹೊಸ ಪ್ರತಿಮೆನ ಇಬ್ಬರು ಅನಾವರಣಗೊಳಿಸಿದರು.  

3 /5

ಬಾಲಿವುಡ್‌ನ ಆದಿತ್ಯ ಚೋಪ್ರಾ ನಿರ್ದೇಶನ ಹಾಗೂ ಯಶ್‌ ಚೋಪ್ರಾ ನಿರ್ಮಾಣದಲ್ಲಿ ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾ 1995 ಅಕ್ಟೋಬರ್‌ 20 ರಂದು ರಿಲೀಸ್‌ ಮಾಡಲಾಗಿತ್ತು. ಇದು ಇಂದಿಗೂ ಪ್ರೇಮಿಗಳ ಸೂಪರ್‌ ಹಿಟ್‌ ಸಿನಿಮಾ. ಕಾಜೋಲ್‌ ಹಾಗೂ ಶಾರುಖ್‌ ಅವರ ನಟನೆಗೆ ಇಡೀ ಭಾರತೀಯ ಚಿತ್ರರಂಗ, ಅಭಿಮಾನಿಗಳು ಮನಸೋತಿದ್ದರು.  

4 /5

ಲಂಡನ್‌ನಲ್ಲಿ ಪ್ರತಿಮೆ ಅನಾವರಣಗೊಳಿಸುತಿದ್ದಂತೆ ಇಬ್ಬರು ಫೋಟೋಗೆ ಪೋಸ್‌ ಕೊಟ್ಟರು. ಇಡೀ ಭಾರತದ ಚಿತ್ರರಂಗದಲ್ಲಿ ಅತ್ಯಂತ ದೀರ್ಘ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಸಿನಿಮಾ ಎಂದರೆ ಅದು ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ. ಶಾರುಖ್‌ಖಾನ್‌ ಮತ್ತು ಕಾಜೋಲ್‌ ಇಬ್ಬರು ಎಲ್ಲಿಯೇ ಕಾಣಿಸಿದರೂ ಮೊದಲೂ ಇದೇ ಮೂವಿಯಿಂದಲೇ ಗುರುತಿಸುತ್ತಾರೆ.    

5 /5

ಶಾರುಖ್‌ ಖಾನ್‌ ಮತ್ತು ಕಾಜೋಲ್‌ ಈ ಜೋಡಿ ಯಾವ ಕಾರ್ಯಕ್ರಮದಲ್ಲಾದರೂ ವೇದಿಕೆ ಹತ್ತಿದರೆ ಸಾಕು ಅಭಿಮಾನಿಗಳ ಜೋರು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಇಬ್ಬರೂ ನಟಿಸಿರುವ ಹಲವಾರು ಸಿನಿಮಾಗಳು ಬಾಲಿವುಡ್‌ನಲ್ಲಿ ಇಂದಿಗೂ ಮನೆ ಮಾತಾಗಿವೆ. ಅಲ್ಲದೇ ಆಗಿನ ಸಮಯಕ್ಕೆ ಹಣ ಗಳಿಕೆಯಲ್ಲೂ ಇವರ ಸಿನಿಮಾಗಳೇ ಟಾಪ್‌ನಲ್ಲಿ ಇರುತ್ತಿದ್ದವು.