shani dasha effects: ಶನಿ ದೆಸೆಯಿಂದಾಗಿ ಕೆಲವು ರಾಶಿಗಳ ಜನರಿಗೆ ವಿಶೇಷ ಅನುಕೂಲಗಳು ಇರಲಿವೆ. ಕಷ್ಟಗಳೆಲ್ಲಾ ಮಾಯವಾಗಿ ಸಕಲೈಶ್ವರ್ಯ ಪ್ರಾಪ್ತಿಯಾಗುತ್ತದೆ.
Shani Mahadasha effects: ಶನಿ ಮಹಾದಶ ಸಮಯದಲ್ಲಿ ವ್ಯಕ್ತಿಯು ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುತ್ತಾನೆ. ಹಣಕಾಸಿನ ಲಾಭಗಳನ್ನು ಪಡೆಯುವರು. ಇದು ಕೆಲವು ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ.
ಶನಿ ದೇವನು ಕರ್ಮಕ್ಕೆ ಅನುಗುಣವಾಗಿ ಫಲವನ್ನು ನೀಡುವ ಗ್ರಹವಾಗಿದ್ದಾನೆ. ಶನಿ ದಶಾ ಕಾಲದಲ್ಲಿ ವ್ಯಕ್ತಿಯು ಅದೃಷ್ಟದ ಬಲದಿಂದ ಪ್ರತಿ ಕಾರ್ಯದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ.
ಶನಿ ಮಹಾದೆಸೆಯ ಸಮಯದಲ್ಲಿ ಪ್ರತಿಷ್ಠೆ ಹೆಚ್ಚುವುದು. ಚಿನ್ನದ ಆಭರಣಗಳು, ಮನೆ, ವಾಹನ ಖರೀದಿ ಯೋಗ ಹೊಂದಿರುತ್ತೀರಿ. ವೃತ್ತಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ ಹೀಗೆ ಹಲವಾರ ಲಾಭ ಪಡೆಯುವರು.
ವೃಶ್ಚಿಕ ರಾಶಿ - ಭಾರೀ ಆರ್ಥಿಕ ಲಾಭವನ್ನು ಪಡೆಯುವಿರಿ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ವಿದೇಶ ಪ್ರಯಾಣ ಮಾಡುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ.
ಮಕರ ರಾಶಿ - ಹೊಸ ವ್ಯವಹಾರಕ್ಕೆ ಕೈ ಹಾಕುವಿರಿ. ಹಣದ ಲಾಭ ಪಡೆಯುವಿರಿ. ಕೌಟುಂಬಿಕ ಸೌಖ್ಯ ಪ್ರಾಪ್ತಿ ಆಗುವುದು. ಬಯಸಿದ ಉದ್ಯೋಗ ಪಡೆಯಬಹುದು. ಸಂಪತ್ತು ದುಪ್ಪಟ್ಟಾಗಲಿದೆ.
ಕರ್ಕಾಟಕ ರಾಶಿ - ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯುವ ಸಮಯ. ಅದೃಷ್ಟ ಸದಾ ನಿಮ್ಮ ಜೊತೆಗಿರಲಿದೆ.
ಕುಂಭ ರಾಶಿ - ಕಷ್ಟಪಟ್ಟು ಕೆಲಸ ಮಾಡುವವರು ಉತ್ತಮ ಲಾಭ ಪಡೆಯುತ್ತಾರೆ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಸಮೃದ್ಧಿ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.