Shukra Dese: ಇನ್ನೆರಡು ದಿನಗಳಲ್ಲಿ ನವೆಂಬರ್ 16ರಂದು ಶುಕ್ರ ತನ್ನದೇ ಆದ ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಧನಕಾರಕ ಏಕಾಂಗಿಯಾಗಿರಲಿದ್ದು ಶುಭ ಮಾಲವ್ಯ ರಾಜಯೋಗ ಸೃಷ್ಟಿಯಾಗಲಿದೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಆರು ರಾಶಿಯವರಿಗೆ ಈ ಸಮಯವು ಸುವರ್ಣ ಯುಗವೆಂದು ಸಾಬೀತುಪಡಿಸಲಿದೆ. ಅವರ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಿ ಕುಬೇರನ ಸಂಪತ್ತೇ ಕೈ ಸೇರಲಿದೆ. ಯಾವ್ಯಾವ ರಾಶಿಯಾರಿಗೆ ಶುಕ್ರ ಮಹಾದಶ, ಯಾರಿಗೆ ರಾಜಯೋಗ ಎಂದು ತಿಳಿಯೋಣ.
1/6ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ಮಾಲವ್ಯ ಮಹಾ ಪುರುಷ ರಾಜಯೋಗವು ಈ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ, ಗೌರವವನ್ನು ಹೆಚ್ಚಿಸಲಿದೆ. ವೃತ್ತಿ ಬದುಕಿನಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವರು. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬರಲಿದೆ. ವೈವಾಹಿಕ ಬದುಕಿನಲ್ಲಿ ಆನಂದಮಯ ಸಮಯವಾಗಿದೆ.
2/6ಶುಕ್ರ ದೆಸೆಯಿಂದಾಗಿ ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಕೂಡ ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ಶುಭ ಸಮಾರಂಭಗಳು ಜರುಗುವ ಸಾಧ್ಯತೆ ಇದೆ. ಸ್ವಂತ ಮನೆ, ಐಶಾರಾಮಿ ವಾಹನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಗೋಲ್ಡನ್ ಟೈಮ್ ಅಂತಲೇ ಹೇಳಬಹುದು.
3/6ಮಾಲವ್ಯ ರಾಜಯೋಗದ ಪ್ರಭಾವದಿಂದ ಈ ರಾಶಿಯವರಿಗೆ ಸಂಪತ್ತು ಮತ್ತು ಸಮೃದ್ಧಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಸಲಹೆ ಸೂಚನೆಗಳನ್ನು ಅನುಸರಿಸುವುದು ಅಧಿಕ ಲಾಭ ನೀಡಲಿದೆ. ವ್ಯವಹಾರದಲ್ಲಿ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ.
4/6ಸ್ವ ರಾಶಿಯಲ್ಲಿ ಶುಕ್ರ ಸಂಚಾರವು ಈ ರಾಶಿಯವರಿಗೆ ವ್ಯಾಪಾರದಲ್ಲಿ ಅಪಾರ ಲಾಭವನ್ನು ನೀಡಲಿದೆ. ವಿದೇಶ ವ್ಯವಹಾರದಿಂದ ಆದಾಯ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಭಾರೀ ಸುಧಾರಣೆ ಕಂಡುಬರಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಉತ್ತಮಗೊಳ್ಳಲಿದೆ. ಮನೆಯಲ್ಲಿ ಮಕ್ಕಳ ಮದುವೆಗೆ ಸಂಬಂಧಿತ ಮಾತುಕತೆಗಳು ಪ್ರಗತಿ ಕಾಣಲಿವೆ.
5/6ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ಮಾಲವ್ಯ ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಅನಿರೀಕ್ಷಿತ ಧನಯೋಗವನ್ನು ನೀಡಲಿದೆ. ವೃತ್ತಿಯಲ್ಲಿ ಪ್ರಮೋಷನ್ ಜೊತೆಗೆ ವೇತನದಲ್ಲಿ ಭಾರೀ ಏರಿಕೆಯನ್ನು ನಿರೀಕ್ಷಿಸಬಹುದು. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಹಿಂದೆ ಮಾಡಿರುವ ಹೂಡಿಕೆಗಳಿಂದ ಆಘಾತ ಧನಪ್ರಾಪ್ತಿಯಾಗಲಿದೆ.
6/6ಶುಕ್ರ ದೆಸೆ, ಮಾಲವ್ಯ ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿಯನ್ನೂ, ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳನ್ನು ನೀಡುತ್ತದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ, ವಿದೇಶ ವ್ಯವಹಾರದಲ್ಲಿರುವವರಿಗೆ ಇದು ಸುವರ್ಣ ಸಮಯ. ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗಲಿದ್ದು ರಾಜವೈಭೋಗದ ಜೀವನವನ್ನು ಅನುಭವಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.