ಬಂಗಾರ ಪ್ರಿಯರಿಗೆ ಶಾಕ್: ಮತ್ತೆ ಚಿನ್ನದ ಬೆಲೆ ಗಗನಕ್ಕೆ...

Written ByYashaswini VUpdated byYashaswini V
Published: Jun 17, 2025, 10:27 AM IST|Updated: Jun 17, 2025, 10:27 AM IST

Gold: ಇತ್ತೀಚಿನ ದಿನಗಳಲ್ಲಿ ಇಳಿಮುಖ ಕಂಡಿದ್ದ ಚಿನ್ನ ಮತ್ತೆ ಆಗಸ ಮುಟ್ಟುವ ನಿರೀಕ್ಷೆಯಿದೆ. 

Gold Price Hike1/5

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ವಿಶ್ವದಾದ್ಯಂತ ಚಿನ್ನದ ಬೆಲೆ ಮತ್ತೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. 

Gold Price Hike2/5

ಒಂದೇ ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 300 ರೂ. ಏರಿಕೆ ಕಂಡಿದೆ. ಪ್ರತಿ ಗ್ರಾಂಗೆ 10 ಸಾವಿರ ರೂಪಾಯಿ ಇದ್ದ 24 ಕ್ಯಾರಟ್​ ಗೋಲ್ಡ್ ಈಗ 10,300 ರೂಪಾಯಿಗೆ ಏರಿಕೆ ಆಗಿದೆ.  ಅದೇ ರೀತಿ, ಪ್ರತಿ ಗ್ರಾಂಗೆ  9050 ರೂಪಾಯಿ ಇದ್ದ 22 ಕ್ಯಾರಟ್​ ಇದೀಗ 9350 ರೂಪಾಯಿ ಗೆ ಏರಿಕೆಯಾಡಿದೆ. 

Gold Price Hike3/5

ಆರ್ಥಿಕ ತಜ್ಞರ ಪ್ರಕಾರ, ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಇದೇ ರೀತಿ ಮುಂದುವರೆದರೆ, ಮುಂದಿನ 6 ತಿಂಗಳಲ್ಲಿ ಬಂಗಾರದ ಬೆಲೆ 12 ರಿಂದ 13 ಸಾವಿರಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

Gold Price Hike4/5

ಇಸ್ರೇಲ್ ಮತ್ತು ಇರಾನ್ ಯುದ್ಧದ ಹೊರತಾಗಿ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಭೌಗೋಳಿಕ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆ ಒಂದೆಡೆಯಾದರೆ, ಜೂನ್ 18ರಂದು ನಡೆಯಲಿರುವ ಯುಎಸ್ ಫೆಡ್ ನೀತಿ ಸಭೆ ಬಳಿಕ ಚಿನ್ನದ ದರ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. 

Gold Price Hike5/5

ಯುಎಸ್ ಸುಂಕ ನೀತಿ ಪರಿಣಾಮದಿಂದಾಗಿ ಎದುರಾಗಿರುವ ನಿರಂತರ ಅನಿಶ್ಚಿತತೆಯಿಂದಾಗಿ ಜೂನ್ 18 ರಂದು ನಡೆಯಲಿರುವ ಸಭೆಯಲ್ಲಿ ಫೆಡ್ ದರಗಳನ್ನು ಕಡಿತಗೊಳಿಸದಿರಬಹುದು. ಜೊತೆಗೆ ಇದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಪ್ರಚೋದಕವಾಗಿಯೂ ಇರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.