30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗ
ಪ್ರಸ್ತುತ ಶನಿ ಮಹಾತ್ಮ ತನ್ನ ಮೂಲ ತ್ರಿಕೋನ ರಾಶಿಚಕ್ರ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದು, ಹೊಸ ವರ್ಷದ ಆರಂಭದಲ್ಲೇ ವೃತ್ತಿ-ವ್ಯವಹಾರ, ತಾರ್ಕಿಕ, ಬುದ್ದಿ ಅಂಶವಾದ ಬುಧ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಬುಧರ ಸಂಯೋಗವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಮೇಷ ರಾಶಿ: ಶನಿ-ಬುಧರ ಯುತಿಯು ಈ ರಾಶಿಯವರಿಗೆ ಹೊಸ ವರ್ಷದಲ್ಲಿ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಹೂಡಿಕೆಗಳಿಂದ ಬಂಪರ್ ಲಾಭವಾಗಲಿದೆ. ವಿವಾಹಿತರಿಗೆ ಸಂಸಾರ ಸುಖ ಹೆಚ್ಚಾಗಲಿದ್ದು, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.
ಮಕರ ರಾಶಿ: ಶನಿ-ಬುಧ ಸಂಯೋಗದಿಂದ ಈ ರಾಶಿಯವರಿಗೆ ಜೀವನದ ಸರ್ವ ಸುಖವೂ ಪ್ರಾಪ್ತಿಯಾಗಲಿದೆ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಿ ಸಂಬಂಧಗಳು ಬಲಗೊಳ್ಳಲಿವೆ. ವೃತ್ತಿ ಬದುಕಿನಲ್ಲೂ ಸಮಯ ತುಂಬಾ ಅತ್ಯುತ್ತಮವಾಗಿದ್ದು ದೊಡ್ಡ ಆರ್ಡರ್ ದೊರೆಯಬಹುದು.
ಕುಂಭ ರಾಶಿ: ಶನಿ ಬುಧರು ಒಟ್ಟಿಗೆ ಕೂಡುವುದರಿಂದ ಈ ರಾಶಿಯವರಿಗೆ 2025ರಲ್ಲಿ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಭಾರೀ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆಯೂ ಇದ್ದು ಮಹಾಲಕ್ಷ್ಮೀ ಕೃಪೆಯಿಂದ ಸಂಪತ್ತು ನಿಮ್ಮನ್ನು ಅರಸಿ ಬರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.