ಶನಿ ಮಹಾತ್ಮನ ಕೃಪೆಯಿಂದಲೇ ಹೊಸ ವರ್ಷದಲ್ಲಿ ರಾಜರ ರೀತಿ ಜೀವನ ನಡೆಸುವ ರಾಶಿಗಳಿವು ! ಇನ್ನು ಎರಡೂವರೆ ವರ್ಷ ಇವರದ್ದು ರಾಜ ವೈಭೋಗ

Fri, 13 Dec 2024-10:54 am,

ಮಾರ್ಚ್‌ನಲ್ಲಿ ಶನಿಯ ಸಂಕ್ರಮಣದ ಪರಿಣಾಮ ಎಲ್ಲಾ ರಾಶಿಯವರ ಜೀವನದ ಮೇಲೂ  ಕಂಡುಬರುತ್ತದೆ. ಆದರೆ ಕೆಲವು ರಾಶಿಯವರ ಮೇಲೆ ಶನಿದೇವರ ಕೃಪಾ ಕಟಾಕ್ಷ ಹೆಚ್ಚೇ ಇರುತ್ತದೆ. ಅವರ ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.  

ಮೇಷ ರಾಶಿ : ನಿಮ್ಮ ಜೀವನದಲ್ಲಿ ಅನೇಕ ಉತ್ತಮ ತಿರುವುಗಳನ್ನು ತರುತ್ತದೆ. ಜೀವನದಲ್ಲಿ ಅನೇಕ ಶುಭ ಘಟನೆಗಳು ನಡೆಯುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ.  

ಕರ್ಕಾಟಕ ರಾಶಿ: ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ಸಿಗುವುದು. ವೇತನ ಹೆಚ್ಚಳವಾಗಿ ಬಡ್ತಿ ಸಿಗುವುದು. ಸಮಾಜದಲ್ಲಿ ಗೌರವ  ಹೆಚ್ಚಾಗುವುದು.  

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ 2025ರ ವರ್ಷವು ಉತ್ತಮ ಫಲಿತಾಂಶಗಳನ್ನು ತರುತ್ತದೆ. 2025 ರಲ್ಲಿ ಶನಿಯ ಸಂಚಾರವು ಹೆಚ್ಚು  ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.   

ಕುಂಭ ರಾಶಿ : ಶನಿ ಸಂಕ್ರಮದ ಪ್ರಭಾವದಿಂದ ಕುಂಭ ರಾಶಿಯವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಇಡೀ ವರ್ಷ ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಹಳ ದಿನಗಳಿಂದ ನಡೆಯದೇ ಇದ್ದ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯುವುದು. 2025 ಕುಂಭ ರಾಶಿಯವರಿಗೆ ಸಂತೋಷ ಹೆಚ್ಚಿಸುವ ವರ್ಷವಾಗುವುದು. 

ಮೀನ ರಾಶಿ : ದೈಹಿಕ ಆರೋಗ್ಯ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು. ಕೆಲಸದ ಸ್ಥಳದಲ್ಲಿ ಉತ್ತಮ ಪ್ರಗತಿಯಾಗುವುದು. ಮಕ್ಕಳ ಮೂಲಕ ಒಳ್ಳೆಯ ಸುದ್ದಿ  ಸಿಗುವುದು. 

ಶನಿ ದೇವರು ನಮ್ಮ ಕಾರ್ಯಗಳಿಗೆ ಅನುಗುಣವಾಗಿ ನಮಗೆ ಪ್ರತಿಫಲ ನೀಡುವ ನ್ಯಾಯದ ದೇವರು.  ಶನಿದೇವ ಬಡವರಿಗೆ ಅನ್ನ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಿ ಸಹಾಯ ಮಾಡುವ ಜನರಿಗೆ ಎಂದಿಗೂ ಕಷ್ಟ ನೀಡುವುದಿಲ್ಲ. 

ಏಳೂವರೆ ಶನಿಯ ಪ್ರಭಾವವನ್ನು ಕಡಿಮೆ ಮಾಡಿ ಶನಿದೇವನ ಕೃಪೆಗೆ ಪಾತ್ರರಾಗಲು 'ನೀಲಾಂಜನ ಸಮಬಾಸಂ, ರವಿಪುತ್ರಂ ಯಮಗ್ರಜಂ; ಛಾಯಾ ಮಾರ್ತಾಂಡ ಸಂಭೂತಂ, ತಂ ನಮಾಮಿ  ಶನೈಚರಂ' ಎಂದು ಪ್ರತಿನಿತ್ಯ ಜಪಿಸಬಹುದು. 

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link