Venus and Mars conjunction: ಶುಕ್ರ ಮತ್ತು ಮಂಗಳ ಗ್ರಹಗಳು ಮಾರ್ಚ್ 12ರಂದು ಶತಂಕ ಯೋಗವನ್ನು ರೂಪಿಸುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಸಕಾರಾತ್ಮಕವಾಗಿರುತ್ತದೆ.
Shatanka Yoga 2025: ಈ ವರ್ಷ ರಂಗು ರಂಗಿನ ಹೋಳಿ ಹಬ್ಬವನ್ನು ಮಾರ್ಚ್ 14ರಂದು ಆಚರಿಸಲಾಗುವುದು, ಆದರೆ ಹೋಳಿಕಾ ದಹನ ಮಾರ್ಚ್ 13ರಂದು ನಡೆಯಲಿದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಮಾರ್ಚ್ 12ರಂದು ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗವಾಗಲಿದೆ. ಇದರಿಂದ ಬಹಳ ಶುಭ ಯೋಗ ರೂಪುಗೊಳ್ಳುತ್ತಿದೆ. ಇದನ್ನು ಶತಂಕ ಯೋಗ ಎಂದು ಕರೆಯಲಾಗುತ್ತದೆ. ಇದು ಶುಭ ಯೋಗವಾಗಿದ್ದು, ಎರಡು ಗ್ರಹಗಳು ಪರಸ್ಪರ 100 ಡಿಗ್ರಿ ದೂರದಲ್ಲಿದ್ದಾಗ ಇದು ರೂಪುಗೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶುಕ್ರನು ಸಂಪತ್ತು, ಐಷಾರಾಮಿ, ಪ್ರೀತಿ, ಕಲೆ ಅಂಶವಾಗಿದ್ದರೆ, ಮಂಗಳನು ಧೈರ್ಯ, ಶೌರ್ಯ, ಶಕ್ತಿ, ಆಸ್ತಿ ಇತ್ಯಾದಿಗಳನ್ನು ನೀಡುವ ಗ್ರಹವಾಗಿದೆ. ಈ ಎರಡು ಗ್ರಹಗಳು ಮಾರ್ಚ್ 12ರಂದು ಶತಂಕ ಯೋಗವನ್ನು ರೂಪಿಸುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಸಕಾರಾತ್ಮಕವಾಗಿರುತ್ತದೆ. ವಿಶೇಷವಾಗಿ ಇದರಿಂದ 3 ರಾಶಿಯ ಜನರಿಗೆ ಅದೃಷ್ಟ, ಆರ್ಥಿಕ ಪ್ರಗತಿ, ಸಂತೋಷ, ಸಮೃದ್ಧಿ ಮತ್ತು ಹೊಸ ಯಶಸ್ಸಿನ ಬಾಗಿಲು ತೆರೆದುಕೊಳ್ಳಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಮೇಷ ರಾಶಿಯವರಿಗೆ ಈ ಸಮಯವು ಕೆಲಸದ ಸ್ಥಳದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ತರುತ್ತದೆ. ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗ ನಿಮ್ಮ ಕೆಲಸದ ಸ್ಥಳದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ಯೋಜನೆಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕೆಲಸಕ್ಕೆ ಅಪಾರ ಮೆಚ್ಚುಗೆ ದೊರೆಯುತ್ತದೆ. ಗ್ರಹ ಸಂಯೋಜನೆಯಿಂದ ನೀವು ಹಠಾತ್ ಆರ್ಥಿಕ ಲಾಭ ಪಡೆಯುತ್ತೀರಿ. ಹೂಡಿಕೆಯ ವಿಷಯದಲ್ಲೂ ಈ ಸಮಯ ಶುಭವಾಗಿದೆ. ಲಾಭದಾಯಕ ವ್ಯವಹಾರಗಳಿಗೆ ನೀವು ಅವಕಾಶಗಳನ್ನ ಪಡೆಯುತ್ತೀರಿ. ಶುಕ್ರನ ಪ್ರಭಾವದಿಂದ ನಿಮ್ಮ ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಕುಟುಂಬ ಜೀವನವೂ ಸಂತೋಷವಾಗಿರುತ್ತದೆ ಮತ್ತು ಪ್ರೀತಿಯ ಸಂಬಂಧಗಳು ಸುಧಾರಿಸುತ್ತವೆ.
ಸಿಂಹ ರಾಶಿಯ ಜನರಿಗೆ ಈ ಸಮಯವು ಅಪಾರ ಸಂಪತ್ತು ಗಳಿಸಲು ಅನುಕೂಲಕರವಾಗಿದೆ. ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆಯು ನಿಮ್ಮ ಆರ್ಥಿಕ ಸ್ಥಿತಿಯನ್ನ ಮತ್ತಷ್ಟು ಬಲಪಡಿಸುತ್ತದೆ. ನಿಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಸಂಬಳ ಹೆಚ್ಚಳ, ಬೋನಸ್ ಸಿಗಬಹುದು. ಮಂಗಳ ಗ್ರಹದ ಪ್ರಭಾವದಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತದೆ. ನೀವು ಯಾವುದೇ ಸವಾಲನ್ನು ಎದುರಿಸಲು ಸಿದ್ಧರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ನಿರ್ಧಾರಗಳು ಸರಿಯಾಗಿರುತ್ತವೆ. ಶುಕ್ರನ ಪ್ರಭಾವದಿಂದ ನಿಮ್ಮ ಸಾಮಾಜಿಕ ಪ್ರತಿಷ್ಠೆ ಸಹ ಹೆಚ್ಚಾಗುತ್ತದೆ. ನಿಮ್ಮ ಕೆಲಸಕ್ಕೆ ಅಪಾರ ಮೆಚ್ಚುಗೆ ದೊರೆಯುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಮತ್ತು ಪ್ರತಿಷ್ಠೆ ಸಿಗಲಿದೆ.
ಈ ಸಮಯವು ಧನು ರಾಶಿಯ ಜನರಿಗೆ ವ್ಯವಹಾರದಲ್ಲಿ ತುಂಬಾ ಪ್ರಯೋಜನಕಾರಿ. ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗ ನಿಮ್ಮ ವ್ಯವಹಾರನ್ನ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ವ್ಯವಹಾರ ಸಂಬಂಧಗಳು ರೂಪುಗೊಳ್ಳುತ್ತವೆ. ನೀವು ವಿದ್ಯಾರ್ಥಿಯಾಗಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಶುಕ್ರನ ಪ್ರಭಾವದಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ನೀವು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯುತ್ತೀರಿ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)