ಶನಿ ಮಹಾದಶ: 2026 ಆರಂಭವಾಗುತ್ತಿದ್ದಂತೆ 3 ರಾಶಿಯವರ ಬಾಳಲ್ಲಿ ಸುವರ್ಣ ಸಮಯ, ಕಷ್ಟನೀಡುವಾತನಿಂದಲೇ ಸಂಪತ್ತಿನ ಸುಧೆ

Written ByYashaswini V
Published: Nov 04, 2025, 07:00 AM IST|Updated: Nov 04, 2025, 07:00 AM IST

Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮಹಾತ್ಮನನ್ನು ಕರ್ಮಫಲದಾತ, ಜನರು ಮಾಡುವ ಒಳ್ಳೆಯ ಮತ್ತು ಕೆಟ್ಟ ಫಲಗಳಿಗೆ ತಕ್ಕಂತೆ ಫಲ ನೀಡುವ ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಹೊಸ ವರ್ಷದಲ್ಲಿ ಶನಿ ದೇವನಿಂದಲೇ ಕೆಲವರ ಬಾಳು ಬಂಗಾರವಾಗಲಿದೆ. 

Shani Gochar 2026 Effect: 2026ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷದಲ್ಲಿ ಶನಿ ಮಹಾತ್ಮ ಕೆಲವರ ಬದುಕಿನಲ್ಲಿ ಅದೃಷ್ಟದ ಸಮಯವನ್ನು ಹೊತ್ತು ತರಲಿದ್ದು ಅಪಾರ ಸಂಪತ್ತಿನ ಸುಧೆಯನ್ನೇ ಹರಿಸಲಿದ್ದಾನೆ ಎನ್ನಲಾಗುತ್ತಿದೆ. 

Shani Gochar 2026 Effect1/6

ಶನಿ ಗೋಚಾರ

ವೈದಿಕ ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಶನಿ ಮಹಾತ್ಮ ಮಕರ ಸಂಕ್ರಮಣ ಆಗುತ್ತಿದ್ದಂತೆ ನಕ್ಷತ್ರ ಪುಂಜವನ್ನು ಬದಲಾಯಿಸಲಿರುವ ಶನಿ ಮಹಾತ್ಮ ಜನವರಿ 20, 2026ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. 

Shani Gochar 2026 Effect2/6

ಸ್ವ ನಕ್ಷತ್ರದಲ್ಲಿ ಶನಿ

ಉತ್ತರ ಭಾದ್ರಪದ ನಕ್ಷತ್ರದ ಅಧಿಪತಿಯೇ ಆಗಿರುವ ಶನಿ ಸ್ವ ನಕ್ಷತ್ರ ಪುಂಜದಲ್ಲಿ ಸಾಗಿ 17 ಮೇ 2026ರವರೆಗೂ ಅಲ್ಲಿಯೇ ವಿರಾಜಮಾನನಾಗಲಿದ್ದಾನೆ. 

Shani Gochar 2026 Effect3/6

ಶನಿ ಗೋಚಾರ ಫಲ

ಉತ್ತರ ಭಾದ್ರಪದ ನಕ್ಷತ್ರದಲ್ಲಿ ಶನಿ ಗೋಚಾರದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದು ಮೂರು ರಾಶಿಯವರಿಗೆ ಸುವರ್ಣ ಸಮಯವಾಗಿದ್ದು ಈ ವೇಳೆ ಕಷ್ಟ ಕೊಡುವಾತನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸುವರು ಎನ್ನಲಾಗುತ್ತದೆ. 

Shani Gochar 2026 Effect4/6

ವೃಷಭ ರಾಶಿ

ಉತ್ತರ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರವು ಈ ರಾಶಿಯವರಿಗೆ ಅಷ್ಟ ದಿಕ್ಕುಗಳಿಂದಲೂ ಶುಭ ಫಲಗಳನ್ನು ನೀಡಲಿದೆ. ಈ ವೇಳೆ ನಿಮ್ಮ ಬಹುಕಾಲದ ಕನಸೊಂದು ನನಸಾಗಲಿದೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಜೀವನದಲ್ಲಿ ಸುಖ ಸೌಕರ್ಯಗಳು ವೃದ್ಧಿಯಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಕುಟುಂಬಸ್ಥರೊಂದಿಗೆ ಸ್ಮರಣೀಯ ಕ್ಷಣಗಳನ್ನು ಆನಂದಿಸುವಿರಿ. 

Shani Gochar 2026 Effect5/6

ಮಿಥುನ ರಾಶಿ

ಶನಿ ಸಂಚಾರವು 2026ರಲ್ಲಿ ಈ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವೃತ್ತಿಪರರಿಗೆ ಪ್ರಮೋಷನ್ ಜೊತೆಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವ್ಯವಹಾರದಲ್ಲಿ ಅದೃಷ್ಟ ಖುಲಾಯಿಸಲಿದ್ದು ಆದಾಯದ ಹರಿವು ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ.   

Shani Gochar 2026 Effect6/6

ಮೀನ ರಾಶಿ

ಶನಿ ನಕ್ಷತ್ರ ಪರಿವರ್ತನೆಯಿಂದ ಈ ರಾಶಿಯವರ ಜೀವನದಲ್ಲಿ ಅಷ್ಟ ದಿಕ್ಕುಗಳಿಂದಲೂ ಶುಭ ಫಲಗಳನ್ನು ನೀಡಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದ್ದು, ವಿವಾಹಿತರ ಬದುಕಿನಲ್ಲಿ ಮಕ್ಕಳಿಂದ ಸಂತಸದ ಹೊನಲು ಹರಿಯಲಿದೆ. ಶನಿ ಮಹಾದಶ ಪ್ರಭಾವದಿಂದ ಆರ್ಥಿಕ ದೃಷ್ಟಿಯಿಂದಲೂ ಅದೃಷ್ಟದ ಸಮಯ ಇದಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.